53 ವರ್ಷಗಳ ಕನಸನ್ನು ನನಸು ಮಾಡಲು ಮುಂದಾದ ಬಿಪಿನ್ ! ಸೇನೆಯ ಅತಿ ದೊಡ್ಡ ಸಮಸ್ಯೆಗೆ ಪರಿಹಾರ ನೀಡಲು ಮಾಡಲು ಹೊರಟಿರುವುದು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದಷ್ಟೇ ಭಾರತೀಯ ಸೇನೆಯ ಮೂರು ಪ್ರತ್ಯೇಕ ವಿಭಾಗಗಳಿಗೆ ಸಿಡಿಎಸ್ ಮುಖ್ಯಸ್ಥ ಎಂದು ಹೊಸ ಹುದ್ದೆಯನ್ನು ಸೃಷ್ಠಿಸಿ ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳ ಮುಖ್ಯಸ್ಥರನ್ನಾಗಿಗಿ ಬಿಪಿನ್ ರಾವತ್ ರವರನ್ನು ಆಯ್ಕೆ ಮಾಡಿತ್ತು.

ಈ ಹುದ್ದೆಯು ಸೂಕ್ತವಲ್ಲ ಎಂದು ಹಲವಾರು ಜನ ಅಭಿಪ್ರಾಯ ಪಟ್ಟಿದ್ದರು, ಆದರೆ ಈ ಹುದ್ದೆಯ ಶಕ್ತಿಯನ್ನು ಇದೀಗ ಬಿಪಿನ್ ರಾವತ್ ರವರು, ತೋರಿಸುತ್ತಿದ್ದಾರೆ. ಇದೀಗ ಅದೇ ನಿಟ್ಟಿನಲ್ಲಿ ಮತ್ತೊಂದು ದೊಡ್ಡ ಹೆಜ್ಜೆಯನ್ನಿಟ್ಟಿರುವ ಬಿಪಿನ್ ರಾವತ್ ರವರು ಮಹತ್ವದ ಹೆಜ್ಜೆ ಇಟ್ಟು ಭಾರತೀಯ ಸೇನೆಯ 53 ವರ್ಷಗಳ ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಎಷ್ಟೇ ಚಾಕಚಕ್ಯತೆಯಿಂದ ಮುಂದುವರೆದಿದ್ದರೂ ದಿನದಿನವೂ ಹೊಸ ಸವಾಲುಗಳನ್ನು ಎದುರಿಸಲು, ಭದ್ರತಾ ನಿರ್ವಹಣೆಯಲ್ಲಿ ಹಲವಾರು ನ್ಯೂನತೆಗಳನ್ನು ಸರಿಪಡಿಸಿಕೊಂಡು ಕಾರ್ಯತಂತ್ರಗಳ ಸವಾಲುಗಳನ್ನು ಎದುರಿಸಲು ಹಲವಾರು ನೀತಿಗಳನ್ನು ದಿನೇದಿನೇ ರಚಿಸಸಬೇಕಾಗುತ್ತದೆ. ಅದೇ ಕಾರಣಕ್ಕಾಗಿ ಸೇನೆಯು ಕಳೆದ 53 ವರ್ಷಗಳ ಹಿಂದಿನಿಂದಲೂ ಪ್ರತ್ಯೇಕ ಭಾರತೀಯ ರಕ್ಷಣಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಆಸಕ್ತಿ ಹೊಂದಿತ್ತು.

53 ವರ್ಷಗಳಿಂದ ಈಡೇರದ ಈ ಕನಸನ್ನು ಇದೀಗ ಬಿಪಿನ್ ರಾವತ್ ರವರು ಭಾರತೀಯ ರಕ್ಷಣಾ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಬೇಕಾಗಿರುವ ಮಸೂದೆಗಳನ್ನು ಅಂಗೀಕಾರ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಇವರ ಈ ಬೇಡಿಕೆಗೆ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದು ಕೇಂದ್ರ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ರವರು ವಿಶ್ವವಿದ್ಯಾನಿಲಯದ ಕುರಿತು ಸಂಪೂರ್ಣ ವಿವರಗಳನ್ನು ಕೂಡಲೇ ತಿಳಿಸುವಂತೆ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ. ಈ ಮೂಲಕ ಇದೀಗ ಭಾರತದಲ್ಲಿ ಪ್ರತ್ಯೇಕವಾಗಿ ಭಾರತೀಯ ರಕ್ಷಣಾ ವಿಶ್ವವಿದ್ಯಾನಿಲಯವು ರಚನೆಯಾಗುವುದು ಬಹುತೇಕ ಖಚಿತವಾಗಿದ್ದು, ಸಂಪೂರ್ಣ ವಿವರಗಳನ್ನು ನೀಡಿದ ನಂತರ ನರೇಂದ್ರ ಮೋದಿರವರು ಒಮ್ಮೆ ಅನುಮೋದನೆ ನೀಡಿದರೇ ಸಾಕು ಕೆಲವೇ ಕೆಲವು ತಿಂಗಳುಗಳಲ್ಲಿ ಭಾರತೀಯ ರಕ್ಷಣಾ ವಿಶ್ವವಿದ್ಯಾನಿಲಯ ತಲೆಯೆತ್ತಲಿದೆ. ಈ ವಿದ್ಯಾನಿಲಯದಲ್ಲಿ ಭಾರತೀಯ ಸೇನೆಯು ಭದ್ರತಾ ನಿರ್ವಹಣೆಯಲ್ಲಿ ಇರುವ ನ್ಯೂನ್ಯತೆಗಳು ಹಾಗೂ ಮುಂದೆ ಎದುರಾಗುವ ಹೊಸ ಸವಾಲುಗಳನ್ನು ಹೇಗೆ ತನ್ನದೇ ಆದ ಕಾರ್ಯತಂತ್ರಗಳ ಮೂಲಕ ನಿವಾರಿಸಬೇಕು ಎಂಬುದರ ಕುರಿತು ನೀತಿಗಳನ್ನು ರಚಿಸಲಿದೆ.

Post Author: Ravi Yadav