ಟಿ-20 ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಆಸ್ಟ್ರೇಲಿಯಾ ಆಟಗಾರ ಕ್ರೆಡಿಟ್ ನೀಡಿದ್ದು ಮಾತ್ರ ಭಾರತೀಯನಿಗೆ ! ಈತನೇ ನನ್ನ ಸ್ಪೂರ್ತಿ ಎಂದು ಹೊಗಳಿ ಹೇಳಿದ್ದೇನು ಗೊತ್ತಾ?

ಟಿ-20 ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಆಸ್ಟ್ರೇಲಿಯಾ ಆಟಗಾರ ಕ್ರೆಡಿಟ್ ನೀಡಿದ್ದು ಮಾತ್ರ ಭಾರತೀಯನಿಗೆ ! ಈತನೇ ನನ್ನ ಸ್ಪೂರ್ತಿ ಎಂದು ಹೊಗಳಿ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಆಸ್ಟ್ರೇಲಿಯಾದ ಆಫ್-ಸ್ಪಿನ್ನರ್ ಆಸ್ಟನ್ ಅಗರ್ ರವರು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.

ಈ ಮೂಲಕ 2007ರಲ್ಲಿ ಖ್ಯಾತ ಬೌಲರ್ ಬ್ರೆಟ್ ಲೀ ರವರ ಸಾಧನೆಯನ್ನು ಸರಿ ಗಟ್ಟಿರುವ
ಆಸ್ಟನ್ ಅಗರ್ ರವರು, ಬಂದಿದ್ದ ಎಂಟನೇ ಓವರ್ನಲ್ಲಿ ಸೌತ್ ಆಫ್ರಿಕಾದ ಫ್ಲಾಫ್ ಡು ಪ್ಲೆಸಿಸ್, ಆಂಡಿಲೆ ಫೆಹ್ಲುಕ್ವೇವೊ ಮತ್ತು ಡೇಲ್ ಸ್ಟೇನ್‍ ರವರ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು. ಪಂದ್ಯದ ಬಳಿಕ ಇದರ ಕುರಿತು ಮಾತನಾಡಿರುವ ಆಸ್ಟ್ರೇಲಿಯಾ ಆಟಗಾರ ಆಸ್ಟನ್ ರವರು, ಸಂಪೂರ್ಣ ಕ್ರೆಡಿಟ್ ಅನ್ನು ಭಾರತೀಯ ಆಲ್ರೌಂಡರ್ ರವೀಂದ್ರ ಜಡೇಜ ರವರಿಗೆ ನೀಡಿದ್ದಾರೆ.

ಅಷ್ಟಕ್ಕೂ ರವೀಂದ್ರ ಜಡೇಜಾ ರವರೇ ಇವರಿಗೆ ಸ್ಫೂರ್ತಿ ಆಗಲು ಕಾರಣವೇನು?? ತಿಳಿಯಲು ಕೆಳಗಡೆ ಓದಿ.

ರವೀಂದ್ರ ಜಡೇಜ ರವರು ಒಬ್ಬ ರಾಕ್ ಸ್ಟಾರ್, ಕೇವಲ ಬೌಲಿಂಗ್ನಲ್ಲಿ ಮಾತ್ರವಲ್ಲದೇ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ತಮ್ಮದೇ ಆದ ಕಾಣಿಕೆಯ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ. ಅವರು ನನ್ನ ನೆಚ್ಚಿನ ಆಟಗಾರ, ಅವರೇ ನನ್ನ ಸ್ಪೂರ್ತಿ. ಕಳೆದ ಬಾರಿ ಭಾರತದಲ್ಲಿ ಇರುವಾಗ ರವೀಂದ್ರ ಜಡೇಜಾ ರವರ ಜೊತೆ ಸಾಕಷ್ಟು ಸಂಭಾಷಣೆ ಮಾಡಿ ಸಾಕಷ್ಟು ವಿಷಯಗಳನ್ನು ಅವರಿಂದ ಕಲಿತುಕೊಂಡಿದ್ದೇನೆ. ನಾನು ಮುಂದೊಂದು ದಿನ ರವೀಂದ್ರ ಜಡೇಜಾ ರವರಂತೆ ಸರಾಗವಾಗಿ ಬ್ಯಾಟ್ ಬೀಸಿ, ಬೌಲಿಂಗ್ ಮಾಡಿ
ಪಂದ್ಯವನ್ನು ಗೆಲ್ಲಿಸಿ ಕೊಡಬೇಕು. ನಾನು ಅವರಂತೆ ಹಾಡಲು ಬಯಸುತ್ತೇನೆ ಎಂದು ಹಾಡಿ ಹೊಗಳಿದ್ದಾರೆ.