ಶಿವರಾಜ್ ಕುಮಾರ್ ರವರು ಕೈದಿಗಳನ್ನು ಬಿಡಿಸಲು ಲಕ್ಷ ಲಕ್ಷ ರೂ ದಂಡ ಕಟ್ಟಿದ್ದು ಯಾಕೆ ಗೊತ್ತಾ?? ತಡವಾಗಿ ಬೆಳಕಿಗೆ ಬಂದರೂ ಮನಕಲಕುವ ನೈಜ ಘಟನೆ !

ಶಿವರಾಜ್ ಕುಮಾರ್ ರವರು ಕೈದಿಗಳನ್ನು ಬಿಡಿಸಲು ಲಕ್ಷ ಲಕ್ಷ ರೂ ದಂಡ ಕಟ್ಟಿದ್ದು ಯಾಕೆ ಗೊತ್ತಾ?? ತಡವಾಗಿ ಬೆಳಕಿಗೆ ಬಂದರೂ ಮನಕಲಕುವ ನೈಜ ಘಟನೆ !

ನಮಸ್ಕಾರ ಸ್ನೇಹಿತರೇ, ಡಾಕ್ಟರ್ ರಾಜ್ ಕುಮಾರ್ ಅವರ ಹಿರಿಯ ಪುತ್ರ ಶಿವರಾಜ್ ಕುಮಾರ್ ರವರ ನಟನೆಯ ಬಗ್ಗೆ ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಎನಿಸುತ್ತದೆ. ಆದರೆ ಇಷ್ಟು ದಿವಸ ನೀವು ಶಿವರಾಜ್ ಕುಮಾರ್ ರವರನ್ನು ರೀಲ್ ಲೈಫ್ನಲ್ಲಿ ನೋಡಿದ್ದೀರಿ, ಇಂದು ಅವರು ರಿಯಲ್ ಲೈಫ್ ನಲ್ಲಿ ಮಾಡಿದ ಒಂದು ಅಪರೂಪದ ಕಾರ್ಯದ ಬಗ್ಗೆ ತಿಳಿದುಕೊಳ್ಳೋಣ.

1990 ರಲ್ಲಿ ಮೃತ್ಯುಂಜಯ ಸಿನಿಮಾದ ನಟನೆಗಾಗಿ ಜೈಲಿನಲ್ಲಿ ಚಿತ್ರೀಕರಣ ಮಾಡುವ ಸಂದರ್ಭ ಎದುರಾಗಿತ್ತು, ಎಲ್ಲಾ ಅಂದು ಕೊಂಡಂತೆ ಮೈಸೂರಿನ ಜೈಲಿನಲ್ಲಿ ಶಿವರಾಜ್ ಕುಮಾರ್ ರವರು ಚಿತ್ರೀಕರಣ ಮಾಡುತ್ತಿದ್ದರು. ಚಿತ್ರೀಕರಣ ವೇಳೆಯಲ್ಲಿ ಶಿವಣ್ಣ ರವರು ಕೆಲವೇ ದಿನಗಳಲ್ಲಿ ಅಲ್ಲೇ ಇದ್ದ ಖೈದಿಗಳ ಜೊತೆ ಬಹಳ ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಂಡರು.

ಇದೇ ರೀತಿ ಬೆರೆತು ಮಾತನಾಡುವಾಗ ಹಲವಾರು ಖೈದಿಗಳು ನಾವು ತಪ್ಪುಗಳನ್ನು ಮಾಡಿದ್ದೇವೆ, ಅದರ ಅರಿವಾಗಿದೆ. ಆದರೆ ಇಲ್ಲಿಂದ ಹೊರಗೆ ಹೋಗಬೇಕು ಎಂದರೆ ಲಕ್ಷ ಲಕ್ಷ ರೂಪಾಯಿ ದಂಡ ಕಟ್ಟಬೇಕು ಎಂದು ತಮ್ಮ ಕಷ್ಟಗಳನ್ನು ತೋಡಿ ಕೊಂಡಿದ್ದರು. ಕೂಡಲೇ ಖೈದಿಗಳ ಮನೋಭಾವನೆಯನ್ನು ಅರಿತ ಶಿವರಾಜ್ ಕುಮಾರ್ ರವರು 26 ಕೈದಿಗಳನ್ನು ಬಿಡಿಸಲು 28 ಲಕ್ಷ ರೂಪಾಯಿ ದಂಡ ಕಟ್ಟಿದರು. ಈ ವಿಷಯ ಅದೆಷ್ಟೋ ಜನರಿಗೆ ತಿಳಿಯಲೇಯಿಲ್ಲ. ಆದರೆ ಈಗ ಹೇಗೆ ತಿಳಿಯಿತು ಎಂದು ಆಲೋಚನೆ ಮಾಡುತ್ತಿರುವಿರಾ ಕೆಳಗಡೆ ಓದಿ.

ಇದೀಗ 26 ಕೈದಿಗಳಲ್ಲಿ ಒಬ್ಬರಾಗಿರುವ ಮೈಲಾರ ಪಟ್ಟಣದ ನಿವಾಸಿ ಗೋಪಾಲ್ ರವರು ಈ ಘಟನೆಯನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ. ಹೌದು ಇದೀಗ ಮಾತನಾಡಿರುವ ಗೋಪಾಲ್ ರವರು ನಾನು 16ನೇ ವಯಸ್ಸಿನಲ್ಲಿ ಇದ್ದಾಗ ಒಂದು ತಪ್ಪು ಮಾಡಿದೆ. ತಪ್ಪಿನಿಂದ ನಾನು ಜೈಲು ಸೇರುವಂತಾಯಿತು, 10 ವರ್ಷಗಳ ಕಾಲ ಜೈಲಿನಲ್ಲಿ ಇದ್ದೆ, ತದನಂತರ ನನಗೆ ನ್ಯಾಯಾಲಯ 3 ಲಕ್ಷ ಕಂಡ ಕಟ್ಟಿ ನೀನು ಹೊರಗಡೆ ಹೋಗಬಹುದು ಎಂದು ಷರತ್ತು ವಿಧಿಸಿತು, ಆದರೆ ಮೂರು ಲಕ್ಷ ರೂಪಾಯಿ ಕಟ್ಟಲಾಗದೆ ನಾನು ಅಲ್ಲಿಯೇ ಉಳಿದುಕೊಂಡಿದ್ದೆ, ನನ್ನ ಕಷ್ಟವನ್ನು ಕೇಳಿದ ಶಿವಣ್ಣ ರವರು ಕೂಡಲೇ ಮೂರು ಲಕ್ಷ ರೂಪಾಯಿ ಕಟ್ಟಿದರು. ನನ್ನಂತೆ ಇನ್ನೂ 25 ಕೈದಿಗಳನ್ನು ಬಿಡಿಸಲು ಒಟ್ಟಾಗಿ 28 ಲಕ್ಷ
ರೂ ಕಟ್ಟಿದರು. ಇದಾದ ನಂತರ ನಾನು ಜೈಲಿನಿಂದ ಬಿಡುಗಡೆಯಾಗಿ ಇಂದು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದೇನೆ. ಇದೆಲ್ಲಕ್ಕೂ ಕಾರಣ ಶಿವರಾಜ್ ಕುಮಾರ್ ಎಂದು ಮನಕಲಕುವ ಘಟನೆಯನ್ನು ವಿವರಿಸಿದ್ದಾರೆ.‌