ಕೊನೆಗೂ ಸಿಕ್ಕಿತು ವಿಡಿಯೋ ! ಕ್ರಿಕೆಟ್ ಇತಿಹಾಸದಲ್ಲಿಯೇ ಶಾರ್ದೂಲ್, ಕೊಹ್ಲಿ ಒಟ್ಟಾಗಿ ಸೇರಿ ಅದ್ಭುತವನ್ನು ಮಾಡಿದ್ದು ಹೇಗೆ ಗೊತ್ತಾ??

ಕೊನೆಗೂ ಸಿಕ್ಕಿತು ವಿಡಿಯೋ ! ಕ್ರಿಕೆಟ್ ಇತಿಹಾಸದಲ್ಲಿಯೇ ಶಾರ್ದೂಲ್, ಕೊಹ್ಲಿ ಒಟ್ಟಾಗಿ ಸೇರಿ ಅದ್ಭುತವನ್ನು ಮಾಡಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತೀಯ ಕ್ರಿಕೆಟ್ ತಂಡ ನ್ಯೂಜಿಲೆಂಡ್ ನೆಲದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಪ್ರದರ್ಶನದ ಜೊತೆಗೆ ಅದೃಷ್ಟ ಕೂಡ ಭಾರತ ತಂಡ ಜೊತೆಗಿದೆ ಎಂದರೆ ತಪ್ಪಾಗಲಾರದು.

ಇನ್ನೇನು ಸೋತು ಬಿಟ್ಟೆವು ಎಂದು ಕೊಳ್ಳುವಷ್ಟರಲ್ಲಿ ಎರಡು ಪಂದ್ಯ ಟೈ ಆಗಿ ಸೂಪರ್ ಓವರ್ ಗಳು ನಡೆದು ಭಾರತ ತಂಡ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿ, ಒಟ್ಟಾಗಿ ಸರಣಿಯಲ್ಲಿ 4-0 ಅಂತರದ ಮುನ್ನಡೆ ಗಳಿಸಿಕೊಂಡಿದೆ. ಇದೀಗ ನಾಲ್ಕನೇ ಪಂದ್ಯದಲ್ಲಿ ಭಾರತೀಯ ತಂಡದ ಯುವ ಬೌಲರ್ ಶಾರ್ದುಲ್ ಠಾಕೂರ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರು ಒಟ್ಟಾಗಿ ಸೇರಿ ಕೊಂಡು ಮಾಡಿದ ಅದ್ಭುತ ರನ್ ಔಟ್ ವಿಡಿಯೋ ವೈರಲ್ ಆಗಿದೆ. ನ್ಯೂಜಿಲೆಂಡ್ ತಂಡದ ಓಪನರ್ ಬ್ಯಾಟ್ಸ್ ಮ್ಯಾನ್ ಕಾಲಿನ್ ಮನ್ರೋ ರವರು ನಾಲ್ಕನೇ ಪಂದ್ಯದಲ್ಲಿ 64 ರನ್ಗಳನ್ನು ಕಲೆ ಹಾಕಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಇವರು ಇದೇ ರೀತಿ ಬ್ಯಾಟಿಂಗ್ ಮಾಡಿದ್ದರೇ, ಕೆಲವು ಓವರ್ ಗಳಲ್ಲಿಯೇ ಭಾರತ ತಂಡ ಸೋಲನ್ನು ಕಾಣಬೇಕಾಗಿತ್ತು.

ಅದೇ ಸಮಯದಲ್ಲಿ ಬೌಲಿಂಗ್ ಮಾಡಲು ಬಂದ ಶಿವಂ ದುಬೇ ರವರ ಬಾಲನ್ನು ಸರಿಯಾಗಿಯೇ ಬಾರಿಸಿದ ಕಾಲಿನ್ ಮನ್ರೋ ರವರು ಎರಡು ರನ್ ಕದಿಯಲು ಮುಂದಾದರು. ಫೀಲ್ಡಿಂಗ್ ಮಾಡುತ್ತಿದ್ದ ಯುವ ಬೌಲರ್ ಶಾರ್ದುಲ್ ಠಾಕೂರ್ ರವರು ಚೆಂಡನ್ನು ಹಿಡಿದು ನಾನ್ ಸ್ಟ್ರೈಕರ್ ಕಡೆಗೆ ಎಸೆದರು. ಆದರೆ ನಾನ್ ಸ್ಟ್ರೈಕರ್ ಕಡೆ ಓಡುತ್ತಿದ್ದ ಬ್ಯಾಟ್ಸಮನ್ ಗುರಿ ತಲುಪಲು ಬಹಳ ಹತ್ತಿರ ವಿದ್ದ ಕಾರಣ ಮಧ್ಯ ಪ್ರವೇಶಿಸಿದ ಕೊಹ್ಲಿ ರವರು ಬಾಲನ್ನು ಹಿಡಿದು ಕೊಂಡು ನೇರವಾಗಿ ಕಾಲಿನ್ ಮನ್ರೋ ಓಡುತ್ತಿದ್ದ ಸ್ಟ್ರೈಕ್ ವಿಕೆಟ್ ಕಡೆ ಹೊಡೆದರು, ವಿರಾಟ್ ಕೊಹ್ಲಿ ಅವರು ಎಸೆದ ಚೆಂಡು ನೇರವಾಗಿ ವಿಕೆಟ್ ಗೆ ಬಡಿಯಿತು. ಕಾಲಿನ್ ಮನ್ರೋ ಅವರು ಕೆಲವೇ ಕೆಲವು ಇಂಚು ಗಳಿಂದ ಸ್ಕ್ರೀಜ್ ತಲುಪುವಲ್ಲಿ ವಿಫಲವಾಗಿ ಪೆವಿಲಿಯನ್ ಸೇರಿ ಕೊಂಡರು.ಈ ಅದ್ಭುತ ವೀಡಿಯೋವನ್ನು ಕೆಳಗಡೆ ಎಲ್ಲ ಲಗತ್ತಿಸಲಾಗಿದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.