ಕೇಂದ್ರದಿಂದ ಐತಿಹಾಸಿಕ ನಿರ್ಧಾರ ! ತುಕಡೆ ತುಕಡೆ ಎನ್ನುತ್ತಿದ್ದ ಜೆಎನ್ಯು ಕಾಲೇಜಿನ ಕ್ಯಾಂಪಸ್ ನಲ್ಲಿ ಇದೀಗ ದೇಶಭಕ್ತರ ಕಲರವ !ಜೆಎನ್ಯು ನಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ??

ಕೇಂದ್ರದಿಂದ ಐತಿಹಾಸಿಕ ನಿರ್ಧಾರ ! ತುಕಡೆ ತುಕಡೆ ಎನ್ನುತ್ತಿದ್ದ ಜೆಎನ್ಯು ಕಾಲೇಜಿನ ಕ್ಯಾಂಪಸ್ ನಲ್ಲಿ ಇದೀಗ ದೇಶಭಕ್ತರ ಕಲರವ !ಜೆಎನ್ಯು ನಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಜೆಎನ್ಯು ಕಾಲೇಜಿನ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಅಲ್ಲಿ ವಿದ್ಯಾರ್ಥಿಗಳು ತಮ್ಮ ‌ ವಿದ್ಯಾಭ್ಯಾಸದ ಮೂಲಕ ಸದ್ದು ಮಾಡಿದ್ದಕ್ಕಿಂತ ರಾಜಕೀಯ ಗಳಲ್ಲಿ ಸದ್ದು ಮಾಡಿದ್ದು ಹೆಚ್ಚು, ಇಂದಿರಾ ಗಾಂಧಿಯವರ ಕಾಲದಿಂದಲೂ ಇಲ್ಲಿಯವರೆಗೂ ಜೆಎನ್ಯು ಕಾಲೇಜಿನ ವಿದ್ಯಾರ್ಥಿಗಳು ರಾಜಕೀಯ ನಡೆಗಳ ಮೂಲಕ ಸದ್ದು ಮಾಡುತ್ತಿದ್ದರು. ಅಷ್ಟು ಸಾಲದು ಎಂಬಂತೆ ದೇಶದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದರು.

ರಾಜಕೀಯ ಎಂದ ಮೇಲೆ ಪರ-ವಿರೋಧದ ಚರ್ಚೆಗಳು ಸರ್ವೇ ಸಾಮಾನ್ಯ. ಆದರೆ ಇಲ್ಲಿನ ವಿದ್ಯಾರ್ಥಿಗಳು ದೇಶವನ್ನು ವಿಭಜನೆ ಮಾಡುತ್ತೇವೆ, ಭಾರತ್ ಮಾತಾ ಕೀ ಜಯ್ ಎನ್ನುವುದಿಲ್ಲ ಹೀಗೆ ದೇಶದ ವಿರುದ್ಧ ಮಾತನಾಡಿ ಇಡೀ ದೇಶದಲ್ಲಿ ಸದ್ದು ಮಾಡಿದ್ದರು. ಇಷ್ಟು ಸಾಲದು ಎಂಬಂತೆ ಹಾಸ್ಟೆಲ್ ಶುಲ್ಕ ಏರಿಕೆ, ಪೌರತ್ವ ತಿದ್ದುಪಡಿ ಮಸೂದೆ ಹೀಗೆ ಹಲವಾರು ಕಾರಣಗಳಿಂದ ಇತ್ತೀಚಿಗೆ ಮತ್ತಷ್ಟು ವಿವಾದಗಳಿಗೆ ಕಾರಣವಾಗಿದೆ. ಆದರೆ ಒಂದು ವಿಷಯ ಸ್ವಾಮಿ, ಈ ಕಾಲೇಜಿನಲ್ಲಿ ಎಲ್ಲರೂ ಈ ತುಕಡೆ ಗ್ಯಾಂಗ್ ಸೇರಿದವರಲ್ಲ, ಅಪ್ಪಟ ದೇಶ ಭಕ್ತರು ಹಾಗೂ ತಮ್ಮ ಪಾಡಿಗೆ ತಾವು ಓದಿಕೊಳ್ಳುವ ವಿದ್ಯಾರ್ಥಿಗಳು ಬಹಳಷ್ಟು ಜನ ಇಲ್ಲಿದ್ದಾರೆ. ಈ ದೇಶಭಕ್ತರು ರಾರಾಜಿಸಲಿದ್ದಾರೆ,, ಹೌದು ಇದೀಗ ಜೆಎನ್ಯು ಕ್ಯಾಂಪಸ್ನಲ್ಲಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ದೇಶಭಕ್ತರ ಕಲರವ ಇದೇ ಮೊದಲ ಬಾರಿಗೆ ಕೇಳಿ ಬರಲಿದೆ.

ಜೆಎನ್ಯು ಕಾಲೇಜಿನ ಉಪಕುಲಪತಿ ಯಾಗಿರುವ ಜಗದೀಶ್ ರವರು ಈ ವಿಷಯವನ್ನು ಖಚಿತಪಡಿಸಿದ್ದು ಇದೇ ಮೊಟ್ಟಮೊದಲ ಬಾರಿಗೆ ಜೆಎನ್ಯು ಕಾಲೇಜಿನ ಕ್ಯಾಂಪಸ್ಸಿನಲ್ಲಿ NCC ತಂಡದ ಪರೇಡ್ ನೊಂದಿಗೆ ನಮ್ಮ ರಾಷ್ಟ್ರಧ್ವಜ ಗಣರಾಜ್ಯೋತ್ಸವ ದಿನದಂದು ರಾರಾಜಿಸಲಿದೆ. ಹೌದು ಇಷ್ಟು ದಿನ ದೇಶದ ವಿರುದ್ಧ ಘೋಷಣೆ ಗಳು ಕೇಳಿ ಬರುತ್ತಿದ್ದ ಕಾಲೇಜಿನಲ್ಲಿ ಇದೇ ಗಣರಾಜ್ಯ ದಿವಸದಂದು NCC ತಂಡವು ಪರೇಡ್ ನಡೆಸುತ್ತದೆ. ಇದೇ ಮೊದಲ ಬಾರಿಗೆ ಜೆಎನ್ಯು ಕಾಲೇಜಿನ ವಿದ್ಯಾರ್ಥಿಗಳು ಕೂಡ NCC ಪೆರೇಡ್ ನಲ್ಲಿ ಭಾಗವಹಿಸಲಿದ್ದಾರೆ. ಒಟ್ಟಿನಲ್ಲಿ ಜೆಎನ್ಯು ಕಾಂಪ್ಲೆಸ್ ನಲ್ಲಿ ಇದೀಗ ಗಣರಾಜ್ಯೋತ್ಸವ ಆಚರಿಸಲು ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ನಾವು 26ನೇ ತಾರೀಖಿನವರೆಗೂ ಕಾಯಲೇಬೇಕು.