ಜಾರ್ಖಂಡ್ ನಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಪ್ರಾದೇಶಿಕ ಪಕ್ಷಗಳು ! ಒಂದು ಪಕ್ಷ ಮಹಾ ಮೈತ್ರಿಯಿಂದ ಹೊರಕ್ಕೆ !! ಅಷ್ಟಕ್ಕೂ ಕಾಂಗ್ರೆಸ್ ಪಕ್ಷ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಜಾರ್ಖಂಡ್ ರಾಜ್ಯದಲ್ಲಿ ‌ ಚುನಾವಣೆಗೂ ಮುನ್ನ ಮಾಡಿಕೊಂಡ ಮಹಾಮೈತ್ರಿ ಇದೀಗ ಬಿರುಕು ಬಿಟ್ಟಿದೆ. ಇದೀಗ ಮಹಾ ಮೈತ್ರಿಯಿಂದ ಹೊರ ಬಂದಿರುವುದು ಚಿಕ್ಕ ಪಕ್ಷವಾದರೂ, ಅಧಿಕಾರಯುತ ಪಕ್ಷ ಕೂಡ ಕಾಂಗ್ರೆಸ್ ಪಕ್ಷದ ವಿರುದ್ಧ ಸಿಡಿದೇಳುವ ಸಾಧ್ಯತೆಗಳು ಹೆಚ್ಚಾಗಿವೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಜೆಎಂಎಂ, ಕಾಂಗ್ರೆಸ್ ಹಾಗೂ ಜೇವಿಎಂ ಪಕ್ಷಗಳು ಮಹಾಮೈತ್ರಿ ರಚಿಸಿ ಜಾರ್ಖಂಡ್ ರಾಜ್ಯದಲ್ಲಿ ಅಧಿಕಾರಕ್ಕೆ ಏರಿದ್ದವು. ಇನ್ನು ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ಜೆಎಂಎಂ ಪಕ್ಷದ ಮುಖ್ಯಸ್ಥ ಹೇಮಂತ್ ಸೊರೆನ್ ರವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಚಿಕ್ಕ ಪ್ರಾದೇಶಿಕ ಪಕ್ಷವಾದ ಜೇವಿಎಂ ಪಕ್ಷವು ಕೇವಲ ಮೂರು ಸ್ಥಾನಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿತ್ತು. ಆದರೆ ಮಹಾ ಮೈತ್ರಿಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಅಧಿಕಾರವನ್ನು ತಾನು ನೋಡಿಕೊಳ್ಳದೇ ಇತರ ಪಕ್ಷದ ಶಾಸಕರನ್ನು ಸೆಳೆಯಲು ಆರಂಭ ಮಾಡಿದೆ ಎಂಬ ಆರೋಪವನ್ನು ಇದೀಗ ಹೊತ್ತು ಕೊಂಡಿದೆ. ಮೂರು ಶಾಸಕರನ್ನು ತನ್ನ ತೆಕ್ಕೆಯಲ್ಲಿ ಇಟ್ಟು ಕೊಂಡಿದ್ದ ಪಕ್ಷವನ್ನು ಮುಗಿಸಲು ಸಂಚು ರೂಪಿಸಲಾಗಿದೆ ಎಂದು ತಿಳಿದು ಬಂದಿದ್ದು, ಇಬ್ಬರು ಶಾಸಕರು ಈಗಾಗಲೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ರವರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಕೂಡಲೇ ಎಚ್ಚೆತ್ತುಕೊಂಡ ಜೇವಿಎಂ ಪ್ರಾದೇಶಿಕ ಪಕ್ಷವು ತಾನು ಮಹಾ ಮೈತ್ರಿಯಿಂದ ಹೊರ ಹೋಗುತ್ತಿರುವುದಾಗಿ ತಿಳಿಸಿದೆ. ಕಾಂಗ್ರೆಸ್ ಪಕ್ಷವು ಕೇವಲ ಈ ಪಕ್ಷದ ಶಾಸಕರನ್ನು ಮಾತ್ರ ಸೆಳೆಯುತ್ತಿಲ್ಲ ಬದಲಾಗಿ ಅತಿ ಹೆಚ್ಚು ಸ್ಥಾನವನ್ನು ಹೊಂದಿರುವ ಜೆಎಂಎಂ ಪಕ್ಷದ ಶಾಸಕರನ್ನು ಕೂಡ ತನ್ನತ್ತ ಸೆಳೆಯುತ್ತಿದೆ ಎಂದು ಕೆವಿಎಂ ಪಕ್ಷ ಆರೋಪ ಮಾಡಿದೆ. ಇದು ಈಗಾಗಲೇ ಮುಖ್ಯಮಂತ್ರಿಯವರ ಗಮನಕ್ಕೆ ಕೂಡ ಬಂದಿದೆ ಎಂದು ಪಕ್ಷದ ಕೆಲ ಶಾಸಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಎಲ್ಲಾ ನಡೆಗಳಿಂದ ಮುಖ್ಯಮಂತ್ರಿ ಕೂಡ ಕಾಂಗ್ರೆಸ್ ಪಕ್ಷದ ವಿರುದ್ಧ ಸಿಟ್ಟಿಗೆದ್ದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆಯಾದರೂ ಮುಖ್ಯಮಂತ್ರಿ ಅವರು ಇಲ್ಲಿಯವರೆಗೂ ಯಾವುದೇ ಖಚಿತ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಆಂತರಿಕ ಶಾಸಕರ ಮಾತುಗಳ ಪ್ರಕಾರ ಕಾಂಗ್ರೆಸ್ ಪಕ್ಷವನ್ನು ಮೈತ್ರಿಯಿಂದ ಹೊರ ಹಾಕಲಾಗುತ್ತದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ, ಒಂದು ವೇಳೆ ಅದೇ ನಡೆದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ.

Post Author: Ravi Yadav