ಮೋದಿ ಕಾರ್ಯವೈಖರಿ ವಿರುದ್ಧ ಧ್ವನಿಯೆತ್ತಿದ ಶಾಹಿದ್ ಅಫ್ರಿದಿಗೆ ಅದ್ಭುತವಾಗಿ ಭಾರತೀಯರು ಉತ್ತರ ನೀಡಿದ್ದು ಹೇಗೆ ಗೊತ್ತಾ? ಇಲ್ಲಿದೆ ಅದ್ಭುತ ಉತ್ತರ !

ಮೋದಿ ಕಾರ್ಯವೈಖರಿ ವಿರುದ್ಧ ಧ್ವನಿಯೆತ್ತಿದ ಶಾಹಿದ್ ಅಫ್ರಿದಿಗೆ ಅದ್ಭುತವಾಗಿ ಭಾರತೀಯರು ಉತ್ತರ ನೀಡಿದ್ದು ಹೇಗೆ ಗೊತ್ತಾ? ಇಲ್ಲಿದೆ ಅದ್ಭುತ ಉತ್ತರ !

ನಮಸ್ಕಾರ ಸ್ನೇಹಿತರೇ, ಇದೀಗ ಏಷ್ಯಾ ಇಲೆವೆನ್ ತಂಡದಲ್ಲಿ ಯಾವೊಬ್ಬ ಪಾಕಿಸ್ತಾನಿ ಆಟಗಾರರು ಸ್ಥಾನ ಪಡೆದು ಕೊಂಡಿಲ್ಲ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಬಿಸಿಸಿಐ ಸಂಸ್ಥೆಗೆ ನೀಡಿದ ಮಾತಿನಂತೆ ಪಾಕಿಸ್ತಾನದ ಆಟಗಾರರನ್ನು ಆಯ್ಕೆ ಮಾಡಿಲ್ಲ.

ಅಷ್ಟೇ ಅಲ್ಲದೇ ಕಳೆದ ಎಂಟು ವರ್ಷಗಳ ಹಿಂದೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ದ್ವೀಪಕ್ಷೀಯ ಸರಣಿಯಲ್ಲಿ ಭಾಗವಹಿಸಿದ್ದು ಬಿಟ್ಟರೇ ಇಲ್ಲಿಯವರೆಗೂ ದ್ವಿಪಕ್ಷೀಯ ಸರಣಿಗಳಲ್ಲಿ ಆಟವಾಡಿಲ್ಲ. ಇದನ್ನು ಕಂಡ ಶಾಹಿದ್ ಆಫ್ರಿದಿ, ಮೋದಿ ರವರ ಕಾರ್ಯ ವೈಖರಿಯ ಬಗ್ಗೆ ಬೆಟ್ಟು ಮಾಡಿ ತೋರಿಸಿ, ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ಇರುವ ವರೆಗೂ ನಾವು ಹಾಗೂ ಭಾರತ ಕ್ರಿಕೆಟ್ ತಂಡ ದ್ವೀಪಕ್ಷೀಯ ಸರಣಿ ಆಡಲು ಸಾಧ್ಯವಾಗುವುದಿಲ್ಲ. ಮೋದಿ ಯೋಚಿಸುವ ರೀತಿಯ ಬಗ್ಗೆ ಭಾರತೀಯರಿಗೂ ಹಾಗೂ ನಮಗೂ ತಿಳಿದಿದೆ, ಯಾವಾಗಲೂ ನಕಾರಾತ್ಮಕವಾಗಿ ಯೋಚನೆ ಮಾಡುತ್ತಾರೆ. ಇವರೊಬ್ಬರ ಕಾರಣದಿಂದ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಆದ ಕಾರಣದಿಂದ ಮುಂದಿನ ಬಾರಿ ಹೊಸ ಪ್ರಧಾನಿ ಹೇಗಿದ್ದರೂ ಆಯ್ಕೆಯಾಗುತ್ತಾರೆ, ಭಾರತ ದೇಶಕ್ಕೆ ಹೊಸ ಪ್ರಧಾನಿ ಆಯ್ಕೆಯಾಗುವ ವರೆಗೂ ನಾವು ಕ್ರಿಕೆಟ್ ಆಡಲು ಸಾಧ್ಯವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಶಾಹಿದ್ ಅಫ್ರಿದಿ ರವರೇ, ನರೇಂದ್ರ ಮೋದಿರವರು ಅಧಿಕಾರಕ್ಕೆ ಬಂದಿದ್ದು 2014 ರಲ್ಲಿ, ಅದರ ಹಿಂದೆಯೇ ಎರಡು ವರ್ಷಗಳ ಕಾಲ ಯಾವುದೇ ಸರಣಿ ನಡೆದಿಲ್ಲ, ಯಾಕೆಂದರೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀವು ಭಾರತದ ವಿರುದ್ಧ ಕತ್ತಿ ಮಸೆದಾಗ ಕ್ರಿಕೆಟ್ ಸೇರಿದಂತೆ ಇನ್ನಿತರ ಯಾವುದೇ ಕ್ರೀಡೆಗಳು ನಡೆಯದಂತೆ ನೋಡಿ ಕೊಳ್ಳುತ್ತಿದ್ದರು. ಆದರೆ ಇದೀಗ ಪ್ರಧಾನಿ ಮೋದಿ ರವರು, ಕ್ರೀಡೆಗಳನ್ನು ನಡೆಯದಂತೆ ನೋಡಿ ಕೊಳ್ಳುವುದಷ್ಟೇ ಅಲ್ಲದೇ, ತುತ್ತು ಅನ್ನಕ್ಕೆ ಪರದಾಡುವಂತೆ ಮಾಡಿ, ಏಟಿಗೆ ಎದುರೇಟು ನೀಡಿ, ನಿಮ್ಮ ದೇಶಕ್ಕೆ ತಕ್ಕ ಶಾಸ್ತಿ ಮಾಡುತ್ತಿದ್ದಾರೆ. ಹೌದು, ಮೋದಿ ಇರುವವರೆಗೂ ನಿಮ್ಮ ಜೊತೆ ಕ್ರಿಕೆಟ್ ನಡೆಯುವುದಿಲ್ಲ ಅಷ್ಟೇ ಅಲ್ಲಾ, ನಿಮ್ಮ ದೇಶಕ್ಕೆ ಬುದ್ದಿ ಕಲಿಸದೇ ಬಿಡುವುದಿಲ್ಲ ಎಂದಿದ್ದಾರೆ.