ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಸಂಸ್ಥೆ ನಡೆಸಿದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಬ್ಯಾಟ್ಸ್ಮನ್ ವೋಟಿಂಗ್ ನಲ್ಲಿ ಆಯ್ಕೆಯಾದ ಆಟಗಾರ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಐದು ದಿನಗಳ ಹಿಂದೆ ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಸಂಸ್ಥೆಯ ಕ್ರಿಕೆಟ್ ವಿಶ್ಲೇಷಕರು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಎಬಿ ಡಿವಿಲಿಯರ್ಸ್ ಅವರನ್ನು ಐಪಿಎಲ್ ಟೂರ್ನಿಯ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಆಗಿ ಆಯ್ಕೆ ಮಾಡಿದ್ದರು.

ಇದರ ಕುರಿತು ನಾವು ಸುದ್ದಿಯನ್ನು ಕೂಡ ಪ್ರಕಟಣೆ ಮಾಡಿದ್ದೆವು, ಇದೀಗ ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಸಂಸ್ಥೆಯು ಅಭಿಮಾನಿಗಳ ಪ್ರಕಾರ ಐಪಿಎಲ್ ಟೂರ್ನಿಯಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಯಾರು ಎಂಬುದನ್ನು ತಿಳಿದು ಕೊಳ್ಳಲು ಒಂದು ವೋಟಿಂಗ್ ನಡೆಸಲು ಸಿದ್ಧವಾಗಿ ಆನ್ಲೈನ್ ಮೂಲಕ ಮತ ಚಲಾಯಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿ ಕೊಂಡಿತ್ತು.

ಇದೀಗ ಫಲಿತಾಂಶ ಹೊರಬಿದ್ದಿದ್ದು ಅಭಿಮಾನಿಗಳು ಬೆಂಗಳೂರು ರಾಯಲ್ಸ್ ತಂಡದ ಮತ್ತೊಬ್ಬ ಬ್ಯಾಟ್ಸ್ಮನ್ ಆಗಿರುವ ಕಿಂಗ್ ಕೊಹ್ಲಿ ರವರನ್ನು ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಬ್ಯಾಟ್ಸ್ಮನ್ ಆಗಿ ಆಯ್ಕೆ ಮಾಡಿದ್ದಾರೆ. ಹೌದು ಅಭಿಮಾನಿಗಳ ಆಯ್ಕೆಯ ಪ್ರಕಾರ ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಸಂಸ್ಥೆಯು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ ಟೈಟಲನ್ನು ವಿರಾಟ್ ಕೊಹ್ಲಿ ರವರಿಗೆ ಘೋಷಿಸಿದೆ, ಈ ಮೂಲಕ ಕ್ರಿಕೆಟ್ ವಿಶ್ಲೇಷಕರು ಸಾರ್ವಕಾಲಿಕ ಶ್ರೇಷ್ಠ ಎಂದು ಎಬಿ ಡಿವಿಲಿಯರ್ಸ್ ರವರನ್ನು ಆಯ್ಕೆ ಮಾಡಿದರೇ, ಅಭಿಮಾನಿಗಳು ವಿರಾಟ್ ಕೊಹ್ಲಿ ರವರನ್ನು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ ಎಂದಿದ್ದಾರೆ. ಖುಷಿಯ ಸಂಗತಿ ಏನೆಂದರೆ ಈ ಇಬ್ಬರು ಆಟಗಾರರು ಬ್ಯಾಟಿಂಗ್ ಮಾಡುವುದು ನಮ್ಮ ಬೆಂಗಳೂರು ತಂಡದಲ್ಲಿ.

abdcricketIPLKannada NewsKarunaada VaaniRoyal Challengers BengaluruSportsVirat Kohliಐಪಿಎಲ್ಕನ್ನಡ ನ್ಯೂಸ್ಕರುನಾಡ ವಾಣಿಕ್ರಿಕೆಟ್ರಾಯಲ್ ಚಾಲೆಂಜರ್ಸ್ ಬೆಂಗಳೂರುಸ್ಟಾರ್ ಸ್ಪೋರ್ಟ್ಸ್