ಕೋರೋನ ಇಂದ ಚೀನಾಗೆ ಬಿತ್ತು ಮತ್ತೊಂದು ಬಾರಿ ಗುದ್ದು ! ಜಪಾನ್ ದೇಶ ಮಾಡಲು ಹೊರಟಿರುವುದು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಚೀನಾ ವೈರಸ್ ನಿಂದ ಇದೀಗ ಇಡೀ ವಿಶ್ವ ತಲ್ಲಣಗೊಂಡಿದೆ. ಒಂದು ಕಡೆ ಲಕ್ಷಾಂತರ ಜನರು ಸೋಂಕಿಗೆ ಗುರಿಯಾಗಿದ್ದರೇ, ಮತ್ತೊಂದೆಡೆ ಎಲ್ಲಾ ದೇಶಗಳ ಆರ್ಥಿಕತೆ ನೆಲಕಚ್ಚಿದೆ.

ಮುಳುಗುತ್ತಿದ್ದ ತನ್ನ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಲು ಚೀನಾ ದೇಶ ಈ ಕೆಲಸ ಮಾಡಿದೆ ಎಂದು ಹಲವಾರು ದೇಶಗಳು ಆರೋಪ ಮಾಡಿವೆ‌. ಇದರ ನಡುವೆಯೇ ಹಲವಾರು ದೇಶಗಳು ಚೀನಾ ದೇಶದ ಸಹವಾಸ ಇನ್ನು ನಮಗೆ ಬೇಡ ಎಂದು ಚೀನಾ ದೇಶಕ್ಕೆ ವಿವಿಧ ರೀತಿಯಲ್ಲಿ ಬುದ್ದಿ ಕಲಿಸಲು ಮುಂದಾಗುತ್ತಿವೆ. ಇತ್ತೀಚೆಗಷ್ಟೇ ಬ್ರಿಟನ್ ದೇಶವು ಕೂಡ ಚೀನಾ ಮೂಲದ ಹುವೈ ಕಂಪನಿಯ ಜೊತೆ ನಡೆದಿದ್ದ ಒಪ್ಪಂದವನ್ನು ರದ್ದುಪಡಿಸುತ್ತೇವೆ ಎಂದು ಹೇಳಿದೆ. ಇದೀಗ ಜಪಾನ್ ದೇಶವು ಕೂಡ ಮಹತ್ವದ ಹೆಜ್ಜೆ ಇಟ್ಟಿದ್ದು, ಚೀನಾ ದೇಶದಲ್ಲಿ ಉತ್ಪಾದನೆ ಸೌಲಭ್ಯಗಳನ್ನು ಹೊಂದಿರುವ ಜಪಾನ್ ಮೂಲದ ಯಾವುದೇ ಕಂಪನಿಗಳು ತನ್ನ ಉತ್ಪಾದನಾ ಘಟಕವನ್ನು ಜಪಾನ್ ದೇಶಕ್ಕೆ ವರ್ಗಾಯಿಸುವುದಾದರೆ,

ಹಣ ಸಹಾಯ ಮಾಡುವುದಾಗಿ ಘೋಷಣೆ ಮಾಡಿ, ಇದಕ್ಕಾಗಿ ಎರಡು ಬಿಲಿಯನ್ ಹಣವನ್ನು ಮೀಸಲು ಇಡುವುದಾಗಿ ಘೋಷಣೆ ಮಾಡಿದೆ. ಚೀನಾ ದೇಶದಿಂದ ಜಪಾನ್ ದೇಶಕ್ಕೆ ದಿನನಿತ್ಯ ಕೋಟ್ಯಂತರ ಮೌಲ್ಯದ ವಸ್ತುಗಳು ಆಮದು ಕೊಳ್ಳುತ್ತಿದ್ದೆವು. ಆದರೆ ಈಗ ಎಲ್ಲವೂ ಕೋರೋನ ಇಂದ ನಿಂತು ಹೋಗಿರುವ ಕಾರಣ ಇನ್ನು ಮುಂದೆ ಚೀನಾ ದೇಶದ ಜೊತೆ ಆಮದು ಕಡಿಮೆ ಮಾಡಿಕೊಳ್ಳಲು ಜಪಾನ್ ದೇಶ ಮುಂದಾಗುತ್ತಿದೆ ಎಂದು ಹೇಳಿ ಯಾವುದೇ ಕಂಪನಿಗಳು ಜಪಾನಿಗೆ ವರ್ಗಾಯಿಸಲು ಮುಂದಾದಲ್ಲಿ ಹಣ ಸಹಾಯ ಮಾಡುವುದಾಗಿ ಘೋಷಣೆ ಮಾಡಿದೆ.

Post Author: Ravi Yadav