ಚೀನಾಗೆ ಮರ್ಮಾಘಾತ ! ಕುತಂತ್ರಿ ನೀತಿಗೆ ಬ್ರೇಕ್ ಹಾಕಿದ ಸ್ಪೇನ್, ಇಟಲಿ ಹಾಗೂ ಜರ್ಮನಿ ! ಮಾಡಿದ್ದೇನು ಗೊತ್ತಾ?

ಚೀನಾಗೆ ಮರ್ಮಾಘಾತ ! ಕುತಂತ್ರಿ ನೀತಿಗೆ ಬ್ರೇಕ್ ಹಾಕಿದ ಸ್ಪೇನ್, ಇಟಲಿ ಹಾಗೂ ಜರ್ಮನಿ ! ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದಲ್ಲಿ ಕರೋನ ವೈರಸ್ ನಿಂದ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಕುಸಿದಿದೆ. ಕಳೆದ ಕೆಲವು ದಿನಗಳಿಂದ ಇಟಲಿ ಹಾಗೂ ಸ್ಪೇನ್ ದೇಶಗಳ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿತ್ತು, ಆದರೆ ಜರ್ಮನಿ ದೇಶವು ಎಂದಿಗೂ ಆರ್ಥಿಕತೆಯಲ್ಲಿ ಹಿಂದುಳಿದಿರಲಿಲ್ಲ.

ಇದೀಗ ಈ ವೈರಸ್ನ ಪ್ರಭಾವದ ಕಾರಣ ಬಹುತೇಕ ದೇಶಗಳ ಆರ್ಥಿಕತೆ ಕುಸಿದಿರುವ ಸಂದರ್ಭದಲ್ಲಿ ಚೀನಾ ದೇಶವು ಎಂದಿನಂತೆ ತನ್ನ ಬುದ್ದಿಯನ್ನು ತೋರಿಸಲು ಆರಂಭ ಮಾಡಿದೆ. ವಿದೇಶಗಳಿಗೆ ಕಳಪೆ ಗುಣಮಟ್ಟದ ವೈದ್ಯಕೀಯ ಉಪಕರಣಗಳನ್ನು ಕಳುಹಿಸುವುದು, ಆರ್ಥಿಕತೆಯ ನೆಲಕಚ್ಚಿರುವ ದೇಶಗಳಲ್ಲಿ ಇರುವ ಪ್ರಮುಖ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಳ ಮಾಡಿಕೊಂಡು ತನ್ನ ದೇಶದ ಆರ್ಥಿಕತೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವತ್ತ ಚೀನಾ ದೇಶ ಗಮನ ಹರಿಸಿದೆ.

ಈಗಾಗಲೇ ಹಲವಾರು ದೇಶಗಳಲ್ಲಿ ತನ್ನ ಬಂಡವಾಳ ಹೂಡಿಕೆಯನ್ನು ಆರಂಭಿಸಿರುವ ಚೀನಾ ದೇಶವು ಇಟಲಿ, ಸ್ಪೇನ್ ಹಾಗೂ ಜರ್ಮನಿ ಗಳಂತಹ ಯುರೋಪಿಯನ್ ರಾಷ್ಟ್ರಗಳಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿತ್ತು. ಆದರೆ ಕೂಡಲೇ ಚೀನಾ ದೇಶದ ಯೋಜನೆಯನ್ನು ಅರ್ಥ ಮಾಡಿಕೊಂಡಿರುವ ಮೂರು ದೇಶಗಳು ತಮ್ಮ ದೇಶಗಳಲ್ಲಿ ಇತರ ದೇಶಗಳು ಹೂಡಿಕೆ ಮಾಡ ಬಹುದಾದ ಕಾನೂನಾದ FDI ನಿಯಮಗಳನ್ನು ಬಿಗಿಗೊಳಿಸಿದ್ದಾರೆ. ವಿದೇಶಿ ಬಂಡವಾಳ ಮಿತಿಯನ್ನು ಮೂರು ದೇಶಗಳು ಕಡಿಮೆ ಮಾಡಿ ಹಲವಾರು ಕಠಿಣ ನಿಯಮಗಳನ್ನು ಜಾರಿಗೆ ತರುವ ಮೂಲಕ ಚೀನಾ ದೇಶವು ತಮ್ಮ ದೇಶದಲ್ಲಿನ ಪ್ರಮುಖ ವಿಭಾಗಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಲು ಮುಂದಾಗಿವೆ. ಈ ಮೂಲಕ ವಿಶ್ವದ ಈ ಕಠಿಣ ಪರಿಸ್ಥಿತಿಯನ್ನು ಬಂಡವಾಳವನ್ನಾಗಿ ಮಾಡಿಕೊಳ್ಳುವ ಇರಾದೆ ಹೊಂದಿದ್ದ ಚೀನಾ ದೇಶಕ್ಕೆ ಮತ್ತೊಂದು ಶಾಕ್ ಎದುರಾಗಿದೆ