ವಿಶ್ವ ಕ್ರಿಕೆಟ್ ನಲ್ಲಿಯೇ ಅದ್ಭುತ ಎಸೆತಗಳಲ್ಲಿ ಒಂದಾದ ಮಿಚಲ್ ಸ್ಟಾರ್ಕ್ ರವರ ಎಸೆತ ಹೇಗಿದೆ ಗೊತ್ತಾ? ನೀವೇ ನೋಡಿ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಆಸ್ಟ್ರೇಲಿಯ ತಂಡದ ಮಿಚೆಲ್ ಸ್ಟಾರ್ಕ್ ರವರು ವಿಶ್ವದ ಅತ್ಯುತ್ತಮ ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 244, ಏಕದಿನ ಪಂದ್ಯಗಳಲ್ಲಿ 178 ವಿಕೆಟ್ ಪಡೆದಿರುವ ಸ್ಟ್ಯಾಕ್ ರವರು, ಆಸ್ಟೇಲಿಯಾ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಸಾಮಾನ್ಯವಾಗಿ ಇವರ ಬಾಲ್ ಗಳ ವೇಗ 140 ಕಿಲೋಮೀಟರ್ ಗಿಂತಲೂ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲಾ, ಅದ್ಭುತ ಸ್ವಿಂಗ್ ಮಾಡುತ್ತಾರೆ. ಹೌದು, ತಮ್ಮ ವೇಗದ ಬೌಲಿಂಗ್ ನಲ್ಲಿಯೇ ಅದ್ಭುತ ಔಟ್ಸ್ವಿಂಗ್ ಹಾಗೂ ಇನ್ಸ್ವಿಂಗ್ ಎಸೆತಗಳನ್ನು ಬೌಲಿಂಗ್ ಮಾಡಿ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಟಾಪ್ ಬೌಲರ್ ಗಳಲ್ಲಿ ಒಬ್ಬರಾಗಿ ಗುರುತಿಸಿ ಕೊಂಡಿದ್ದಾರೆ. ಅದರಲ್ಲಿಯೂ ಈ ಕೆಳಗಡೆ ಇರುವ ಅದ್ಭುತ ಔಟ್ಸ್ವಿಂಗ್ ಎಸೆತ ನೋಡಿದರೇ ಖಂಡಿತ ನೀವೇ ಹೇಳುತ್ತೀರಾ ಇದು ಒಂದು ಅದ್ಭುತ ಎಂದು.

ಕಳೆದ ಕೆಲವು ದಿನಗಳ ಹಿಂದೆ ಸೌತ್ ಆಫ್ರಿಕಾ ತಂಡದ ನಡುವೆ ನಡೆಯುತ್ತಿದ್ದ ಟಿ-ಟ್ವೆಂಟಿ ಪಂದ್ಯದಲ್ಲಿ, ಪಂದ್ಯದ ಮೊದಲ ಓವರ್ ನ ಮೂರನೇ ಎಸೆತದಲ್ಲಿ ಈ ರೀತಿ ಬೌಲಿಂಗ್ ಮಾಡುವ ಮೂಲಕ ಸೌತ್ ಆಫ್ರಿಕಾ ತಂಡದ ಆರಂಭಿಕ ಆಟಗಾರ ಡಿ ಕಾಕ್ ರವರನ್ನು ಕ್ಲೀನ್ ಬೋಲ್ಡ್ ಮಾಡಿದ್ದರು. ಅದ್ಭುತ ಎಸೆತಕ್ಕೆ ಕಿಕ್ಕಿರಿದು ತುಂಬಿದ್ದ ಜನರು, ಕಮೆಂಟೇಟರ್ ಗಳು ಹಾಗೂ ಬ್ಯಾಟ್ಸ್ ಮ್ಯಾನ್ ಡಿಕಾಕ್ ರವರು ಒಂದು ಕ್ಷಣ ದಂಗಾಗಿ ನಿಂತಿದ್ದರು.

Post Author: Ravi Yadav