ಕನ್ನಡಿಗನ ಆಯ್ಕೆಯ ಕುರಿತು ಮಾತನಾಡಿದ ಮಾಜಿ ನಾಯಕ ! ಕೆ ಎಲ್ ರಾಹುಲ್ ಆಯ್ಕೆ ಕುರಿತು ಕಪಿಲ್ ದೇವ್ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕೆಎಲ್ ರಾಹುಲ್ ರವರು ಇದೀಗ ಜೀವನದ ಅತ್ಯಂತ ಶ್ರೇಷ್ಠ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇವರ ಪ್ರದರ್ಶನಕ್ಕೆ ಕಳೆದ ಎರಡು-ಮೂರು ತಿಂಗಳ ಅಂಕಿ-ಅಂಶಗಳೇ ಸಾಕ್ಷಿ.

ಇದರ ಕುರಿತು ನಿಮಗೆ ಹೇಳುವ ಅವಶ್ಯಕತೆ ಇಲ್ಲ ಎನಿಸುತ್ತದೆ, ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡಿದರೂ ಕೂಡ ಆಯ್ಕೆ ಸಮಿತಿಯು ಕೆಎಲ್ ರಾಹುಲ್ ರವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಲ್ಲ. ಅದು ಬಿಡೀ, ರೋಹಿತ್ ಶರ್ಮಾ ರವರು ತಂಡಕ್ಕೆ ಅಲಭ್ಯರಾಗಿರುವ ಸಂದರ್ಭದಲ್ಲಿಯೂ ಕೂಡ ಕೆ ಎಲ್ ರಾಹುಲ್ ರವರು ಟೆಸ್ಟ್ ತಂಡಕ್ಕೆ ಆಯ್ಕೆಯಾಗದಿರುವುದು ಅಚ್ಚರಿ ಮೂಡಿಸಿದೆ. ಇದೀಗ ಇದರ ಕುರಿತು ಮಾತನಾಡಿರುವ ಮಾಜಿ ನಾಯಕ ಕಪಿಲ್ ದೇವ್ ಅವರು ಕೆ ಎಲ್ ರಾಹುಲ್ ರವರ ಆಯ್ಕೆಯ ಕುರಿತು ಏನು ಹೇಳಿದ್ದಾರೆ ಎಂಬುದನ್ನು ತಿಳಿದಿಕೊಳ್ಳೋಣ ಬನ್ನಿ.

ಕನ್ನಡಿಗನ ಬೆಂಬಲಕ್ಕೆ ನಿಂತಿರುವ ಕಪಿಲ್ ದೇವ್ ರವರು ನಾವು ಕ್ರಿಕೆಟ್ ಆಡುತ್ತಿರುವ ಸಂದರ್ಭದಲ್ಲಿ ಹೇಗಿತ್ತು ಹಾಗೂ ಈಗ ಏನಾಗುತ್ತಿದೆ ಎಂಬುದರ ನಡುವೆ ಸಾಕಷ್ಟು ಪ್ರಮಾಣದಲ್ಲಿ ವ್ಯತ್ಯಾಸವಿದೆ. ತಂಡಕ್ಕೆ ಪ್ರತಿಯೊಬ್ಬ ಆಟಗಾರರನ್ನು ಆಯ್ಕೆ ಮಾಡುವ ಮುನ್ನ ಆಟಗಾರರಿಗೆ ಆತ್ಮ ವಿಶ್ವಾಸ ನೀಡಲೇಬೇಕು, ಇಂದಿನ ಕ್ರಿಕೆಟ್ ಮಂಡಳಿಯು ಕೇವಲ ನಿರ್ದಿಷ್ಟ ಆಟಗಾರರನ್ನು ನಂಬಿಕೊಂಡು ಕುಳಿತಿದೆ, ಕೆ ಎಲ್ ರಾಹುಲ್ ರವರು ಜೀವನದ ಶ್ರೇಷ್ಠ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ಆದರೂ ಕೂಡ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಈ ನಿರ್ಧಾರ ಯಾಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅದರಲ್ಲಿಯೂ ರೋಹಿತ್ ಶರ್ಮ ಉಪಸ್ಥಿತಿಯಲ್ಲಿ ರಾಹುಲ್ ಆಯ್ಕೆಯಾಗದೆ ಇರುವುದು ನನಗೆ ಬಹಳ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

Facebook Comments

Post Author: Ravi Yadav