ಮೌಲಾನಾ ಸಾದ್ ಕಂಧಲ್ವಿ ಗೆ ಬಿಗ್ ಶಾಕ್ ನೀಡಿದ ದೆಹಲಿ ಪೊಲೀಸ್ ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಗೃಹ ಸಚಿವಾಲದ ಅಡಿಯಲ್ಲಿ ಕೆಲಸ ನಿರ್ವಹಿಸುವ ದೆಹಲಿ ಪೊಲೀಸರು ನಿನ್ನೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕಠಿಣ ಹೆಜ್ಜೆ ಇಟ್ಟಿದ್ದಾರೆ. ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ದೊಡ್ಡ ಧಾರ್ಮಿಕ ಸಭೆ ಆಯೋಜಿಸಿದ ಕಾರಣಕ್ಕಾಗಿ FIR ದಾಖಲಿಸಿದ ನಂತರ ಪರಾರಿಯಾಗಿದ್ದ ತಬ್ಲಿಘಿ ಜಮಾಅತ್ ಮುಖಂಡ ಮೌಲಾನಾ ಸಾದ್ ಕಂಧಲ್ವಿ ವಿರುದ್ಧ ಮತ್ತೊಂದು ಕಠಿಣ ಕ್ರಮ ಕೈಗೊಂಡಿದ್ದಾರೆ.

ಏಪ್ರಿಲ್ 8 ರಂದು ದೆಹಲಿ ಪೊಲೀಸರು ತಬ್ಲಿಘಿ ಜಮಾಅತ್ ಮುಖಂಡ ಮೌಲಾನಾ ಸಾದ್ ಕಂಧಲ್ವಿ ಅವರನ್ನು ಪತ್ತೆ ಹಚ್ಚಿದ್ದರು. ಆದಾಗ್ಯೂ, ಅವರ ವಕೀಲ ತೌಸೆಫ್ ಖಾನ್, ಸಾದ್ ಸೆಲ್ಫ್ ಕ್ವಾರಂಟೈನ್ ನಲ್ಲಿ ಇದ್ದಾರೆ ಮತ್ತು ಅವರ ಕ್ವಾರಂಟೈನ್ ಅವಧಿ ಮುಗಿದ ನಂತರ ತನಿಖೆಗೆ ಸಹಕರಿಸುತ್ತಾರೆ ಎಂದು ಹೇಳಿದ್ದರು. ಆದರೆ ಅಷ್ಟರಲ್ಲಾಗಲೇ ದೆಹಲಿ ಪೊಲೀಸರು ಯಾವುದಕ್ಕೂ ಕ್ಯಾರೇ ಎನ್ನದೇ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಇದೀಗ ನಡೆದ ಮಹತ್ವದ ಬೆಳವಣಿಗೆಯಲ್ಲಿ ತಬ್ಲಿಘಿ ಜಮಾಅತ್ ಮುಖಂಡ ಮೌಲಾನಾ ಸಾದ್ ಕಂಧಲ್ವಿ ಮತ್ತು ಇತರ 7 ಜನರ ವಿರುದ್ಧ Section 299 ರ (ನ- ರ- ಹ- ತ್ಯೆ) ಆರೋಪದ ಮೇಲೆ ಕಠಿಣ ಐಪಿಸಿ ವಿಭಾಗಗಳ ಪ್ರಕರಣ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ, ತಲೆ ಮರಿಸಿಕೊಂಡಿರುವ ಆರೋಪದ ಅಡಿಯಲ್ಲಿ 2000 ವಿದೇಶಿ ತಬ್ಲಿಘಿ ಗಳ ವಿರುದ್ಧ Lookout ಆದೇಶದ ಹೊರಡಸಿದ್ದು ಎಲ್ಲರನ್ನು ಜೈಲಿಗೆ ಕಳುಹಿಸಲು ದೆಹಲಿ ಪೊಲೀಸರು ಕಠಿಣ ಕ್ರಮದ ಕಾನೂನಿನ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.