ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ರಮುಖ ಬೌಲರ್ ಡ್ರಾಪ್?? ಬದಲಿ ಆಟಗಾರ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಏಕದಿನ ಪಂದ್ಯಗಳ ಸರಣಿಯ ಸೋಲಿನ ಬಳಿಕ ಮೊದಲನೇ ಟೆಸ್ಟ್ ನಲ್ಲಿ ಸೋಲನ್ನು ಕಂಡಿರುವ ಭಾರತ ಕ್ರಿಕೆಟ್ ತಂಡವು ಎರಡನೇ ಟೆಸ್ಟ್ ನಲ್ಲಾದರೂ ಜಯಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದರ ನಡುವೆಯೇ ಭಾರತದ ತಂಡ ಬಲಿಷ್ಟವಾಗಿ ಇದ್ದರೂ ಕೂಡ ನ್ಯೂಜಿಲೆಂಡ್ ನೆಲಕ್ಕೆ ತಕ್ಕ ಆಟಗಾರರು ಇಲ್ಲ ಎಂದು ಆಯ್ಕೆ ಸಮಿತಿ ಹಾಗೂ ವಿರಾಟ್ ಕೊಹ್ಲಿ ರವರ ಆಯ್ಕೆಯ ಕುರಿತು ಹಲವಾರು ಜನ ಧ್ವನಿಯೆತ್ತಿದ್ದರು. ಇದರ ಬೆನ್ನಲ್ಲೇ ಭಾರತದ ಪ್ರಮುಖ ಸ್ಪಿನ್ ಬೌಲರ್ ಅನ್ನು ಪಂದ್ಯದಿಂದ ಹೊರಗೆ ಕಳಿಸಿ ಬೆಂಚ್ ಕಾಯಿಸುತ್ತಾರೆ ಎಂದು ಮಾಧ್ಯಮಗಳು ಸುದ್ದಿ ಪ್ರಕಟಣೆ ಮಾಡಿವೆ. ಹೌದು ಇದೀಗ ಆರ್ ಅಶ್ವಿನ್ ರವರನ್ನು ತಂಡದಿಂದ ಹೊರಗೆ ಕಳುಹಿಸಲು ತಂಡ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಇದರ ನಡುವೆ ಆರಂಭಿಕ ಆಟಗಾರ ಪೃಥ್ವಿ ಶಾ ಕೂಡ ಹೊರ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ.

ಇವರ ಸ್ಥಾನದಲ್ಲಿ ರವೀಂದ್ರ ಜಡೇಜಾ ಅವರನ್ನು ಆಡಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಯಾಕೆಂದರೆ ಭಾರತಕ್ಕೆ ಮತ್ತೊಬ್ಬ ಆಲ್ರೌಂಡರ್ ಸೇರಿಕೊಂಡರೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮತ್ತಷ್ಟು ಬಲಿಷ್ಠ ವಾಗಲಿದೆ. ಇನ್ನು ಆರಂಭಿಕ ಆಟಗಾರರ ಕುರಿತು ಕೂಡ ಚರ್ಚೆ ನಡೆಯುತ್ತಿದ್ದು ಪೃಥ್ವಿ ಶಾ ರವರನ್ನು ಬೆಂಚ್ ಕಾಯಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಪೃಥ್ವಿ ಶಾ ರವರ ಕುರಿತು ತಂಡದ ಆಯ್ಕೆ ಸಮಿತಿಯ ಮೂಲಗಳಿಂದ ಯಾವುದೇ ಮಾಹಿತಿ ಇಲ್ಲಿಯವರೆಗೂ ಲಭ್ಯವಾಗಿಲ್ಲ.

Facebook Comments

Post Author: Ravi Yadav