ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಕ್ರಿಕೆಟ್ ತಂಡವನ್ನು ಹೆಸರಿಸಿದ ಹರ್ಭಜನ್ ಸಿಂಗ್ !ಕುಂಬ್ಳೆ, ಕೊಹ್ಲಿ, ಗಂಗೂಲಿ, ಧೋನಿ ಇಲ್ಲದೇ ಆಯ್ಕೆ ಮಾಡಿದ ಆಟಗಾರರು ಯಾರ್ಯಾರು ಗೊತ್ತಾ??

ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಕ್ರಿಕೆಟ್ ತಂಡವನ್ನು ಹೆಸರಿಸಿದ ಹರ್ಭಜನ್ ಸಿಂಗ್ !ಕುಂಬ್ಳೆ, ಕೊಹ್ಲಿ, ಗಂಗೂಲಿ, ಧೋನಿ ಇಲ್ಲದೇ ಆಯ್ಕೆ ಮಾಡಿದ ಆಟಗಾರರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭಾರತೀಯ ಕ್ರಿಕೆಟ್ ಗೆ ತನ್ನದೇ ಆದ ಸೇವೆ ನೀಡಿರುವ ಖ್ಯಾತ ಸ್ಪಿನ್ನರ್ ಹರ್ಭಜನ್ ಸಿಂಗ್ ರವರು ಇದೀಗ ತಮ್ಮದೇ ಆದ ಲೆಕ್ಕಾಚಾರದಲ್ಲಿ ಸಾರ್ವಕಾಲಿಕ ಟೆಸ್ಟ್ ತಂಡವನ್ನು ಪ್ರಕಟಣೆ ಮಾಡಿದ್ದಾರೆ.

ಪ್ರತಿಯೊಬ್ಬ ಆಟಗಾರರನ್ನು ಆಯ್ಕೆ ಮಾಡಿದ ನಂತರ ಕಾರಣ ನೀಡಿರುವ ಹರ್ಭಜನ್ ಸಿಂಗ್ ರವರು ಕೆಲವು ಅಚ್ಚರಿ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ, ಈ ತಂಡದಲ್ಲಿ ಭಾರತದ ಹಲವಾರು ದಿಗ್ಗಜರು ಸ್ಥಾನ ಪಡೆದು ಕೊಂಡಿಲ್ಲ, ಸೌರವ್ ಗಂಗೂಲಿ ಅವರನ್ನು ಕೂಡ ಹೊರಗಡೆ ಇಟ್ಟಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಹೌದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಹರ್ಭಜನ್ ಸಿಂಗ್ ರವರು, ಆರಂಭಿಕ ಆಟಗಾರರಾಗಿ ವೀರೇಂದ್ರ ಸೆಹ್ವಾಗ್ ಹಾಗೂ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ರವರನ್ನು ತಮ್ಮ ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ಇವರ ನಂತರ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಅವರನ್ನು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಆಯ್ಕೆ ಮಾಡಿರುವ ಹರ್ಭಜನ್ ಸಿಂಗ್ ರವರು ಇಬ್ಬರು ಆಟಗಾರರು ತಮ್ಮ ಟೆಸ್ಟ್ ಜೀವನದಲ್ಲಿ ಹೆಚ್ಚು ಇದೇ ಬ್ಯಾಟಿಂಗ್ ಕ್ರಮಾಂಕ ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಎಂದಿದ್ದಾರೆ.

ಇನ್ನು ವಿಕೆಟ್ ಕೀಪರ್ ಆಗಿ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕರರವರನ್ನು ಆಯ್ಕೆ ಮಾಡಿರುವ ಇವರು, ವಿಕೆಟ್ ಕೀಪರ್ ಆಯ್ಕೆ ಮಾಡುವ ಸಂದರ್ಭದಲ್ಲಿ ನನಗೆ ಆಡಮ್ ಗಿಲ್ ಕ್ರಿಸ್ಟ್ ಹಾಗೂ ಕುಮಾರ್ ಸಂಗಕ್ಕರರವರ ಹೆಸರುಗಳು ನೆನಪಿಗೆ ಬಂದವು. ಆದರೆ ಬ್ಯಾಟಿಂಗ್ ಅಂಕಿ ಅಂಶಗಳ ಆಧಾರದ ಮೇಲೆ ಕುಮಾರ್ ಸಂಗಕ್ಕರರವರನ್ನು ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ.

