ನೂತನ ಅಧ್ಯಕ್ಷ ಜೆ ಪಿ ನಡ್ಡಾ ರವರಿಗೆ ಎದುರಾಯಿತು ಮೊದಲ ಸವಾಲು, ಪಕ್ಷದ ಒಳಗಡೆಯಿಂದಲೇ ಉದ್ಭವಿಸಿದ ಸವಾಲು ಏನು ಗೊತ್ತಾ?

ನೂತನ ಅಧ್ಯಕ್ಷ ಜೆ ಪಿ ನಡ್ಡಾ ರವರಿಗೆ ಎದುರಾಯಿತು ಮೊದಲ ಸವಾಲು, ಪಕ್ಷದ ಒಳಗಡೆಯಿಂದಲೇ ಉದ್ಭವಿಸಿದ ಸವಾಲು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಜೆ ಪಿ ನಡ್ಡಾ ರವರು ಅಧಿಕಾರ ವಹಿಸಿಕೊಂಡಿದ್ದರು. ಅಮಿತ್ ಶಾ ರವರ ಗೃಹ ಸಚಿವರಾದ ಮೇಲೆ ಪಕ್ಷ ಸಂಘಟನೆ ಮಾಡಲು ಯಾರು ಸೂಕ್ತ ವ್ಯಕ್ತಿ ಎಂದು ಪಕ್ಷದಲ್ಲಿ ಬಹಳ ಚರ್ಚೆ ಮಾಡಿ ಒಮ್ಮತದಿಂದ ಜೆ ಪಿ ನಡ್ಡಾ ಅವರನ್ನು ಆಯ್ಕೆ ಮಾಡಿದ್ದರು.

ಆದರೆ ಅಧಿಕಾರಕ್ಕೆ ಏರಿ ಕೇವಲ ದಿನಗಳು ಕಳೆದಿರುವ ಅಂತೆಯೇ ಇದೀಗ ಬಿಜೆಪಿ ಪಕ್ಷದ ನೂತನ ರಾಷ್ಟ್ರಾಧ್ಯಕ್ಷರಿಗೆ ಹೊಸದೊಂದು ಸವಾಲು ಎದುರಾಗಿದೆ. ಹೌದು, ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಭಾರಿ ಸದ್ದು ಮಾಡಿದ್ದ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳು ಇದೀಗ ದೇಶದ ಎಲ್ಲೆಡೆ ಚರ್ಚೆಯಾಗುತ್ತಿವೆ. ಅದರಲ್ಲಿಯೂ ಭಾರತದಲ್ಲಿ ನೆಲೆಸಿರುವ ಅಲ್ಪ ಸಂಖ್ಯಾತರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಎಲ್ಲೆಡೆ ಸುದ್ದಿಗಳು ಹರಿದಾಡುತ್ತಿವೆ. ಆದರೆ ಬಿಜೆಪಿ ಪಕ್ಷ ಯಾವುದೇ ಭಾರತೀಯ ಮುಸ್ಲಿಮರಿಗೂ ಇದರಿಂದ ತೊಂದರೆಯಾಗುವುದಿಲ್ಲ ಎಂದು ಖಚಿತಪಡಿಸಿ ಹೇಳಿದರೂ ಕೂಡ ವಿಪಕ್ಷಗಳು ನಂಬುತ್ತಿಲ್ಲ, ವಿಪಕ್ಷಗಳು ಬಿಡಿ ಈಗ ಬಿಜೆಪಿ ಪಕ್ಷದ ಅಲ್ಪಸಂಖ್ಯಾತ ನಾಯಕರು ಕೂಡ ಪೌರತ್ವ ತಿದ್ದುಪಡಿ ಮಸೂದೆಗೆ ಅಪಸ್ವರ ಎತ್ತಿದ್ದಾರೆ. ಹಲವಾರು ಮುಸ್ಲಿಂ ನಾಯಕರು CAA ಪರವಾಗಿ ಹೇಳಿಕೆ ನೀಡಿದರೂ ಕೂಡ ಇಂದೋರ್ ಜಿಲ್ಲೆಯ ಬಿಜೆಪಿ ಅಲ್ಪಸಂಖ್ಯಾತ ನಾಯಕರು ಮಾತ್ರ ಒಪ್ಪಿ ಕೊಳ್ಳುತ್ತಿಲ್ಲ.

ಇಂದೋರ್ ಜಿಲ್ಲೆಯ ಬಿಜೆಪಿ ಮಂಡಲ್ ಹಾಗೂ ಬಿಜೆಪಿ ಮೋರ್ಚಾ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಹಲವಾರು ಮುಸ್ಲಿಂ ಕಾರ್ಯಕರ್ತರು ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಇವರೆಲ್ಲರೂ ಇದೀಗ ಪೌರತ್ವ ತಿದ್ದುಪಡಿ ಮಸೂದೆಯಿಂದ ಮೂಲ ಭಾರತೀಯ ಮುಸ್ಲಿಮರಿಗೆ ತೊಂದರೆಯಾಗುತ್ತದೆ ಎಂದು ತಿಳಿದುಕೊಂಡು ನಾವು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ ಹಾಗೂ ನೇರವಾಗಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ನಮ್ಮ ಸಮಸ್ಯೆ ವಿವರಿಸಿ ರಾಜೀನಾಮೆ ಪತ್ರ ಸಲ್ಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಈ ಎಲ್ಲಾ ಕಾರ್ಯಕರ್ತರು ಜೆ ಪಿ ನಡ್ಡಾ ಅವರ ಭೇಟಿಗಾಗಿ ತೆರಳುತ್ತಿದ್ದು, ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ವಾದ ಮಂಡಿಸುತ್ತಿದ್ದ ಬಿಜೆಪಿ ಪಕ್ಷದ ನಿಲುವಿಗೆ ಜೆ ಪಿ ನಡ್ಡಾ ರವರು ಯಾವ ರೀತಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಮನವೊಲಿಸಲು ಇದ್ದಾರೆ ಎಂಬುದನ್ನು ಎಲ್ಲರೂ ಕಾದುನೋಡಬೇಕಿದೆ.