ಪಂದ್ಯ ಸೋತರೂ ಕಳೆದ 30 ವರ್ಷಗಳಲ್ಲಿ ಯಾರೂ ಸಾಧಿಸಲಾಗದ ಸಾಧನೆ ಮಾಡಿದ ಮಯಾಂಕ್ ಅಗರ್ವಾಲ್ !

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ತಂಡವು ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದೆ. ನ್ಯೂಜಿಲೆಂಡ್ ತಂಡದ ನಡುವೆ ನಡೆದ ಟಿ-20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕಾರಣ ಅಭಿಮಾನಿಗಳಲ್ಲಿ ಏಕದಿನ ಹಾಗೂ ಟೆಸ್ಟ್ ಸರಣಿಯ ಮೇಲೆ ಬಾರಿ ನಿರೀಕ್ಷೆ ಇತ್ತು. ಆದರೆ ಏಕದಿನ ಸರಣಿಯಲ್ಲಿನ ಕಳಪೆ ಆಟವನ್ನು ಇದೀಗ ಟೆಸ್ಟ್ ಸರಣಿಯಲ್ಲಿಯೂ ಮುಂದುವರೆಸಿದ್ದಾರೆ.

ಇದರ ನಡುವೆಯೇ ಮಯಾಂಕ್ ಅಗರ್ವಾಲ್ ರವರು ಮಾತ್ರ ಕೊಂಚ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 34 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 58 ರನ್ ಗಳ ಕಾಣಿಕೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಇದೇ ಸಮಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಬಹಳ ತಾಳ್ಮೆಯಿಂದ ಬ್ಯಾಟಿಂಗ್ ಮಾಡುವ ಮೂಲಕ ಟೆಸ್ಟ್ ಪಂದ್ಯದ ಮೊದಲ ಅವಧಿಯಲ್ಲಿ (SESSION) ಔಟ್ ಆಗದೇ ಉಳಿದಿದ್ದರು. ಇದು ಒಂದು ವಿಶೇಷ ದಾಖಲೆಗೆ ಕಾರಣವಾಗಿದೆ. ಹೌದು, ಕಳೆದ 30 ವರ್ಷಗಳಿಂದ ಆರಂಭಿಕನಾಗಿ ಕಣಕ್ಕೆ ಇಳಿದ ಯಾವೊಬ್ಬ ಭಾರತೀಯ ಆಟಗಾರನು ಕೂಡ ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ನ ಮೊದಲ ಅವಧಿಯಲ್ಲಿ ಅಜೇಯರಾಗಿ ಉಳಿದಿರಲಿಲ್ಲ. ಈ ಮೂಲಕ ಕಳೆದ 30 ವರ್ಷಗಳ ಅವಧಿಯಲ್ಲಿಯೇ ಮೊದಲ ಇನ್ನಿಂಗ್ಸ್ ನ ಮೊದಲ ಸೆಶನ್ ನಲ್ಲಿ ಅಜೇಯರಾಗಿ ಉಳಿದ ಆರಂಭಿಕ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

Post Author: Ravi Yadav