ಇನ್ನುಳಿದಂತೆ ಆಲ್ರೌಂಡರ್ ಎಂದ ತಕ್ಷಣ ನನಗೆ ಸೌತ್ ಆಫ್ರಿಕಾ ತಂಡದ ಮಾಜಿ ಆಟಗಾರ ಜಾಕ್ ಕಾಲಿಸ್ ಬಿಟ್ಟರೆ ಬೇರೆ ಯಾರು ನೆನಪಾಗಲಿಲ್ಲ. ಇನ್ನು ನಾಯಕನ ಕೋಟಾದಲ್ಲಿ ನಾನು ರಿಕಿ ಪಾಂಟಿಂಗ್ ಅವರನ್ನು ಆಯ್ಕೆ ಮಾಡಲು ಬಯಸುತ್ತೇನೆ, ರಿಕಿ ಪಾಂಟಿಂಗ್ ರವರ ಸ್ಥಾನಕ್ಕೆ ವಿರಾಟ್ ಕೊಹ್ಲಿ, ಕೆವಿನ್ ಪೀಟರ್ಸನ್ ಹಾಗೂ ಬ್ರಿಯಾನ್ ಲಾರಾ ರವರು ನೆನಪಿಗೆ ಬಂದರು. ಆದರೆ ರಿಕಿ ಪಾಂಟಿಂಗ್ ರವರ ನಾಯಕತ್ವ ಕೌಶಲ್ಯಗಳು ಬಹುತೇಕ ಸಾಟಿಯಿಲ್ಲದವು. ಆದ ಕಾರಣ ಪಾಂಟಿಂಗ್ ಅವರನ್ನು ಆಯ್ಕೆ ಮಾಡಿದೆ.

ಇನ್ನುಳಿದಂತೆ ಬೌಲರ್ಗಳ ಕೋಟದಲ್ಲಿ ಶಾನ್ ಪೊಲಾಕ್, ವಾಸೀಮ್ ಅಕ್ರಂ ಮತ್ತು ಆಸ್ಟ್ರೇಲಿಯಾದ ಮೆಕ್‌ಗ್ರಾತ್ ರವರು ವೇಗದ ಬೌಲರ್ ಗಳಾಗಿ ಆಯ್ಕೆಯಾದರೆ ಆಸ್ಟ್ರೇಲಿಯಾ ದಂತಕತೆಯಾಗಿರುವ ಶೇನ್ ವಾರ್ನ್ ರವರು ಏಕೈಕ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ. ಸಂಪೂರ್ಣ ತಂಡ ಈ ಕೆಳಗಿನಂತಿದೆ:

ವೀರೇಂದ್ರ ಸೆಹ್ವಾಗ್, ಮ್ಯಾಥ್ಯೂ ಹೇಡನ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಜಾಕ್ವೆಸ್ ಕಾಲಿಸ್, ರಿಕಿ ಪಾಂಟಿಂಗ್ (C), ಕುಮಾರ್ ಸಂಗಕ್ಕಾರ (WK); ಶಾನ್ ಪೊಲಾಕ್, ಶೇನ್ ವಾರ್ನ್, ವಾಸಿಮ್ ಅಕ್ರಮ್, ಗ್ಲೆನ್ ಮೆಕ್‌ಗ್ರಾತ್.

ಇನ್ನು ವೀರೇಂದ್ ಸೆಹ್ವಾಗ್ ರವರನ್ನು ಯಾಕೆ ಆಯ್ಕೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಹರ್ಭಜನ್ ಸಿಂಗ್ ರವರು, ಸೆಹ್ವಾಗ್ ರವರನ್ನು ನಾವು ವಿ ರಿಚರ್ಡ್ ರವರಿಗೆ ಹೋಲಿಸಬಹುದು, ಅವರು ಯಾವುದೇ ಅಂಜಿಕೆಯಿಲ್ಲದೇ ಯಾವ ಬೌಲರ್ ಗೆ ಬೇಕಾದರೂ ಮುನ್ನುಗ್ಗಿ ಹೊಡೆಯುತ್ತಾರೆ. ಬಹಳ ವೇಗದಲ್ಲಿ ಸ್ಕೋರ್ ಮಾಡುವ ವೀರೇಂದ್ರ ಸೆಹ್ವಾಗ್ ರವರು ಔಟ್ ಆಗುವವರೆಗೂ ಬೌಲರ್ ಗಳಲ್ಲಿ ನಡುಕ ಇರುತ್ತದೆ. ನಾನು 19 ವರ್ಷವಿದ್ದಾಗಲೇ ಅವರ ಜೊತೆ ಕ್ರಿಕೆಟ್ ಆಡಲು ಆರಂಭಿಸಿದೆ, ಅವರ ತಂಡದ ವಿರುದ್ಧ ಹಾಗೂ ಅವರ ತಂಡದ ಪರವಾಗಿ ಹಲವಾರು ಬಾರಿ ಕ್ರಿಕೆಟ್ ಆಡಿದ್ದೇನೆ. ಇನ್ನು ರಾಹುಲ್ ದ್ರಾವಿಡ್ ರವರ ಬಗ್ಗೆ ಹೇಳಬೇಕು ಎಂದರೇ ನಾನು ಬೌಲ್ ಮಾಡಿದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್ಮನ್ ಎಂದರೇ ಅದು ರಾಹುಲ್ ದ್ರಾವಿಡ್. ಇನ್ನು ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ನನ್ನ ಜೀವನದಲ್ಲಿ ನೋಡಿದ ಅತ್ಯಂತ ಪರ್ಫೆಕ್ಟ್ ಆಟಗಾರ ಸಚಿನ್ ತೆಂಡೂಲ್ಕರ್ ಎಂದು ಹಾಡಿ ಹೊಗಳಿದ್ದಾರೆ.