ಸಿಎಎ ಕುರಿತು ಎಲ್ಲಾ ಸಂಸದರಿಗೆ ಹೊಸ ಆದೇಶ ಹೊರಡಿಸಿದ ಮೋದಿ-ಅಮಿತ್ ಶಾ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಸಂಸತ್ ಅಧಿವೇಶನ ಆರಂಭವಾಗಿದ್ದು ರಾಷ್ಟ್ರಪತಿ ಭಾಷಣ ಹಾಗೂ ಬಜೆಟ್ ಮಂಡನೆ ಮುಗಿದಿದೆ. ಹೀಗಿರುವಾಗ ಮುಂದೆ ಆರಂಭವಾಗುವ ಅಧಿವೇಶನಕ್ಕೆ ಮೋದಿರವರು ಎಲ್ಲಾ NDA ಸಂಸದರಿಗೆ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.

ಇದೀಗ ವಿರೋಧ ಪಕ್ಷಗಳು ಬಿಜೆಪಿ ಪಕ್ಷ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಬಳಸಿಕೊಂಡು ಕೇಂದ್ರ ಸರ್ಕಾರಕ್ಕೆ ಟೀಕೆಗಳ ಬಾಣಗಳ ಸುರಿ ಮಳೆಯನ್ನು ಸುರಿಸಲು ಸಿದ್ಧವಾಗಿದ್ದು ಸಂಸತ್ತಿನಲ್ಲಿ ವಾದ-ವಿವಾದಗಳು ಮತ್ತಷ್ಟು ಹೆಚ್ಚಾಗಲಿವೆ. ಇದರ ಕುರಿತು ನಿನ್ನೆ ನಡೆದ ಸಭೆಯಲ್ಲಿ ಈ ಬಾರಿ ನಡೆಯುವ ಅಧಿವೇಶನದಲ್ಲಿ ಪ್ರತಿಪಕ್ಷಗಳು ಪೌರತ್ವ ತಿದ್ದುಪಡಿ ಮಸೂದೆ ಯನ್ನು ಕುರಿತು ಟೀಕೆಗಳನ್ನು ಮಾಡುತ್ತಾರೆ. ಆದರೆ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಮಸೂದೆ ಕುರಿತ ವಿಚಾರದಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ.

ಆದ ಕಾರಣದಿಂದ ಎನ್ಡಿಎ ಮೈತ್ರಿಕೂಟ ದ ಯಾವ ಸದಸ್ಯರು ಪ್ರತಿ ಪಕ್ಷಗಳು ಟೀಕೆ ಮಾಡುವ ಸಂದರ್ಭದಲ್ಲಿ ರಕ್ಷಣಾತ್ಮಕವಾಗಿ ಮಾತನಾಡುವುದು ಬೇಡ, ಪೌರತ್ವ ತಿದ್ದುಪಡಿ ಮಸೂದೆ ಚರ್ಚೆ ಯಾದಾಗ ಯಾವುದೇ ಟೀಕೆಗಳಿಗೆ ಆಗಲಿ ಆಕ್ರಮಣ ಕಾರಿಯಾಗಿ ಉತ್ತರ ನೀಡಿ. ನಮಗೆ ಅಲ್ಪಸಂಖ್ಯಾತರೂ ಕೂಡ ದೇಶದ ಇತರ ನಾಗರಿಕರು ಇದ್ದಂತೆ, ಯಾವುದೇ ಕಾರಣಕ್ಕೂ ವಿಪಕ್ಷಗಳ ಟೀಕೆಗಳಿಗೆ ಸುಮ್ಮನೆ ಕೂರುವುದು ಅಥವಾ ರಕ್ಷಣಾತ್ಮಕ ಉತ್ತರ ನೀಡುವುದು ಅಗತ್ಯವಿಲ್ಲ.NDA ಮೈತ್ರಿಕೂಟದ ನಿರ್ಧಾರವನ್ನು ಬಲವಾಗಿ ಸಮರ್ಥನೆ ಮಾಡಿಕೊಳ್ಳಿ, ಟೀಕೆಗಳಿಗೆ ಆಕ್ರಮಣ ಕಾರಿಯಾಗಿ ಉತ್ತರ ನೀಡಿ ಎಂಬ ಸಂದೇಶ ರವಾನೆ ಮಾಡಿದ್ದಾರೆ.

Post Author: Ravi Yadav