CM, PM ಪರಿಹಾರ ನಿಧಿಗೆ ದೇಣಿಗೆ ನೀಡಿದ ಬಳಿಕ ವಿಜಯ್ ಪ್ರಕಾಶ್ ರವರು ಆಡಿದ ಮಾತುಗಳಿಗೆ ಪ್ರಶಂಸೆಗಳ ಸುರಿಮಳೆಯನ್ನು ಸುರಿಸಿದ ಜನರು ! ಧೈರ್ಯ ತುಂಬಿ, ಮನವಿ ಮಾಡಿ ಹೇಳಿದ್ದೇನು ಗೊತ್ತಾ?

CM, PM ಪರಿಹಾರ ನಿಧಿಗೆ ದೇಣಿಗೆ ನೀಡಿದ ಬಳಿಕ ವಿಜಯ್ ಪ್ರಕಾಶ್ ಆಡಿದ ಮಾತುಗಳಿಗೆ ಪ್ರಶಂಸೆಗಳ ಸುರಿಮಳೆಯನ್ನು ಸುರಿಸಿದ ಜನರು ! ಧೈರ್ಯ ತುಂಬಿ,ಮನವಿ ಮಾಡಿ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕೋರೋನ ಅಲ್ಲಾ ಅಲ್ಲಾ ನಾವೆಲ್ಲರೂ ಇನ್ನು ಮುಂದೆ ಅದನ್ನು ಚೀನಾ ವೈರಸ್ ಎಂದು ಕರೆಯೋಣ. ಈ ಚೀನಾ ವೈರಸ್ ತಡೆಗಟ್ಟಲು ಲಕ್ಷಾಂತರ ಜನ ಇಂದು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ರವರ ಪರಿಹಾರ ನಿಧಿಗೆ ಹಣ ನೀಡುತ್ತಿದ್ದಾರೆ.

ಇದೀಗ ದಕ್ಷಿಣ ಭಾರತದಲ್ಲಿ ಹಾಡುಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ವಿಜಯ ಪ್ರಕಾಶ್ ರವರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ರವರ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಷ್ಟೇ ಆಗಿದ್ದರೇ ಎಲ್ಲರೂ ಸುದ್ದಿಯನ್ನು ನೋಡಿ ಸುಮ್ಮನಾಗುತ್ತಿದ್ದರು. ಆದರೆ ದೇಣಿಗೆ ನೀಡಿದ ಬಳಿಕ ವಿಜಯ್ ಪ್ರಕಾಶ್ ರವರು ಮಾತನಾಡಿದ ರೀತಿಯನ್ನು ಕಂಡ ಜನ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೌದು, ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ಪರಿಹಾರ ಘೋಷಣೆ ಮಾಡಿದ ನಂತರ ಮಾತನಾಡಿದ ವಿಜಯ ಪ್ರಕಾಶ್ ರವರು, ನಾನು ಕೇವಲ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮಾತ್ರವಲ್ಲದೇ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹಾಗೂ ಕೆಲವು ರಾಜ್ಯಗಳ ಪರಿಹಾರ ನಿಧಿಗೆ ದೇಣಿಗೆಯನ್ನು ನೀಡಿದ್ದೇನೆ. ಚೀನಾ ವೈರಸ್ (ಕೊರೋನ) ಅನ್ನು ನಾವೆಲ್ಲರೂ ಮನೆಯೊಳಗಡೆಯಿದ್ದು ಎದುರಿಸುತ್ತಿದ್ದೇವೆ, ಆದರೆ ಮನೆಯಿಂದ ಹೊರಗಡೆ ಬಂದು ಮುಖ್ಯಮಂತ್ರಿಗಳು, ಸರ್ಕಾರಿ ಅಧಿಕಾರಿಗಳು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು, ಪೊಲೀಸರು ಹೀಗೆ ಹಲವಾರು ಜನ ನಮ್ಮೆಲ್ಲರನ್ನು ರಕ್ಷಿಸಲು ಕೆಲಸ ಮಾಡುತ್ತಿದ್ದಾರೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವನ್ನು ಪಡೆದವರಂತೆ ಕಾಣಿರೋ ಎಂದು ಪುರಂದರ ದಾಸರು ಹೇಳಿದ್ದಾರೆ, ನನ್ನ ಜೀವನದಲ್ಲಿ ಸಮಸ್ತ ಕನ್ನಡ ಜನತೆ ಪ್ರೀತಿಯನ್ನು ನನಗೆ ಬೊಗಸೆಯಲ್ಲಿ ತುಂಬಿಸಿ ಕೊಟ್ಟಿದ್ದಾರೆ. ಈ ಬೊಗಸೆಯಿಂದ ಒಂದು ಚಿಕ್ಕ ಕಾಣಿಕೆ ಜನರಿಗಾಗಿ ಮಾಡುತ್ತಿರುವುದು ನನ್ನ ಸೌಭಾಗ್ಯ, ನನ್ನ ಕರ್ತವ್ಯ, ಇದನ್ನು ನಾನು ಭಗವಂತನ ಕೃಪೆಗೆ ಎಂದು ಭಾವಿಸುತ್ತೇನೆ.

ಇಂತಹ ಒಂದು ಕಠಿಣ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಕೈಯಲ್ಲಿ ಆದಷ್ಟು ಪರಿಹಾರವನ್ನು ದೇಣಿಗೆ ರೂಪದಲ್ಲಿ ಪರಿಹಾರ ನಿಧಿಗೆ ನೀಡಿದರೇ, ಅದು ಎಲ್ಲಿಯೋ ಒಂದು ಕಡೆ ಒಬ್ಬರ ಪ್ರಾಣವನ್ನು ಉಳಿಸಲು ಅನುಕೂಲವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ನನ್ನ ಪ್ರಾರ್ಥನೆ ಏನೆಂದರೆ ನಿಮ್ಮ ಕೈಯಲ್ಲಿ ಆದಷ್ಟು ಕೊಡುಗೆಯನ್ನು ಪರಿಹಾರ ನಿಧಿಗೆ ನೀಡಿ. ಇದರಿಂದ ಇನ್ನೊಬ್ಬರ ಜೀವ ಉಳಿಯುತ್ತದೆ. ನಾವೆಲ್ಲರೂ ಇಂತಹ ಕಠಿಣ ಸಂದರ್ಭದಲ್ಲಿ ಒಟ್ಟಾಗಿ ಕೈಜೋಡಿಸಿ ನಿಂತುಕೊಂಡರೇ ಕರೋನ ದಂತಹ ಮಹಾಮಾರಿಯನ್ನು ನಾವು ಗೆದ್ದು ಮೊದಲಿನಂತೆಯೇ ಸಮಾಜದಲ್ಲಿ ಸುಖ ಹಾಗೂ ಸಂತೋಷದಿಂದ ಬದುಕುತ್ತೇವೆ ಎಂಬ ಭರವಸೆ ನನಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇವರ ಈ ಹೇಳಿಕೆಯನ್ನು ನೋಡಿದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಮಹಾಪೂರವನ್ನು ಹರಿಸಿದ್ದಾರೆ.