ಭಾರತದ ಬ್ರಹ್ಮಾಸ್ತ್ರದ ಶಕ್ತಿ ಹೆಚ್ಚಿಸಲು ಒಂದಾದ ರಷ್ಯಾ, ಭಾರತ ! ಏನು ಗೊತ್ತಾ?

ಭಾರತದ ಬ್ರಹ್ಮಾಸ್ತ್ರದ ಶಕ್ತಿ ಹೆಚ್ಚಿಸಲು ಒಂದಾದ ರಷ್ಯಾ, ಭಾರತ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತದ ಪ್ರಮುಖ ಕ್ಷಿಪಣಿ ಗಳಲ್ಲಿ ಒಂದಾಗಿರುವ ಬ್ರಹ್ಮೋಸ್ ಕ್ಷಿಪಣಿಗೆ ಇದೀಗ ಮತ್ತಷ್ಟು ಬಲ ತುಂಬಲು ಭಾರತ ಹಾಗೂ ರಷ್ಯಾ ದೇಶಗಳು ಮುಂದಾಗಿವೆ.

ಹೌದು,ನಿಮಗೆಲ್ಲರಿಗೂ ತಿಳಿದಿರುವಂತೆ ಬ್ರಹ್ಮೋಸ್ ಕ್ಷಿಪಣಿಯ ಅಧಿಕೃತ ವ್ಯಾಪ್ತಿ 300 ಕಿಲೋಮೀಟರ್ಗಳು, ಕೆಲವು ಪರೀಕ್ಷೆಗಳಲ್ಲಿ ಬ್ರಹ್ಮೋಸ್ ಕ್ಷಿಪಣಿ 450 ಕಿಲೊಮೀಟರ್ ವ್ಯಾಪ್ತಿಯವರೆಗೆ ಯಶಸ್ವಿಯಾಗಿದೆ. ಆದರೆ ಯುದ್ಧದ ಸಮಯದಲ್ಲಿ ಈ ಕ್ಷಿಪಣಿಯನ್ನು ಬಳಸಬೇಕು ಎಂದರೇ ಟಾರ್ಗೆಟ್ ಗಳಿಗೆ ಬಹು ಹತ್ತಿರವಾಗಿ ಅಂದರೇ 300 ರಿಂದ 450 ಕಿಲೋಮೀಟರ್ ವರೆಗಿನ ವ್ಯಾಪ್ತಿಯಲ್ಲಿ ಹಾರಿಸಬೇಕು. ಇದೀಗ ಇದರ ಬಗ್ಗೆ ಗಮನ ಹರಿಸಿರುವ ಭಾರತ ಹಾಗೂ ರಷ್ಯಾ ದೇಶಗಳು ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿಯನ್ನು ಒಮ್ಮೆಲೆ ಡಬಲ್ ಮಾಡಿ 600 ಕಿಲೋ ಮೀಟರ್ ಗೆ ಹೆಚ್ಚಿಸಲು ನಡೆದಿರುವ ಒಪ್ಪಂದದ ಪ್ರಕಾರ ಕೆಲಸ ಆರಂಭಿಸಲಿವೆ.

ಭಾರತವು ಕಳೆದ ವರ್ಷ ರಷ್ಯಾ ದೇಶದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಎರಡು ದೇಶಗಳ ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯ ಇನ್ನೇನು ಆರಂಭಿಸಲಿವೆ. ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿ ಬ್ರಹ್ಮೋಸ್ ಕ್ಷಿಪಣಿಯು ರಷ್ಯಾ ದೇಶದ ಪಿ-800 ಕ್ಷಿಪಣಿಯ ಟೆಕ್ನಾಲಜಿ ಬಳಸಿದ್ದು ನನ್ನ ಪ್ರಕಾರ ಯಾವುದೇ ಬದಲಾವಣೆ ಇಲ್ಲದೆ ನಾವು ಯಶಸ್ವಿಯಾಗಿ 600 ಕಿಲೋಮೀಟರ್ ಗುರಿಯನ್ನು ತಲುಪಬಹುದು ಆದರೆ ಅದಕ್ಕೂ ಮುನ್ನ ಹಲವಾರು ಪರೀಕ್ಷೆಗಳು ನಡೆಯಬೇಕಿದ್ದು ಈ ನಿಟ್ಟಿನಲ್ಲಿ ಡಿಆರ್ ಡಿಓ ಸಂಸ್ಥೆ ಕಾರ್ಯ ನಿರ್ವಹಿಸಲಿದೆ, ಅಗತ್ಯವಿರುವ ಬದಲಾವಣೆಗಳು ಹಾಗೂ ಪರೀಕ್ಷೆಗಳು ನಡೆದ ನಂತರ ನಾವು ಬಳಸಲು ಆರಂಭಿಸುತ್ತೇವೆ..