ಸರಣಿ ಶ್ರೇಷ್ಠನಾದರೂ ಆರಂಭಿಕ ಸ್ಥಾನದಿಂದ ಐದನೇ ಕ್ರಮಾಂಕಕ್ಕೆ ರಾಹುಲ್ ಜಿಗಿತ ! ಕ್ಯಾಪ್ಟನ್ ಕಿಂಗ್ ಕೊಹ್ಲಿ ಕಾರಣ ನೀಡಿದ್ದು ಮಾತ್ರ ಅದ್ಭುತ ! ಯಾಕೆ ಈ ಬದಲಾವಣೆ ಗೊತ್ತಾ??

ಸರಣಿ ಶ್ರೇಷ್ಠನಾದರೂ ಆರಂಭಿಕ ಸ್ಥಾನದಿಂದ ಐದನೇ ಕ್ರಮಾಂಕಕ್ಕೆ ರಾಹುಲ್ ಜಿಗಿತ ! ಕ್ಯಾಪ್ಟನ್ ಕಿಂಗ್ ಕೊಹ್ಲಿ ಕಾರಣ ನೀಡಿದ್ದು ಮಾತ್ರ ಅದ್ಭುತ ! ಯಾಕೆ ಈ ಬದಲಾವಣೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ರವರು ಅದ್ಭುತ ಫಾರ್ಮ್ ನಲ್ಲಿ ಇದ್ದ ಕಾರಣ ಕಳೆದ ಕೆಲವು ದಿನಗಳ ಹಿಂದೆ ರಾಹುಲ್ ರವರನ್ನು ಐದನೇ ಕ್ರಮಾಂಕದಲ್ಲಿ ಆಟವಾಡಲು ಅವಕಾಶ ನೀಡಲಾಗಿತ್ತು.

ಐದನೇ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದ್ದ ರಾಹುಲ್ ರವರಿಗೆ ಶಿಖರ್ ಧವನ್ ಅವರು ಗಾಯಗೊಂಡು ಸರಣಿಯಿಂದ ಹೊರ ನಡೆದಾಗ ಆರಂಭಿಕನಾಗಿ ಬಡ್ತಿ ನೀಡಲಾಗಿತ್ತು. ಮೊದಲಿನಿಂದಲೂ ಆರಂಭಿಕನಾಗಿ ಆಟ ಆರಂಭಿಸುತ್ತಿದ್ದ ರಾಹುಲ್ ರವರು ಇದೀಗ ಮತ್ತೊಮ್ಮೆ ತಮ್ಮ ಸ್ಥಾನದಲ್ಲಿ ಆಟವಾಡಿ ಆರಂಭಿಕನಾಗಿಯೂ ಭರ್ಜರಿ ಫಾರ್ಮ್ ತೋರಿಸಿಕೊಟ್ಟರು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ನಡೆದ ಐದು ಟಿ ಟ್ವೆಂಟಿ ಪಂದ್ಯಗಳಲ್ಲಿ ಆರಂಭಿಕನಾಗಿ ಕ್ರಮವಾಗಿ 56,57*,27,39,45 ರನ್ಗಳನ್ನು ಗಳಿಸುವ ಮೂಲಕ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು. ಇದನ್ನು ಕಂಡ ಜನತೆ ಕೆ ಎಲ್ ರಾಹುಲ್ ರವರು ಈಗಾಗಲೇ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರ ನಡೆದಿರುವ ಕಾರಣ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಕೊಂಡಿದ್ದರು.

ಆದರೆ ಕ್ಯಾಪ್ಟನ್ ಕಿಂಗ್ ಕೊಹ್ಲಿ ರವರು ಈ ಎಲ್ಲಾ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ, ರಾಹುಲ್ ಅವರು ಏಕದಿನ ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ ತಮ್ಮ ಆಟವನ್ನು ಮುಂದುವರಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಪೃಥ್ವಿ ಶಾ ಹಾಗೂ ಮಾಯಾಂಕ್ ಅಗರ್ವಾಲ್ ರವರು ನ್ಯೂಜಿಲೆಂಡ್ ತಂಡದ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಮಾಧ್ಯಮದವರು ಯಾಕೆ ರಾಹುಲ್ ರವರು ಆರಂಭಿಕರಾಗಿ ಕಣಕ್ಕಿಳಿಯುತ್ತಿಲ್ಲ ಎಂದಾಗ, ಕ್ಯಾಪ್ಟನ್ ಕೊಹ್ಲಿ ರವರು ಕೆ ಎಲ್ ರಾಹುಲ್ ರವರು ಯಾವ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟ್ ಬೀಸುವ ಶಕ್ತಿಯನ್ನು ಹೊಂದಿದ್ದಾರೆ ಹಾಗೂ ಈಗಾಗಲೇ ಅದನ್ನು ನಿರೂಪಿಸಿದ್ದಾರೆ. ಆದ ಕಾರಣ ಆರಂಭಿಕರಾಗಿ ಪೃಥ್ವಿ ಶಾ ಹಾಗೂ ಮಾಯಾಂಕ್ ಅಗರ್ವಾಲ್ ರವರನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದ್ದೇವೆ, ಕೆ ಎಲ್ ರಾಹುಲ್ ರವರು ಯಾವ ಕ್ರಮಾಂಕದಲ್ಲಿ ಬೇಕಾದರೂ ಆಡಿ ಮತ್ತೊಮ್ಮೆ ಮಿಂಚುತ್ತಾರೆ ಎಂಬ ನಂಬಿಕೆ ಇದೆ ಎಂದು ಹಾಡಿ ಹೊಗಳಿದ್ದಾರೆ.