ಕೊರೊನ ಮುಂದೆ ಮಂಡಿಯೂರಿದ ವಿಶ್ವದ ದೊಡ್ಡಣ್ಣ! ವಿಶ್ವದೆಲ್ಲೆಡೆ ಆತಂಕಕ್ಕೆ ಕಾರಣವಾದ ಟ್ರಂಪ್ ರವರ ಒಂದೇ ಒಂದು ಹೇಳಿಕೆ

ನಮಸ್ಕಾರ ಸ್ನೇಹಿತರೇ, ಇದೀಗ ವಿಶ್ವದ ಎಲ್ಲೆಡೆ ಚೀನಾ ವೈರಸ್ ತಾಂಡವವಾಡುತ್ತಿದೆ. ಅತ್ಯಾಧುನಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ಹಲವು ರಾಷ್ಟ್ರಗಳು ಚೀನಾ ವೈರಸ್ ಮುಂದೆ ಕೈಚಲ್ಲಿ ಕುಳಿತಿವೆ.

ಇದಕ್ಕೆ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ದೇಶ ಕೂಡ ಹೊರತಲ್ಲ. ಈಗಾಗಲೇ ಈ ಸುದ್ದಿ ಪ್ರಕಟ ಮಾಡುವ ಸಂದರ್ಭದಲ್ಲಿ 1,88,000 ಹೆಚ್ಚು ಜನರಿಗೆ ಸೋಂಕು ತಗುಲಿದ್ದು ಅಮೇರಿಕ ದೇಶ ವೆಂಟಿಲೇಟರ್ ಗಳ ಅಭಾವದಿಂದ ಬಳಲುತ್ತಿದೆ. ಅಷ್ಟೇ ಅಲ್ಲದೇ ವೈದ್ಯಕೀಯ ಉಪಕರಣಗಳು ಸಾಕಾಗುತ್ತಿಲ್ಲ. ಕ್ಷಣ ಕ್ಷಣಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದೀಗ ಅಮೆರಿಕ ಅಧ್ಯಕ್ಷ ಟ್ರಂಪ್ ರವರು ಕೈ ಚೆಲ್ಲಿದ್ದಾರೆ. ಇಂದು ಮಾಧ್ಯಮಗೋಷ್ಠಿ ನಡೆಸಿರುವ ಟ್ರಂಪ್ ರವರು,

ಮುಂದಿನ ಎರಡು ವಾರ ಅಮೇರಿಕಾ ದೇಶ ಕಠಿಣ ದಿನಗಳನ್ನು ಎದುರಿಸಲಿದೆ, ಈ ಎರಡು ವಾರ ಬಹಳ ನೋವಿನಿಂದ ಕೂಡಿರುತ್ತದೆ. ಅಂದಾಜಿನ ಪ್ರಕಾರ 1.5 ಲಕ್ಷದಿಂದ 2.5 ಲಕ್ಷ ಜನರವರೆಗೂ ಇಹಲೋಕ ತ್ಯಜಿಸಿಬಹುದು. ಆದ ಕಾರಣದಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಿ, ಈ ಎರಡು ವಾರಗಳ ಕಾಲ ಎಲ್ಲಾ ರೀತಿಯ ಕಠಿಣ ದಿನಗಳನ್ನು ಎದುರಿಸಲು ಸಿದ್ದರಾಗಿ ಎಂದು ಬಹಳ ಗದ್ಗದಿತರಾಗಿ ಮಾತನಾಡಿದ್ದಾರೆ. ಇವರ ಈ ಮಾತುಗಳನ್ನು ಕೇಳಿದ ಇತರ ದೇಶಗಳು, ವಿಶ್ವದ ದೊಡ್ಡಣ್ಣ, ಅತ್ಯಾಧುನಿಕ ವೈದ್ಯಕೀಯ ಮೂಲಸೌಕರ್ಯ, ಟಾಪ್ ವೈದ್ಯರು, ಲಕ್ಷಾಂತರ ಕೋಟಿ ಹಣ ಎಲ್ಲ ಇದ್ದರೂ ಕೂಡ ಕೈ ಚೆಲ್ಲಿರುವಾಗ ಇತರ ದೇಶಗಳು ಏನು ಮಾಡಲು ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿಯೇ ಸ್ನೇಹಿತರೇ ದಯವಿಟ್ಟು ನೀವೆಲ್ಲರೂ ಮನೆಯಲ್ಲೇ ಇದ್ದು, ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

Post Author: Ravi Yadav