ಪೌರತ್ವ ತಿದ್ದುಪಡಿ ಮಸೂದೆ ಕುರಿತು 1 ಕೋಟಿ ಬಹುಮಾನ ಘೋಷಿಸಿ ಬಹಿರಂಗ ಸವಾಲು ಎಸೆದ ಬಿಜೆಪಿ ವಕೀಲ ! ಯಾರಾದರೂ ನಿರೂಪಿಸಲು ಸಿದ್ಧರಿದ್ದೀರಾ??

ಪೌರತ್ವ ತಿದ್ದುಪಡಿ ಮಸೂದೆ ಕುರಿತು 1 ಕೋಟಿ ಬಹುಮಾನ ಘೋಷಿಸಿ ಬಹಿರಂಗ ಸವಾಲು ಎಸೆದ ಬಿಜೆಪಿ ವಕೀಲ ! ಯಾರಾದರೂ ನಿರೂಪಿಸಲು ಸಿದ್ಧರಿದ್ದೀರಾ??

ನಮಸ್ಕಾರ ಸ್ನೇಹಿತರೇ, ಒಂದೆಡೆ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಮಸೂದೆ ಇಂದ ಭಾರತೀಯ ಮುಸಲ್ಮಾನರನ್ನು ಹೊರ ಹಾಕಲಾಗುತ್ತದೆ ಎಂದು ಸುದ್ದಿ ಹಬ್ಬಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಾಯಕ ಹೊಸ ಸವಾಲಿನೊಂದಿಗೆ ಮುಂದೆ ಬಂದಿದ್ದಾರೆ.

ಮೊದಲಿನಿಂದಲೂ ಪೌರತ್ವ ತಿದ್ದುಪಡಿ ಮಸೂದೆಯ ಮೂಲಕ ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೆ ಗುರಿಯಾಗಿರುವ ಅಲ್ಪ ಸಂಖ್ಯಾತರಿಗೆ ಪೌರತ್ವ ನೀಡುತ್ತೇವೆಯೋ ಹೊರತು ಯಾರೊಬ್ಬರ ಪೌರತ್ವವನ್ನು ಕಸಿದು ಕೊಳ್ಳುವುದಿಲ್ಲ ಎಂದು ಬಿಜೆಪಿ ಪಕ್ಷ ವಾದ ಮಂಡಿಸುತ್ತಿದೆ. ಆದರೂ ಪಟ್ಟು ಬಿಡದ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಮಸೂದೆ ಯಿಂದ ಭಾರತೀಯ ಮುಸಲ್ಮಾನರ ಪೌರತ್ವವನ್ನು ಕಿತ್ತು ಕೊಳ್ಳಲಾಗುತ್ತಿದೆ ಎಂದು ವಾದ ಮಂಡಿಸುತ್ತಿವೆ‌. ವಿರೋಧ ಪಕ್ಷಗಳ ವಾದವನ್ನು ಕೇಳಿ ಬೇಸತ್ತಿರುವ ತಮಿಳುನಾಡಿನ ‌ಬಿಜೆಪಿ ಪಕ್ಷದ ಲೀಗಲ್ ಸೆಲ್ ನ ಜಿಲ್ಲಾ ಕಾರ್ಯದರ್ಶಿಯಾಗಿರುವ ತಂಗವೆಲ್ ರವರು ಇದೀಗ ವಿರೋಧ ಪಕ್ಷದವರಿಗೆ ಬಹಿರಂಗ ಸವಾಲು ಎಸೆದು ಈ ಸವಾಲಿನಲ್ಲಿ ಗೆದ್ದರೆ ಬರೋಬ್ಬರಿ ಒಂದು ಕೋಟಿ ನಿಮಗೆ ಸಿಗಲಿದೆ ಎಂದು ಬಹುಮಾನದ ಮೊತ್ತವನ್ನು ಘೋಷಿಸಿದ್ದಾರೆ.

ಅಷ್ಟಕ್ಕೂ ಅವರ ಸವಾಲು ಏನು ಗೊತ್ತಾ?? ತಿಳಿಯಲು ಇಲ್ಲಿ ಓದಿ. ಇಡೀ ದೇಶದಲ್ಲಿ ಯಾರಾದರೂ ಒಬ್ಬರು ಪೌರತ್ವ ತಿದ್ದುಪಡಿ ಮಸೂದೆಯಲ್ಲಿನ ಅಂಶಗಳನ್ನು ತೋರಿಸಿ, ಈ ಅಂಶದ ಮೂಲಕ ಈ ರೀತಿಯ ಭಾರತೀಯರಿಗೆ ತೊಂದರೆಯಾಗುತ್ತದೆ ಹಾಗೂ ಅವರ ಪೌರತ್ವವನ್ನು ಕಸಿದು ಕೊಳ್ಳಲಾಗುತ್ತಿದೆ ಎಂಬ ಯಾವುದಾದರೂ ಅಂಶವನ್ನು ತೋರಿಸಿದರೆ ಅವರಿಗೆ ಒಂದು ಕೋಟಿ ಬಹುಮಾನವನ್ನಾಗಿ ನೀಡುವುದಾಗಿ ತಂಗವೆಲ್ ರವರು ಬಹಿರಂಗವಾಗಿ ಘೋಷಣೆ ಮಾಡಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ಮೊದಲಿನಿಂದಲೂ ಬಿಜೆಪಿ ಪಕ್ಷ ಹೇಳಿದಂತೆ ಪೌರತ್ವ ತಿದ್ದುಪಡಿ ಮಸೂದೆ ಯಿಂದ ಯಾವೊಬ್ಬರ ಪೌರತ್ವ ಕಸಿದು ಕೊಳ್ಳುವುದಿಲ್ಲ ಎಂಬ ವಾದಕ್ಕೆ ಮತ್ತಷ್ಟು ಬಲ ಬಂದಂತಾಗಿದ್ದು, ಯಾರಾದರೂ ವಿಪಕ್ಷದ ನಾಯಕರು ಈ ಸವಾಲನ್ನು ಸ್ವೀಕರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.