ಒಂದೆಡೆ ಸ್ಟಾರ್ ಬೌಲರ್ ಕಳೆದುಕೊಂಡ ರಾಜಸ್ತಾನ ರಾಯಲ್ಸ್ !ಮತ್ತೊಂದೆಡೆ ಮುಂಬೈ ಸ್ಟಾರ್ ಬ್ಯಾಟ್ಸಮನ್ ಆಡುವುದು ಅನುಮಾನ ! ಯಾರು ಮತ್ತು ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವದ ಅತಿ ಶ್ರೀಮಂತ ಲೀಗ್ ಐಪಿಎಲ್ ಆರಂಭವಾಗಲು ದಿನಗಣನೆ ಆರಂಭವಾಗಿದೆ. ಅನಧಿಕೃತ ಮಾಹಿತಿಗಳ ಪ್ರಕಾರ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಐಪಿಎಲ್ ಟೂರ್ನಿಯು ನಡೆಯುತ್ತದೆ.

ಈಗಾಗಲೇ ಐಪಿಎಲ್ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಕ್ರಿಕೆಟ್ ದಿಗ್ಗಜರು ಹಾಗೂ ತಂಡದ ಮಾಲೀಕರು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಕೋಟಿ ಕೋಟಿ ಖರ್ಚು ಮಾಡಿ ಆಟಗಾರರನ್ನು ಖರೀದಿ ಮಾಡಿದ್ದಾರೆ. ಈಗಾಗಲೇ ಹಲವಾರು ಆಟಗಾರರು ತಮ್ಮ ಫ್ರಾಂಚೈಸಿಗಳ ಅನಧಿಕೃತ ಮೈದಾನಗಳಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಆರ್ಸಿಬಿ ತಂಡದ ಹಲವಾರು ಆಟಗಾರರು ಕೂಡ ಈಗಾಗಲೇ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿ, ಬೆವರು ಸುರಿಸುತ್ತಿದ್ದಾರೆ. ಆದರೆ ಇನ್ನೂ ಟೂರ್ನಿ ಆರಂಭವಾಗುವ ಮುನ್ನವೇ ಐಪಿಎಲ್ ಟೂರ್ನಿಯಿಂದ ಒಬ್ಬ ಸ್ಟಾರ್ ಆಟಗಾರ ಖಚಿತವಾಗಿ ಹೊರ ಹೋಗಿದ್ದಾರೆ, ಇನ್ನು ಭಾರತೀಯ ಸ್ಟಾರ್ ಆಟಗಾರ ಐಪಿಎಲ್ ಟೂರ್ನಿ ಆಡುವುದು ಬಹುತೇಕ ಅನುಮಾನವಾಗಿದೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ರಾಜಸ್ತಾನ ರಾಯಲ್ಸ್ ತಂಡದಲ್ಲಿ ತನ್ನದೇ ಆದ ಛಾಪು ಮೂಡಿಸಿ ಎದುರಾಳಿ ಬ್ಯಾಟ್ಸ್ ಮನ್ ಗಳಿಗೆ ಕಂಟಕವಾಗಿ ಕಾಡುತ್ತಿದ್ದ ಜೋಫ್ರಾ ಅರ್ಚರ್ ರವರು ಮೊಣಕೈ ಗಾಯ ಮಾಡಿಕೊಂಡು ಐಪಿಎಲ್ ಟೂರ್ನಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಖಚಿತ ಪಡಿಸಿದ್ದಾರೆ. ಇನ್ನು ನ್ಯೂಜಿಲೆಂಡ್ ತಂಡದ ವಿರುದ್ಧ ಸರಣಿಯಲ್ಲಿ ಗಾಯದ ಸಮಸ್ಯೆಯಿಂದ ಹೊರ ಬಿದ್ದಿರುವ ರೋಹಿತ್ ಶರ್ಮಾ ರವರು, ಈಗಾಗಲೇ ನ್ಯೂಜಿಲೆಂಡ್ ಪ್ರವಾಸವನ್ನು ಮೊಟಕುಗೊಳಿಸಿದ್ದು, ಐಪಿಎಲ್ ಟೂರ್ನಿಯಲ್ಲಿ ಆಡುವುದು ಬಹುತೇಕ ಅನುಮಾನವಾಗಿದೆ. ರೋಹಿತ್ ಶರ್ಮಾರನ್ನು ಬಹು ಬೇಗ ಗುಣಮುಖ ರನ್ನಾಗಿ ಮಾಡಲು ವೈದ್ಯರ ತಂಡವು ನಿರತ ಶ್ರಮದಲ್ಲಿ ತೊಡಗಿದೆ ಎಂಬುದು ತಿಳಿದುಬಂದಿದೆ. ಒಂದು ವೇಳೆ ರೋಹಿತ್ ಶರ್ಮಾ ರವರು ಐಪಿಎಲ್ ಟೂರ್ನಿಗೆ ಅಲಭ್ಯವಾದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ.

Post Author: Ravi Yadav