ಒಂದೆಡೆ ವಿಶ್ವ ದಾಖಲೆ ಬರೆದ ಲೇಡೀ ಸೆಹ್ವಾಗ್ ! ಮತ್ತೊಂದೆಡೆ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ಶಫಾಲಿ ವರ್ಮ ಕುರಿತು ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇಂದು ನಡೆದ ಮೂರನೇ ವಿಶ್ವಕಪ್ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 3 ರನ್ನುಗಳಿಂದ ಸೋಲಿಸುವ ಮೂಲಕ ಭಾರತ ತಂಡವು ಸೆಮಿಫೈನಲ್ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.

ಈ ಪಂದ್ಯದಲ್ಲಿಯೂ ಮಿಂಚಿದ ಶಫಾಲಿ ವರ್ಮ ರವರು ಮೊದಲಿಗೆ ಬಿರುಸಿನ ಆಟಕ್ಕೆ ಮೊರೆ ಹೋದ ನಂತರ, ವಿಕೆಟ್ಗಳು ಮತ್ತೊಂದೆಡೆ ಉರುಳ ತೊಡಗಿದಾಗ ತಾಳ್ಮೆ ಆಟಕ್ಕೆ ಮೊರೆ ಹೋಗಿ, ಜವಾಬ್ದಾರಿಯುತ ಆಟವಾಡಿ ಕೊನೆಯಲ್ಲಿ ಉತ್ತಮ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿ 34 ಎಸೆತಗಳಲ್ಲಿ 46 ರನ್ ಗಳಿಸಿ 4 ರನ್ಗಳಿಂದ ಅರ್ಧ ಶತಕ ವಂಚಿತರಾದರು. ಈ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಒಂದೆಡೆ ಶರ್ಮರವರು ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರೇ ಮತ್ತೊಂದೆಡೆ ವೀರೇಂದ್ರ ಸೆಹ್ವಾಗ್ ಹಾಗೂ ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ರವರು ಶೆಫಾಲಿ ವರ್ಮಾ ರವರ ಹಾಗೂ ವನಿತೆಯರ ಆಟದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ ಹಾಗೂ ವಿಶ್ವದಾಖಲೆಯಾದರೂ ಏನು ಎಂಬುದನ್ನು ತಿಳಿಯಲು ಕೆಳಗಡೆ ಓದಿ

ಕಳೆದ 3 ಪಂದ್ಯಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಶಫಾಲಿ ವರ್ಮ ರವರು 172 ರ ಸರಾಸರಿಯಲ್ಲಿ ಒಟ್ಟು 114 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಮಹಿಳೆಯರ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಕುರಿತು ಟ್ವೀಟ್ ಮಾಡಿರುವ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ರವರು, ಶಫಾಲಿ ವರ್ಮ ರವರು ಒಬ್ಬರು ರಾಕ್ ಸ್ಟಾರ್, ವನಿತೆಯರ ಈ ಅದ್ಭುತ ಪ್ರದರ್ಶನವನ್ನು ನೋಡಲು ಬಹಳ ಆನಂದವಾಗುತ್ತಿದೆ. ವಾಹ್ ಬಾಯ್ ವಾಹ್ ! ಅದ್ಭುತ ಪ್ರದರ್ಶನ ಎಂದರೇ ಮತ್ತೊಂದೆಡೆ ವಿವಿಎಸ್ ಲಕ್ಷ್ಮಣ್ ರವರು ಟ್ವೀಟ್ ಮಾಡಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಸೆಮಿಫೈನಲಿಗೆ ಏರಿರುವ ವನಿತೆಯರಿಗೆ ಅಭಿನಂದನೆಗಳು. 132 ರನ್ಗಳನ್ನು ಬೌಲರ್ಗಳು ಡಿಫೆಂಡ್ ಮಾಡಿದ ರೀತಿ ಅದ್ಭುತ ಹಾಗೂ ಶಫಾಲಿ ವರ್ಮ ರವರು ಟಾಪ್ ಕ್ಲಾಸ್ ಬ್ಯಾಟಿಂಗ್ ಮಾಡಿದ್ದಾರೆ ಎಂದು ಹೊಗಳಿದ್ದಾರೆ.

Facebook Comments

Post Author: Ravi Yadav