ವಿಶ್ವ ಕ್ರಿಕೆಟ್ನಲ್ಲಿ ಈ ಯುವ ಆಟಗಾರನ ಹೆಸರು ದೊಡ್ಡದಾಗಿರುತ್ತದೆ ಎಂದ ದಿಗ್ಗಜ ಇಯಾನ್ ಸ್ಮಿತ್ ! ಆಯ್ಕೆ ಮಾಡಿದ ಯುವ ಆಟಗಾರ ಯಾರು ಹಾಗೂ ಹೇಳಿದ್ದೇನು ಗೊತ್ತಾ??

ವಿಶ್ವ ಕ್ರಿಕೆಟ್ನಲ್ಲಿ ಈ ಯುವ ಆಟಗಾರನ ಹೆಸರು ದೊಡ್ಡದಾಗಿರುತ್ತದೆ ಎಂದ ದಿಗ್ಗಜ ಇಯಾನ್ ಸ್ಮಿತ್ ! ಆಯ್ಕೆ ಮಾಡಿದ ಯುವ ಆಟಗಾರ ಯಾರು ಹಾಗೂ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭಾರತದ ಭವಿಷ್ಯ ಕ್ರಿಕೆಟ್ ಹೇಗಿರುತ್ತದೆ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದೇ ಇದೆ. ಯುವ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ.

ಇನ್ನು ಕೆಲವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡುತ್ತಾ ಸ್ಥಾನ ಭದ್ರ ಪಡಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಇದೀಗ ಭಾರತದ ಕ್ರಿಕೆಟ್ನ ಭವಿಷ್ಯದ ಬಗ್ಗೆ ಮಾತನಾಡಿರುವ ನ್ಯೂಜಿಲೆಂಡ್ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಜನಪ್ರಿಯ ಕ್ರಿಕೆಟ್ ನಿರೂಪಕ ಇಯಾನ್ ಸ್ಮಿತ್ ರವರು ಭಾರತೀಯ ಯುವ ಆಟಗಾರ ರಿಷಬ್ ಪಂತ್ ರವರ ಕುರಿತು ಮಾತನಾಡಿದ್ದಾರೆ.

ವಿಕೆಟ್ ಕೀಪರ್ ರಿಷಬ್ ಪಂತ್ ರವರು ಇದೀಗ ಫಾರ್ಮ್ ನಲ್ಲಿ ಇರದೇ ಇರಬಹುದು, ಆದರೆ ಯುವ ಆಟಗಾರ ಭಾರತೀಯ ಕ್ರಿಕೆಟ್ ನಲ್ಲಿ ದೊಡ್ಡ ಇತಿಹಾಸವನ್ನು ಸೃಷ್ಟಿಸುತ್ತಾನೆ‌. ಇದೀಗ ರಾಷ್ಟ್ರೀಯ ತಂಡಕ್ಕೆ ಬೇಕಾದ ತಾಳ್ಮೆ ಹಾಗೂ ಸದ್ಗುಣಗಳನ್ನು ಕಲಿಯುತ್ತಿದ್ದಾನೆ, ಇನ್ನೂ ರಿಷಬ್ ಪಂತ್ ರವರಲ್ಲಿ ನೋಡುವುದು ಸಾಕಷ್ಟಿದೆ, ಇದು ಕೇವಲ ಅವರು ಆಟ ಆಡುವ ಬಗೆಯಲ್ಲ, ಬದಲಾಗಿ ಅದನ್ನು ಜೀವಿಸುವ ಬಗ್ಗೆ. ಇನ್ನು ಕಲಿಯುವ ವಿಷಯಗಳು ಸಾಕಷ್ಟಿವೆ. ಆದರೆ ನೆನಪಿಟ್ಟುಕೊಳ್ಳಿ ಭಾರತದ ಭವಿಷ್ಯ ಕ್ರಿಕೆಟ್ನಲ್ಲಿ ರಿಷಬ್ ಪಂತ್ ಅವರ ಹೆಸರು ದೊಡ್ಡ ಇತಿಹಾಸವನ್ನೇ ಸೃಷ್ಟಿಸುತ್ತದೆ ಎಂದು ಹಾಡಿ ಹೊಗಳಿದ್ದಾರೆ.