ತಾನೆ ವಿಶ್ವದ ನಂಬರ್ ವನ್ ಬೌಲರ್ ಎಂದು ಬೀಗುತ್ತಿದ್ದ ಆಸ್ಟ್ರೇಲಿಯಾ ಬೌಲರ್ ಗೆ ಚಳಿ ಬಿಡಿಸಿ 16 ವರ್ಷದ ಭಾರತೀಯ ಆಟಗಾರ್ತಿ 6 ಎಸೆತದಲ್ಲಿ ಗಳಿಸಿದ ರನ್ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನಡೆಯುತ್ತಿರುವ ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡವು ಆಸ್ಟ್ರೇಲಿಯ ತಂಡದ ವಿರುದ್ಧ ಜಯಗಳಿಸುವ ಮೂಲಕ ಭರ್ಜರಿ ಆರಂಭವನ್ನು ಮಾಡಿದೆ.

ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮೊದಲ ಪಂದ್ಯದಲ್ಲಿಯೇ ತನ್ನ ಅತ್ಯುತ್ತಮ ಪ್ರದರ್ಶನದ ಮೂಲಕ ಕಟ್ಟಿಹಾಕಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ 16 ವರ್ಷದ ಆಟಗಾರ್ತಿ ಇದೀಗ ಭಾರಿ ಸದ್ದು ಮಾಡುತ್ತಿದ್ದಾರೆ. ವಿಶ್ವದ ನಂಬರ್ 1 ಬೌಲರ್ ಎಂಬುದನ್ನು ನೋಡದೇ, ಪವರ್ ಪ್ಲೇ ನಲ್ಲಿ ಮೈಚಳಿ ಬಿಡಿಸಿರುವ
ಶಫಾಲಿ ಶರ್ಮ ರವರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದ್ದಾರೆ. ಲೇಡಿ ಸೆಹವಾಗ್ ಎಂದು ಜನರು ಟ್ವಿಟ್ಟರ್ ಸೇರಿದಂತೆ ಫೇಸ್ಬುಕ್ ಗಳಲ್ಲಿ ಟ್ರೆಂಡಿಂಗ್ ಆರಂಭಿಸಿದ್ದಾರೆ.

ಇದಕ್ಕೆಲ್ಲ ಕಾರಣ ಕೇವಲ ಒಂದು ಓವರ್ ಎಂದರೆ ನೀವು ನಂಬಲೇಬೇಕು, ಇಷ್ಟು ದಿವಸ ಅದ್ಭುತ ಸಿಕ್ಸರ್ ಗಳ ಮೂಲಕ ಸದ್ದು ಮಾಡುತ್ತಿದ್ದ ಶಫಾಲಿ ಶರ್ಮ ರವರು ವಿಶ್ವದ ನಂಬರ್ ಒನ್ ಬೌಲರ್ ಮೇಗನ್ ರವರಿಗೆ 4 ಬೌಂಡರಿ ಗಳಿಸುವ ಮೂಲಕ 16 ರನ್ ಕಲೆಹಾಕಿದರು. ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಗೆರೆಯಾಚೆ ಬಾಲ್ ಅನ್ನು ಕಳುಹಿಸಿ, ತದನಂತರ ಕೊನೆಗೆ ಎರಡು ಎಸೆತಗಳನ್ನು ಕೂಡ ಬೌಂಡರಿ ಗೆರೆ ದಾಟಿಸಿದರು. ಮೊದಲ ಬಾರಿಗೆ ವಿಶ್ವಕಪ್ ನಂತಹ ದೊಡ್ಡ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿರುವ ಕೇವಲ 16 ವರ್ಷದ ಆಟಗಾರ್ತಿಯಾಗಿರುವ ಕಾರಣ ಯಾವುದೇ ಅಂಜಿಕೆಯಿಲ್ಲದೆ ಬ್ಯಾಟ್ ಬೀಸಿ ಲೇಡೀ ಸೆಹವಾಗ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Post Author: Ravi Yadav