ಜನತಾ ಕರ್ಫ್ಯೂ: ಮೋದಿ ಮನವಿಯ ಕುರಿತು ಭಾರೀ ಚರ್ಚೆ ! ವಿಶ್ವಸಂಸ್ಥೆಯ ಆರೋಗ್ಯ ಪ್ರತಿನಿಧಿ ಹೆಂಕ್ ಬೆಕೆಡೆಂ ಹೇಳಿದ್ದೇನು ಗೊತ್ತಾ?

ಜನತಾ ಕರ್ಫ್ಯೂ: ಮೋದಿ ಮನವಿಯ ಕುರಿತು ಭಾರೀ ಚರ್ಚೆ ! ವಿಶ್ವಸಂಸ್ಥೆಯ ಆರೋಗ್ಯ ಪ್ರತಿನಿಧಿ ಹೆಂಕ್ ಬೆಕೆಡೆಂ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಕೋರೋನ ವೈರಸ್ ತಡೆಗಟ್ಟಲು ಜನತಾ ಕರ್ಫ್ಯೂ ಎಂಬ ಘೋಷಣೆಯ ಮೂಲಕ ದೇಶದ ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ.

ಈ ಮನವಿಯ ಆಧಾರಿತ ಇದೇ ಭಾನುವಾರ ಮುಂಜಾನೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಮೋದಿ ಮನವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನರು ಪಕ್ಷಬೇದ ಮರೆತು ನರೇಂದ್ರ ಮೋದಿ ರವರ ಮನವಿಗೆ ಎಲ್ಲರೂ ಒಗ್ಗೂಡಿ ಕೋರೋಣ ವೈರಸ್ ತಡೆಗಟ್ಟುವ ಎಂದು ಎಲ್ಲೆಡೆ ಪೋಸ್ಟ್ಗಳನ್ನು ಹರಿದು ಬಿಡುತ್ತಿದ್ದಾರೆ. ಅಂದುಕೊಂಡತೆ ಕೆಲವು ವಿಪಕ್ಷ ನಾಯಕರು ಮೋದಿ ರವರ ನಿರ್ಧಾರದ ಕುರಿತು ವ್ಯಂಗ್ಯವಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇದರ ನಡುವೆಯೇ ಇದೀಗ ಮೋದಿ ಮನವಿಗೆ ವಿಶ್ವದೆಲ್ಲೆಡೆ ಅಭೂತಪೂರ್ವ ಪ್ರಶಂಸೆಗಳು ವ್ಯಕ್ತವಾಗಿದ್ದು, ಜನತಾ ಕರ್ಫ್ಯೂ ಎಂಬ ಆಲೋಚನೆಯೂ ಅದ್ಭುತವಾಗಿದೆ ಎಂದು ಹಲವಾರು ದೇಶಗಳ ಪ್ರತಿನಿಧಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ವಿಶ್ವಸಂಸ್ಥೆಯ ಆರೋಗ್ಯ ಪ್ರತಿನಿಧಿ, ಹೆಂಕ್ ಬೆಕೆಡೆಂ ರವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು ಜನತಾ ಕರ್ಫ್ಯೂ ಎಂಬ ಆಲೋಚನೆ ಅದ್ಭುತವಾಗಿದೆ, ಮೋದಿ ರವರ ಈ ಮನವಿಯನ್ನು ನಾವು ಸ್ವಾಗತ ಮಾಡುತ್ತೇವೆ, ಭಾಷಣದಲ್ಲಿ ಹೇಳಿದಂತೆ ಸಾಮಾಜಿಕ ದೂರವನ್ನು ಅಳವಡಿಸಿ ಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಕಾರ್ಯತಂತ್ರವನ್ನು ಎಲ್ಲರೂ ಅನುಸರಿಸಿದರೇ ಕೋರೋನ ತಡೆಗಟ್ಟುವಲ್ಲಿ ನಾವು ಬಹಳ ಮುಂದಕ್ಕೆ ಹೋಗಲಿದ್ದೇವೆ, ಈ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.