ಅಸ್ಸಾಂ ಬೇರ್ಪಡಿಸುತ್ತೇನೆ ಹೇಳಿಕೆ ಪ್ರಕರಣಕ್ಕೆ ಸ್ವಾಮಿ ಎಂಟ್ರಿಯ ಬೆನ್ನಲ್ಲೇ ಮಹತ್ವದ ವಿದ್ಯಮಾನ ! ಅಸಲಿ ಆಟ ಈಗ ಶುರು !ನಡೆಯುತ್ತಿರುವುದಾದರೂ ಏನು ಗೊತ್ತಾ??

ಅಸ್ಸಾಂ ಬೇರ್ಪಡಿಸುತ್ತೇನೆ ಹೇಳಿಕೆ ಪ್ರಕರಣಕ್ಕೆ ಸ್ವಾಮಿ ಎಂಟ್ರಿಯ ಬೆನ್ನಲ್ಲೇ ಮಹತ್ವದ ವಿದ್ಯಮಾನ ! ಅಸಲಿ ಆಟ ಈಗ ಶುರು !ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕಳೆದ ಶನಿವಾರ ದಂದು ನಿಮಗೆಲ್ಲರಿಗೂ ತಿಳಿದಿರುವಂತೆ ಪೌರತ್ವ ತಿದ್ದುಪಡಿ ಮಸೂದೆ ಯನ್ನು ವಿರೋಧಿಸುವ ಕಾರ್ಯಕ್ರಮದಲ್ಲಿ ಮನ ಬಂದಂತೆ ಶಾರ್ಜೀಲ್ ಇಮಾಮ್ ಭಾಷಣ ಮಾಡಿ ಭಾರೀ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದರು. ಪೌರತ್ವ ತಿದ್ದುಪಡಿ ಮಸೂದೆ ಕುರಿತು ಜನರಲ್ಲಿ ಸುಳ್ಳು ನಂಬಿಕೆ ಯನ್ನು ಮೂಡಿಸಲು ಹೇಳಿಕೆ ನೀಡಿ ಅಸ್ಸಾಂ ರಾಜ್ಯವನ್ನು ಭಾರತದಿಂದ ಬೇರೆ ಮಾಡೋಣ ಎಂದು ಹೇಳಿಕೆ ನೀಡಿದ್ದರು.

ನಾನು ಐದು ಲಕ್ಷ ಜನರನ್ನು ಸೇರಿಸುವುದಾದರೆ ಅಸ್ಸಾಂ ರಾಜ್ಯವನ್ನು ಹಾಗೂ ಈಶಾನ್ಯ ಭಾರತವನ್ನು ಭಾರತ ದೇಶದಿಂದ ಬೇರ್ಪಡಿಸಿ ಪೌರತ್ವ ತಿದ್ದುಪಡಿ ಮಸೂದೆ ಗೆ ಸೆಡ್ಡು ಒಡೆಯಬಹುದು ಎಂದು ಹೇಳಿಕೆ ನೀಡಿದ್ದರು. ಇದನ್ನು ನೋಡಿದ ಕೂಡಲೇ ರಿಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಸುಬ್ರಹ್ಮಣ್ಯಂ ಸ್ವಾಮಿ ರವರು ಇವರು ಅವರ ಕೆಲಸ ಮಾಡುತ್ತಿದ್ದಾರೆ. ಅದೇ ಕಾರಣಕ್ಕಾಗಿ ಅವರಿಗೆ ದುಡ್ಡು ನೀಡಲಾಗುತ್ತಿದೆ, ಆದರೆ ನಾವು ಯಾಕೆ ಸಹಿಸಿಕೊಂಡು ಇರಬೇಕು. ದೇಶದ್ರೋಹ ಪ್ರಕರಣ ದಾಖಲು ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು, ಇದಾದ ಕೆಲವೇ ಕೆಲವು ಗಂಟೆಗಳಲ್ಲಿ ಕೂಡಲೇ ಎಚ್ಚೆತ್ತುಕೊಂಡ ದೆಹಲಿ, ಅಸ್ಸಾಂ, ಉತ್ತರ ಪ್ರದೇಶ ಹಾಗೂ ಅರುಣಾಚಲ ಪ್ರದೇಶ್ ಪೊಲೀಸರು ಶಾರ್ಜೀಲ್ ಇಮಾಮ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಿದ್ದಾರೆ.

ಅಷ್ಟೇ ಅಲ್ಲದೇ, ಇದೀಗ ನಡೆದ ಮಹತ್ವದ ಬೆಳವಣಿಗೆಯಲ್ಲಿ ದೆಹಲಿ ಪೊಲೀಸರು ಬಿಹಾರದ ಶಾರ್ಜೀಲ್ ಇಮಾಮ್ ಮನೆ ಮೇಲೆ ದಾಳಿ ಮಾಡಿದ್ದಾರೆ. ತಲೆ ಮರೆಸಿಕೊಂಡಿರುವ ಶಾರ್ಜೀಲ್ ಇಮಾಮ್ ಸಿಕ್ಕಿಲ್ಲವಾದರೂ ಆತನಿಗೆ ಸಂಬಂಧಿಸಿದಂತೆ ಇಬ್ಬರು ಸಂಬಂಧಿಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಶಾರ್ಜೀಲ್ ಇಮಾಮ್ ಕುರಿತು ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಇದರ ಕುರಿತು ಬೆಂಬಲ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರಶಂಸೆಗಳ ಸುರಿಮಳೆ ಸುರಿಸಿದ್ದಾರೆ. ಏನೇ ಆಗಲಿ ಈ ಕುರಿತು ತಕ್ಷಣ ಸ್ಪಂದಿಸಿದ ಸುಬ್ರಹ್ಮಣ್ಯಂ ಸ್ವಾಮಿ ರವರಿಗೆ ಹಾಗೂ ದೆಹಲಿ, ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಉತ್ತರಪ್ರದೇಶ ಪೊಲೀಸರಿಗೆ ನಮ್ಮ ತಂಡದ ಪರವಾಗಿ ವಂದನೆಗಳು.