ಮೋದಿ-ಶಾ ಜೋಡೆತ್ತುಗಳಿಗೆ ಭರ್ಜರಿ ದಿಗ್ವಿಜಯ CAA,NRC ಇಂದ ಜನಪ್ರಿಯತೆಯ ಕುಂದಿದೆ ಎಂದ ವಿಪಕ್ಷಗಳಿಗೆ ಮರ್ಮಾಘಾತ ! ಅಷ್ಟಕ್ಕೂ ಜನರ ಅಭಿಪ್ರಾಯವೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಜನ ಬೆಂಬಲ ಕಡಿಮೆಯಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೇ ರೀತಿ ನೋಟ್ ಬ್ಯಾನ್, ಜಿಎಸ್ಟಿ, ಆರ್ಥಿಕ ಪರಿಸ್ಥಿತಿ ಹೀಗೆ ಹಲವಾರು ಕಾರಣಗಳನ್ನು ಮುಂದಿಟ್ಟು ಕೊಂಡು ಟೀಕೆ ಮಾಡುತ್ತಿದ್ದ ವಿಪಕ್ಷಗಳಿಗೆ ಚುನಾವಣೆಯಲ್ಲಿ ಜನರು ಇದ್ಯಾವುದರಿಂದಲೂ ಮೋದಿ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ ಎಂದು ಉತ್ತರ ನೀಡಿದ್ದರು.

ಇದೀಗ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಯಲ್ಲಿಯೂ ಅದೇ ನಡೆದಂತೆ ಕಾಣುತ್ತಿದೆ. ಹೌದು, ಇದೀಗ ಎಬಿಪಿ ಹಾಗೂ ಸಿ ವೋಟರ್ ಸಮೀಕ್ಷೆಯಲ್ಲಿ ಮೋದಿ ರವರು ಈ ಕ್ಷಣ ಚುನಾವಣೆ ನಡೆದರೆ ಮತ್ತೊಮ್ಮೆ ಎನ್ಡಿಎ ಮೈತ್ರಿಕೂಟದಿಂದ ಕೆಲವು ಸ್ಥಾನಗಳನ್ನು ಕಳೆದು ಕೊಂಡರೂ ಮುನ್ನೂರಕ್ಕೂ ಹೆಚ್ಚು ಸೀಟುಗಳ ಮೂಲಕ ಅಧಿಕಾರಕ್ಕೆ ಏರಲಿದ್ದಾರೆ ಎಂಬ ಜನಾಭಿಪ್ರಾಯ ವರದಿ ಆಗಿದೆ. ಇನ್ನು ಮೋದಿ ಸರ್ಕಾರದ 10 ವಿಶ್ವಾಸಾರ್ಹ ಸಚಿವರ ಸಮೀಕ್ಷೆ ನಡೆಸಿದ ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಅಮಿತ್ ಶಾ ರವರ ಕಠಿಣ ನಿರ್ಧಾರಗಳಿಂದ ಅಮಿತ್ ಶಾ ರವರ ಜನಪ್ರಿಯತೆ ಕುಂದಿದೆ ಎಂದವರಿಗೆ ಬಿಗ್ ಶಾಕ್ ಎದುರಾಗಿದೆ.

ಹೌದು, ಮೋದಿ ರವರ ಎರಡನೇ ಸರ್ಕಾರದ ಪ್ರಭಾವಿ ವಿಶ್ವಾಸಾರ್ಹ ಸಚಿವರ ಪಟ್ಟಿಯಲ್ಲಿ ಶೇಕಡ 42ರಷ್ಟು ಜನ ಅಮಿತ್ ಷಾ ರವರಿಗೆ ಮತ ನೀಡಿದ್ದು ಜನಾಭಿಪ್ರಾಯವನ್ನು ಮನ್ನಣೆಗೆ ತೆಗೆದುಕೊಂಡು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನುಳಿದಂತೆ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು ಎರಡನೇ ಸ್ಥಾನದಲ್ಲಿದ್ದು ಶೇಕಡ 39 ರಷ್ಟು ಜನ ರಾಜನಾಥ್ ಸಿಂಗ್ ರವರ ಕಾರ್ಯವೈಖರಿಗೆ ಮನ ಸೋತಿದ್ದಾರೆ. ಈ ಮೂಲಕ ಹಲವಾರು ಕಠಿಣ ನಿರ್ಧಾರ ಗಳಿಂದ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಯಾವುದೇ ಹೊಡೆತ ಬಿದ್ದಿಲ್ಲ ಎಂಬುದು ಇಂಡಿಯಾ ಟುಡೇ ಸಮೀಕ್ಷೆಯಿಂದ ಸಾಬೀತಾಗಿದೆ. ಮೂಡ್ ಆಫ್ ತಿ ನೇಶನ್ ಎಂಬ ಸಮೀಕ್ಷೆಯಲ್ಲಿ ಇಂಡಿಯಾ ಟುಡೇ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರ ಅಭಿಪ್ರಾಯ ಸಂಗ್ರಹ ಮಾಡಿದೆ ಎಂದು ತನ್ನ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಿದೆ.

Post Author: Ravi Yadav