NPR ವಿರೋಧಿಸಬೇಕು ಎಂದು ತಯಾರಾಗಿದ್ದ ರಾಜ್ಯಗಳಿಗೆ ಮರ್ಮಘಾತ ! ವಿರೋಧಿಸಿದರೇ ಮೋದಿ ಸರ್ಕಾರ ಚಲಾಯಿಸಬಹುದಾದ ಅಧಿಕಾರವೇನು ಗೊತ್ತಾ??

NPR ವಿರೋಧಿಸಬೇಕು ಎಂದು ತಯಾರಾಗಿದ್ದ ರಾಜ್ಯಗಳಿಗೆ ಮರ್ಮಘಾತ ! ವಿರೋಧಿಸಿದರೇ ಮೋದಿ ಸರ್ಕಾರ ಚಲಾಯಿಸಬಹುದಾದ ಅಧಿಕಾರವೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳನ್ನು ಹೊರತು ಪಡಿಸಿ ಉಳಿದ ರಾಜ್ಯಗಳು ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸುವುದಿಲ್ಲ ಎಂದು ಹೇಳಿಕೆ ನೀಡುತ್ತಿವೆ.

ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾದ NPR ಯೋಜನೆಯನ್ನು ಕೂಡ ನಾವು ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿವೆ. ಅದರಲ್ಲಿಯೂ ಎರಡು ದಿನಗಳ ಹಿಂದೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾದ ಕಮಲ್ ನಾಥ್ ಅವರು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳನ್ನು ನಮ್ಮಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದರು.

ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸಂಸದರಾಗಿರುವ ನರಸಿಂಹ ರಾವ್ ರವರು ಪೌರತ್ವವು ಸಂಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಕೇಂದ್ರ ಸರ್ಕಾರ ಅಂಗೀಕಾರ ಮಾಡಿದ ಯಾವುದೇ ಕಾನೂನನ್ನು ರಾಜ್ಯ ಸರ್ಕಾರ ಸಾಂವಿಧಾನಿಕವಾಗಿ ನಿರಾಕರಿಸಲು ಸಾಧ್ಯವೇ ಇಲ್ಲ. ಮಧ್ಯಪ್ರದೇಶ ಬಿಡೀ ಉಳಿದ ಯಾವುದೇ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ದ ಹೆಜ್ಜೆ ಇಟ್ಟು ಯಾವುದೇ ಮಸೂದೆಗಳನ್ನು ತಿರಸ್ಕಾರ ಮಾಡಿದ್ದಲ್ಲಿ 56 ಇಂಚಿನ ಎದೆಗಾರಿಕೆ ತೋರಿಸುವ ಸಮಯ ಬರುತ್ತದೆ. ಆಗ ಬೇರೆ ವಿಧಿ ಇಲ್ಲದೆ ನಾವು ರಾಷ್ಟ್ರಪತಿಯ ಆಡಳಿತವನ್ನು ವಿಧಿಸುತ್ತೇವೆ. ಕಾನೂನಿನ ಪ್ರಕಾರ ವಿಧಿ 256 ರ ಅಡಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕ್ಷಣಮಾತ್ರದಲ್ಲಿ ಆದೇಶ ನೀಡಬಹುದು. ಪೌರತ್ವ ಎಂಬುದು ಯಾವುದೇ ದೇಶಗಳ ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.