ಮಯಂಕ್ ಅಗರ್ವಾಲ್ ಆಟ ಕಂಡು ಫಿದಾ ಆದ ಗೌತಮ್ ಗಂಭೀರ್ ! ಈ ಕುರಿತು ಹೇಳಿದ್ದೇನು ಗೊತ್ತಾ??

ಮಯಂಕ್ ಅಗರ್ವಾಲ್ ಆಟ ಕಂಡು ಫಿದಾ ಆದ ಗೌತಮ್ ಗಂಭೀರ್ ! ಈ ಕುರಿತು ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಒಂದೆಡೆ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದರೇ ಮತ್ತೊಂದೆಡೆ ಮಯಂಕ್ ಅಗರ್ವಲ್ ರವರು ಕ್ರಿಕೆಟ್ ದಿಗ್ಗಜರ ಮನ ಗೆದ್ದಿದ್ದಾರೆ.

ಗಳಿಸಿದ್ದು ಕೆಲವೇ ಕೆಲವು ರನ್ ಗಳಾದರೂ ಆಟವಾಡುವ ಶೈಲಿ ಹಾಗೂ ಪ್ರತಿಯೊಂದು ಬಾಲುಗಳನ್ನು ಎದುರಿಸುವ ರೀತಿ, ಕೌಶಲ್ಯವನ್ನು ಕ್ರಿಕೆಟ್ ದಿಗ್ಗಜರು ಸ್ಪಷ್ಟವಾಗಿ ಗಮನಿಸಿ ಮಯಂಕ್ ಅಗರ್ವಲ್ ರವರ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದೀಗ ಇವರ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ಅವರು, ಮಯಂಕ್ ಅಗರ್ವಲ್ ರವರ ಆಟಕ್ಕೆ ಫಿದಾ ಆಗಿರುವುದು ಸ್ಪಷ್ಟವಾಗಿದೆ.

ಹೌದು ಇದೀಗ ಮಾತನಾಡಿರುವ ಗೌತಮ್ ಗಂಭೀರ್ ಅವರು ಭಾರತದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹವಾಗ್ ಅಥವಾ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ರವರಂತೆ ಮಯಂಕ್ ಅಗರ್ವಲ್ ರವರು ಬ್ಯಾಟ್ ಬೀಸುವುದಿಲ್ಲ, ಬಿರುಸಿನ ಆಟ ಆಡುವುದಿಲ್ಲ, ಆದರೆ ಮಯಂಕ್ ಅಗರ್ವಲ್ ರವರಿಗೆ ಸ್ಪಷ್ಟತೆ ಇದೆ. ಅದೇ ಅವರ ದೊಡ್ಡ ಶಕ್ತಿ, ಅವರು ಅತ್ಯಂತ ಪ್ರಭಾವಶಾಲಿ ಆಟಗಾರ. ಸಂಘಟನಾತ್ಮಕವಾಗಿ ಆಟವಾಡುತ್ತಾರೆ, ಅದರಲ್ಲಿಯೂ ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆ, ಮುಂದೊಂದು ದಿನ ಭಾರತದ ಭರವಸೆಯ ಬ್ಯಾಟ್ಸ್ಮನ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಪತ್ರಿಕೆಗೆ ನೀಡಿರುವ ಲೇಖನದಲ್ಲಿ ತಿಳಿಸಿದ್ದಾರೆ.