ಮತ್ತೊಂದು ಐತಿಹಾಸಿಕ ಮಸೂದೆ ಮಂಡಿಸಲು ಸಿದ್ಧವಾದ ಬಿಜೆಪಿ ! ಎಲ್ಲಾ ಸಂಸದರಿಗೆ ಮತ್ತೊಂದು ಆದೇಶ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಮೋದಿ ಸರ್ಕಾರವು ಎರಡನೇ ಬಾರಿ ಅಧಿಕಾರಕ್ಕೇರಿದ ಮೇಲೆ ತನ್ನ ಪ್ರಣಾಳಿಕೆಯಲ್ಲಿನ ದೊಡ್ಡದೊಡ್ಡ ಆಶ್ವಾಸನೆಗಳನ್ನು ಈಡೇರಿಸುತ್ತಾ ದಿಟ್ಟ ಹೆಜ್ಜೆ ಇಡುತ್ತಿದೆ.

ಈಗಾಗಲೇ ಪ್ರಣಾಳಿಕೆಯಲ್ಲಿನ ಬಹುತೇಕ ಅಂಶಗಳು ಈಡೇರುತ್ತಿದ್ದು ಬಿಜೆಪಿಗೆ ಮತ ನೀಡಿ ರುವ ಜನರು ಫುಲ್ ಖುಷ್ ಆಗಿದ್ದಾರೆ. ಈಗಾಗಲೇ ಹಲವಾರು ಐತಿಹಾಸಿಕ ಮಸೂದೆಗಳನ್ನು ಮಂಡಿಸಿರುವ ಬಿಜೆಪಿ ಪಕ್ಷ ಇದೀಗ ಮತ್ತೊಂದು ದೊಡ್ಡ ಮಸೂದೆಯನ್ನು ‌ಮಂಡಿಸಲು ಸಿದ್ಧವಾಗಿದೆ. ಹೌದು, ಇದೆ ಕಾರಣಕ್ಕಾಗಿ ಇದೀಗ ಬಿಜೆಪಿ ಪಕ್ಷವು ತನ್ನ ಎಲ್ಲಾ ಸಂಸದರಿಗೆ ವಿಪ್ ಜಾರಿಮಾಡಿದೆ. ತನ್ನ ಎಲ್ಲಾ ರಾಜ್ಯ ಸಂಸದರಿಗೆ ಮೂರು ಲೈನುಗಳ ವಿಪ್ ಜಾರಿ ಮಾಡಿರುವ ಬಿಜೆಪಿ ಪಕ್ಷವು ನಾಳೆ ಸದನದಲ್ಲಿ ಹಾಜರಿದ್ದು ಸರ್ಕಾರದ ನಡೆಯನ್ನು ಬೆಂಬಲಿಸಲಿ ಬೇಕು ಎಂಬ ಆದೇಶ ಹೊರಡಿಸಿದೆ.

ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಐತಿಹಾಸಿಕ ನಿರ್ಧಾರವಾದ ಏಕರೂಪ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಬಿಜೆಪಿ ಪಕ್ಷ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಭಾರತವು ಜಾತ್ಯತೀತ ರಾಷ್ಟ್ರವಾದ ಕಾರಣ ಎಲ್ಲಾ ಧರ್ಮಗಳು ಇಲ್ಲಿ ಸಮಾನವಾಗಿರುತ್ತದೆ, ಆದ ಕಾರಣದಿಂದ ಎಲ್ಲಾ ಧರ್ಮಗಳು ಒಂದೇ ಕಾನೂನನ್ನು ಅನುಸರಿಸಲಿ ಎಂಬುದು ಬಿಜೆಪಿ ಪಕ್ಷದ ವಾದವಾಗಿದೆ. ಆದರೆ ಇದೀಗ ಭಾರತದಲ್ಲಿ ಧರ್ಮಗಳ ಆಧಾರದ ಮೇಲೆ ವ್ಯಕ್ತಿಯು ತನ್ನದೇ ಆದ ಕಾನೂನುಗಳನ್ನು ಪಾಲಿಸುತ್ತಿದ್ದಾರೆ, ಈ ಮೂಲಕ ಧರ್ಮಗಳ ನಡುವೆ ಇರುವ ಕಾನೂನಿನ ತಾರತಮ್ಯತೆ ಯನ್ನು ಬಿಜೆಪಿ ಪಕ್ಷ ತೆಗೆದು ಹಾಕಲು ನಿರ್ಧಾರ ಮಾಡಿದೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.