ಏಷ್ಯಾ ಹಾಗೂ ವಿಶ್ವ XI ಪಂದ್ಯಗಳಿಗೆ ನಾಲ್ವರು ಆಟಗಾರರ ಹೆಸರನ್ನು ಕಳುಹಿಸಿದ ಗಂಗೂಲಿ ! ಆಯ್ಕೆ ಸರಿಯಿಲ್ಲ ಎಂದ ನೆಟ್ಟಿಗರು ! ಯಾಕೆ ಗೊತ್ತಾ?

ಏಷ್ಯಾ ಹಾಗೂ ವಿಶ್ವ XI ಪಂದ್ಯಗಳಿಗೆ ನಾಲ್ವರು ಆಟಗಾರರ ಹೆಸರನ್ನು ಕಳುಹಿಸಿದ ಗಂಗೂಲಿ ! ಆಯ್ಕೆ ಸರಿಯಿಲ್ಲ ಎಂದ ನೆಟ್ಟಿಗರು ! ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ತಂಡಗಳ ನಡುವೆ ಎರಡು ಅಂತರ್ರಾಷ್ಟ್ರೀಯ ಟಿ-ಟ್ವೆಂಟಿ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳು ಬಾಂಗ್ಲಾ ದೇಶದ ರಾಜಧಾನಿ ಢಾಕಾ ನಗರದಲ್ಲಿ ನಡೆಯಲಿದ್ದು ಈಗಾಗಲೇ ತಯಾರಿ ಆರಂಭವಾಗಿದೆ.

ಮೊದಲಿಗೆ ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಪಾಕಿಸ್ತಾನ ದೇಶಗಳಿಂದ ಕೂಡ ಆಟಗಾರರು ಏಷ್ಯಾ ತಂಡದ ಪರವಾಗಿ ಭಾಗವಹಿಸುತ್ತಾರೆ ಎಂದು ತಿಳಿದ ತಕ್ಷಣ ಸೌರವ್ ಗಂಗೂಲಿ ರವರು ಯಾವುದೇ ಕಾರಣಕ್ಕೂ ಪಾಕಿಸ್ತಾನಿ ದೇಶದ ಕ್ರಿಕೆಟಿಗರ ಜೊತೆ ಭಾರತೀಯ ತಂಡದ ಆಟಗಾರರು ಪಾಲ್ಗೊಂಡು ಡ್ರೆಸ್ಸಿಂಗ್ ರೂಮ್ ಹಂಚಿ ಕೊಳ್ಳುವುದಿಲ್ಲ, ಒಂದೇ ತಂಡದಲ್ಲಿ ಆಟವಾಡುವುದಂತೂ ಅಸಾಧ್ಯದ ಮಾತು ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದರು. ಈ ಮೂಲಕ ಏಷ್ಯಾ ಇಲೆವೆನ್ ತಂಡದಲ್ಲಿ ಭಾರತೀಯ ಆಟಗಾರರು ಪಾಲ್ಗೊಳ್ಳುವುದು ಬಹುತೇಕ ಅನುಮಾನವಾಗಿತ್ತು. ಆದರೆ ಇದೀಗ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಟೂರ್ನಿಯಿಂದ ದೂರ ಉಳಿದಿದ್ದು ಲೋಕಲ್ ಟೂರ್ನಮೆಂಟ್ ನಲ್ಲಿ ಆಟವಾಡುತ್ತಿದ್ದಾರೆ. ಈ ವಿಷಯವನ್ನು ಖಚಿತ ಪಡಿಸಿಕೊಂಡಿರುವ ಬಿಸಿಸಿಐ ಸಂಸ್ಥೆಯು ಸೌರವ್ ಗಂಗೂಲಿ ರವರ ಜೊತೆ ಮಾತುಕತೆ ನಡೆಸಿ ಭಾರತ ತಂಡದ ನಾಲ್ವರು ಆಟಗಾರರನ್ನು ಏಷ್ಯಾ ತಂಡದಲ್ಲಿ ಪಾಲ್ಗೊಳ್ಳಲು ಆಯ್ಕೆ ಮಾಡಿದೆ.

ಆಟಗಾರರ ಇತರ ಪಂದ್ಯಗಳ ಮೇಲೆ ಪ್ರಭಾವ ಬೀರದಂತೆ ನಾಯಕ ವಿರಾಟ್ ಕೊಹ್ಲಿ, ಆರಂಭಿಕ ಆಟಗಾರರಾಗಿ ಶಿಖರ್ ಧವನ್ ಹಾಗೂ ಬೌಲರ್ಗಳ ಕೋಟಾದಲ್ಲಿ ಮಹಮ್ಮದ್ ಶಮಿ ಹಾಗೂ ಕುಲದೀಪ್ ಯಾದವ್ ರವರನ್ನು ದೇಶದ ಪರವಾಗಿ ಪ್ರತಿನಿಧಿಸಲು ಕಳುಹಿಸುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ವಿಶ್ವ ಇಲೆವೆನ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ನಾಲ್ವರು ಭಾರತೀಯ ಆಟಗಾರರು ಸ್ಥಾನ ಪಡೆಯುವುದು ಖಚಿತ ವಾಗಿದೆ. ಆದರೆ ಕೆಲವರು ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಸೇರಿದಂತೆ ಜಸ್ಟೀತ್ ಬುಮ್ರಾ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಆಟಗಾರರ ಇತರ ಪಂದ್ಯಗಳ ಶೆಡ್ಯೂಲ್ ಹಾಗೂ ವಿಶ್ರಾಂತಿ ದಿವಸಗಳ ಲೆಕ್ಕಾಚಾರದ ಮೇಲೆ ಆಯ್ಕೆ ನಡೆದಿದೆ ಎಂದು ಬಿಸಿಸಿಐ ಸಂಸ್ಥೆ ಉತ್ತರ ನೀಡಿದೆ.