ವಿಶ್ವಕಪ್ ಇಲೆವೆನ್ ತಂಡವನ್ನು ಘೋಷಿಸಿದ್ದು ಐಸಿಸಿ ! ಭಾರತೀಯ ವನಿತೆಯರಿಗೆ ಮತ್ತೊಮ್ಮೆ ನಿರಾಸೆ ! ಆಯ್ಕೆಯಾದ ಏಕೈಕ ಭಾರತೀಯ ಆಟಗಾರ್ತಿ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತೀಯ ವನಿತೆಯರು ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ನಿರಾಸೆ ಅನುಭವಿಸುವ ಮೂಲಕ ಟೂರ್ನಿಯನ್ನು ಅಂತ್ಯಗೊಳಿಸಿದರು.

ಆದರೂ ನಮ್ಮ ಸಹೋದರಿಯರು ಅತ್ಯುತ್ತಮ ಪ್ರದರ್ಶನ ನೀಡಿ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದು ಸುಳ್ಳಲ್ಲ. ಖಂಡಿತ ಮುಂದೊಂದು ದಿನ ಇನ್ನಷ್ಟು ಬಲಿಷ್ಠ ತಂಡವಾಗಿ ಹೊರಹೊಮ್ಮಿ ಭಾರತ ತಂಡದ ತಾಕತ್ತು ಏನು ಎಂಬುದನ್ನು ಖಂಡಿತವಾಗಿಯೂ ಸಾಬೀತುಪಡಿಸುತ್ತಾರೆ ಎಂಬ ನಂಬಿಕೆ ಪ್ರತಿಯೊಬ್ಬ ಭಾರತೀಯರಲ್ಲೂ ಇದೆ. ಇದೀಗ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಐಸಿಸಿ ವನಿತೆಯರ ಟಿ-20 ವಿಶ್ವಕಪ್ ತಂಡ ಘೋಷಣೆಯಾಗಿದ್ದು, ಭಾರತ ತಂಡದ ಆರಂಭಿಕ ಆಟಗಾರ್ತಿ
ಶಫಾಲಿ ವರ್ಮಾ ರವರು 12ನೇ ಆಟಗಾರ್ತಿಯಾಗಿ ಸ್ಥಾನ ಪಡೆದಿದ್ದರೇ(ಮೀಸಲು ಆಟಗಾರ್ತಿ), ಸ್ಪಿನ್ ಬೌಲಿಂಗ್ ನಲ್ಲಿ ಮ್ಯಾಜಿಕ್ ಮಾಡಿದ ಪೂನಮ್ ಯಾದವ್ ರವರು ಏಕೈಕ ಭಾರತೀಯ ಆಟಗಾರ್ತಿ ಆಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ಆಸ್ಟ್ರೇಲಿಯ ತಂಡದ ಐವರು ಆಟಗಾರ್ತಿಯರು ಐಸಿಸಿ ಮಹಿಳಾ ವಿಶ್ವಕಪ್ ಇಲೆವೆನ್ ನಲ್ಲಿ ಸ್ಥಾನ ಪಡೆದುಕೊಂಡಿದ್ದು ಉಳಿದಂತೆ ತಂಡ ಈ ಕೆಳಗಿನಂತಿದೆ: ಅಲಿಸಾ ಹೀಲಿ (AUS), ಬೆಥ್ ಮೂನಿ(AUS), ನ್ಯಾಟ್ ಸ್ಕಿವರ್(ENG),ಹೀದರ್ ನೈಟ್(ENG), ಮೆಗ್ ಲ್ಯಾನಿಂಗ್ (C)(AUS), ಲಾರಾ ವೊಲ್ವಾರ್ಡ್ಟ್(SA), ಜೆಸ್ ಜೊನಾಸ್ಸೆನ್(AUS), ಸೋಫಿ ಎಕ್ಲೆಸ್ಟೋನ್(ENG), ಅನ್ಯಾ ಶ್ರಬ್ಸೋಲ್(ENG), ಮೇಗನ್ ಷುಟ್(AUS), ಪೂನಂ ಯಾದವ್(IND), ಶಫಾಲಿ ವರ್ಮಾ(IND)(12 ನೇ ಆಟಗಾರ್ತಿ)

Post Author: Ravi Yadav