ನಾಲಿಗೆ ಹರಿಬಿಟ್ಟ ಪ್ರಶಾಂತ್ ಕಿಶೋರ್ ವಿರುದ್ಧ ಕಠಿಣ ಕ್ರಮ ಕೈಗೊಂಡ ನಿತಿಶ್ ಕುಮಾರ್ ! ಬಿಹಾರ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ ನಿತೀಶ್ ಕುಮಾರ್ ನಿರ್ಧಾರ !

ನಮಸ್ಕಾರ ಸ್ನೇಹಿತರೇ, ಅಮಿತ್ ಶಾ ರವರು ಆದೇಶ ಹೊರಡಿಸಿದ ಕಾರಣ ನಾನು ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡೇ ಎಂದು ನಿತೀಶ್ ಕುಮಾರ್ ಹೇಳಿದ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಅವರು ತಮ್ಮ ಪಕ್ಷದ ನಾಯಕ ಹಾಗೂ ಬಿಹಾರದ ಮಂತ್ರಿ ಎಂಬುದನ್ನು ನೋಡದೆ ಕಠಿಣ ಮಾತುಗಳಿಂದ ನಿತೀಶ್ ಕುಮಾರ್ ರವರನ್ನು ಟೀಕಿಸಿದ್ದರು.

ಇದರಿಂದ ಕೆರಳಿದ ಬಿಹಾರದ ಸಂಯುಕ್ತ ಜನತಾದಳ ಪಕ್ಷದ ಮುಖ್ಯಸ್ಥ ನಿತಿಶ್ ಕುಮಾರ್ ರವರು ಮೊದಲಿನಿಂದಲೂ ಪೌರತ್ವ ತಿದ್ದುಪಡಿ ಕಾಯ್ದೆ ಯನ್ನು ವಿರೋಧಿಸುತ್ತಿರುವ ಪ್ರಶಾಂತ್ ಕಿಶೋರ್ ಹಾಗೂ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಪವನ್ ವರ್ಮಾ ರವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ನಿತೀಶ್ ಕುಮಾರ್ ರವರ ಈ ನಿರ್ಧಾರಕ್ಕೆ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ರವರು ಪರೋಕ್ಷವಾಗಿ ನಿತೀಶ್ ಕುಮಾರ್ ಅವರನ್ನು ಸೋಲಿಸುವ ಮಾತುಗಳನ್ನು ಆಡಿದ್ದಾರೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಇಂದು ಬಿಹಾರದಲ್ಲಿ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಯು ಸಂಸ್ಥಾಪಕ ನಿತೀಶ್ ಕುಮಾರ್ ರವರು ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರನ್ನು ಸೇರಿದಂತೆ ಪವನ್ ವರ್ಮಾ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಈಗಾಗಲೇ ಪಕ್ಷಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ರವರ ಪರವಾಗಿ ಮಾಡುತ್ತಿರುವ ಪ್ಲಾನ್ ಗಳೆಲ್ಲವೂ ವಿಫಲವಾಗುತ್ತಿರುವ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದಾರೆ ಪ್ರಶಾಂತ್ ಕಿಶೋರ್. ಈ ಆದೇಶ ಹೊರಡಿಸಿದ್ದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಕಿಶೋರ್ ಅವರು, ಧನ್ಯವಾದಗಳು, ನಿಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಯಲಿ ಎಂದು ಶುಭ ಹಾರೈಸುತ್ತೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಪರೋಕ್ಷವಾಗಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.