CAA ವಿಚಾರದಲ್ಲಿ ನಿರ್ಣಯ ಮಂಡಿಸಿದ ಯುರೋಪ್ ಸಂಸತ್ತಿಗೆ ಖಡಕ್ ಸಂದೇಶ ರವಾನೆ ಮಾಡಿದ ಮೋದಿ ಸರ್ಕಾರ ! ಹೇಳಿದ್ದೇನು ಗೊತ್ತಾ?

CAA ವಿಚಾರದಲ್ಲಿ ನಿರ್ಣಯ ಮಂಡಿಸಿದ ಯುರೋಪ್ ಸಂಸತ್ತಿಗೆ ಖಡಕ್ ಸಂದೇಶ ರವಾನೆ ಮಾಡಿದ ಮೋದಿ ಸರ್ಕಾರ ! ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಪೌರತ್ವ ತಿದ್ದುಪಡಿ ಮಸೂದೆ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ.‌ ಪಾಕಿಸ್ತಾನ ದೇಶವು ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧವಾಗಿ ನಿಂತಿರುವ ಕಾರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ದೇಶಗಳ ಬಳಿ ಹೋಗಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಭಾರತ ಸರ್ಕಾರ ವಾಪಸ್ ತೆಗೆದು ಕೊಳ್ಳುವಂತೆ ಒತ್ತಡ ಏರಿ ಎಂದು ಬೇಡಿಕೊಳ್ಳುತ್ತೀದೆ.

ಆದರೆ ಪಾಕಿಸ್ತಾನ ದೇಶದ ಮಾತುಗಳಿಗೆ ಸೊಪ್ಪು ಹಾಕದ ಹಲವಾರು ಬಲಾಢ್ಯ ರಾಷ್ಟ್ರಗಳು ಭಾರತದ ಪರವಾಗಿ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಧ್ವನಿಯೆತ್ತಿ, ಕೆಲವು ರಾಷ್ಟ್ರಗಳು ಬೆಂಬಲ ಸೂಚಿಸಿದರೆ ಮತ್ತಷ್ಟು ರಾಷ್ಟ್ರಗಳು ಪೌರತ್ವ ತಿದ್ದುಪಡಿ ಮಸೂದೆಯು ಭಾರತ ಸಂವಿಧಾನದ ಪ್ರಕಾರ ಅನುಮೋದನೆ ಗೊಂಡಿದೆ. ಯಾವುದೇ ದೇಶಗಳ ಪೌರತ್ವದ ಕುರಿತು ನಿರ್ಧಾರ ತೆಗೆದುಕೊಳ್ಳುವ ಹಕ್ಕು ಆ ದೇಶದಲ್ಲಿ ಅಧಿಕಾರದಲ್ಲಿರುವ ನಾಯಕರಿಗೆ ಇದೆ. ಹೀಗಿರುವಾಗ ಪೌರತ್ವ ತಿದ್ದುಪಡಿ ಮಸೂದೆಯು ಭಾರತದ ಆಂತರಿಕ ವಿಚಾರವಾಗುತ್ತದೆ. ಆದ ಕಾರಣ ನಾವು ತಲೆ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ. ಇದರ ಬೆನ್ನಲ್ಲೇ ಯುರೋಪಿಯನ್ ಒಕ್ಕೂಟ ಸುಖಾ ಸುಮ್ಮನೆ ಭಾರತದ ಆಂತರಿಕ ವಿಚಾರದಲ್ಲಿ ಕೇವಲ ನಿನ್ನೆಯಷ್ಟೇ ತಲೆ ಹಾಕಿತ್ತು.‌

ಹೌದು, ಪೌರತ್ವ ತಿದ್ದುಪಡಿ ಮಸೂದೆಯನ್ನು ಭಾರತ ಸರ್ಕಾರ ವಾಪಸ್ಸು ತೆಗೆದು ಕೊಳ್ಳಬೇಕು ಎಂಬ ನಿರ್ಣಯ ಯುರೋಪಿಯನ್ ಒಕ್ಕೂಟದಲ್ಲಿ ಕೇಳಿ ಬಂದಿತ್ತು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ನಮ್ಮ ದೇಶದ ‌ಕಾನೂನಿನ ಪ್ರಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲಾಗಿದೆ. ಈ ವಿಷಯದಲ್ಲಿ ಮತ್ತೆ ಯಾವ ಬೇರೆ ರಾಷ್ಟ್ರಗಳಿಗೂ ‌ಮೂಗು ತೂರಿಸುವ ಹಕ್ಕು ಇಲ್ಲ. ಇದು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ, ನಾವು ಯುರೋಪಿಯನ್ ಒಕ್ಕೂಟಕ್ಕೆ ಪೌರತ್ವ ತಿದ್ದುಪಡಿ ಮಸೂದೆ ಕುರಿತು ನಿರ್ಣಯ ಕೈಗೊಳ್ಳುವ ಹಕ್ಕು ನೀಡಿಲ್ಲ ಎಂದು ಸರಿಯಾಗಿಯೇ ತಿರುಗೇಟು ನೀಡಿದೆ. ಈ ವಿಷಯದಲ್ಲಿ ಭಾರತದ ಅಧಿಕಾರವನ್ನು ಯುರೋಪಿಯನ್ ಒಕ್ಕೂಟ ಪ್ರಶ್ನಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಉಲ್ಲೇಖಿಸಿದೆ.