ಕೆ ಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕದ ಕುರಿತು ಆಯ್ಕೆ ಸಮಿತಿಗೆ ತನ್ನ ಅಭಿಪ್ರಾಯ ರವಾನೆ ಮಾಡಿದ ವಿವಿಎಸ್ ಲಕ್ಷ್ಮಣ್ ! ಹೇಳಿದ್ದೇನು ಗೊತ್ತಾ??

ಕೆ ಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕದ ಕುರಿತು ಆಯ್ಕೆ ಸಮಿತಿಗೆ ತನ್ನ ಅಭಿಪ್ರಾಯ ರವಾನೆ ಮಾಡಿದ ವಿವಿಎಸ್ ಲಕ್ಷ್ಮಣ್ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ ರವರ ಬ್ಯಾಟಿಂಗ್ ಕ್ರಮಾಂಕ ಭಾರಿ ಸದ್ದು ಮಾಡುತ್ತಿದೆ.

ಕೆಲವರು ಭಾರತ ತಂಡಕ್ಕೆ ಫಿನಿಶರ್ ಹಾಗೂ ಐದನೇ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಮಾಡುವ ಆಟಗಾರನ ಅವಶ್ಯಕತೆ ಇದೆ, ಆದ ಕಾರಣದಿಂದ ಐದನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯಲಿ ಎಂದರೇ, ಮತ್ತಷ್ಟು ಜನ ಶಿಖರ್ ಧವನ್ ಸ್ಥಾನವನ್ನು ಕೆ ಎಲ್ ರಾಹುಲ್ ರವರಿಗೆ ನೀಡಲಿ, ಆರಂಭಿಕ ಆಟಗಾರನಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ತಮ್ಮದೇ ಆದ ಅಭಿಪ್ರಾಯ ಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಆಯ್ಕೆ ಸಮಿತಿಯು ಕೆ ಎಲ್ ರಾಹುಲ್ ರವರನ್ನು ವಿವಿಧ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಂತೆ ಮಾಡಿ ತಂಡಕ್ಕೆ ಅಗತ್ಯವಿದ್ದಾಗ ಬ್ಯಾಟಿಂಗ್ ಮಾಡುವ ಅವಕಾಶ ನೀಡುವತ್ತ ಗಮನ ಹರಿಸಿದೆ. ಇದರ ಕುರಿತು ಇದೀಗ ಭಾರತೀಯ ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ರವರು ಮಾತನಾಡಿದ್ದು ನನ್ನನ್ನು ಕೇಳುವುದಾದರೇ ಕೆ ಎಲ್ ರಾಹುಲ್ ರವರು ಕೇವಲ ಏಕದಿನ ಅಥವಾ ಟಿ-20 ಪಂದ್ಯಗಳಲ್ಲಿ ಮಾತ್ರವಲ್ಲ ಬದಲಾಗಿ ಟೆಸ್ಟ್ ಪಂದ್ಯಗಳಲ್ಲಿ ಮೊದಲು ಸ್ಥಾನ ನೀಡಬೇಕು. ಭಾರತ ತಂಡಕ್ಕೆ ಇನ್ನಿಂಗ್ಸ್ ಆರಂಭದಲ್ಲಿ ಭದ್ರ ಬುನಾದಿಯ ಅವಶ್ಯಕತೆ ಇದ್ದು, ಅದನ್ನು ಕಟ್ಟಲು ರಾಹುಲ್ ರವರು ಸೂಕ್ತ, ಆದ ಕಾರಣ ಕೆ ಎಲ್ ರಾಹುಲ್ ರವರು ಮೂರು ಮಾದರಿ ಗಳಲ್ಲಿಯೂ ಆರಂಭಿಕರಾಗಿ ಕಣಕ್ಕಿಳಿಯುವುದು ಸೂಕ್ತ ಎಂದು ಆಯ್ಕೆ ಸಮಿತಿಗೆ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಮೂಲಕ ರವಾನೆ ಮಾಡಿದ್ದಾರೆ. ಇದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.