ಖುದ್ದು ಅಖಾಡಕ್ಕೆ ಅಮಿತ್ ಶಾ ! 1 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಕೇಂದ್ರಕ್ಕೆ ಸೇರಿಸಲು ಹೊರಡಿಸಿದ ಖಡಕ್ ಆದೇಶ ಏನು ಗೊತ್ತಾ?

ಖುದ್ದು ಅಖಾಡಕ್ಕೆ ಅಮಿತ್ ಶಾ ! 1 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಕೇಂದ್ರಕ್ಕೆ ಸೇರಿಸಲು ಹೊರಡಿಸಿದ ಖಡಕ್ ಆದೇಶ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕಳೆದ 72 ವರ್ಷಗಳಲ್ಲಿ ಸರಿ ಸುಮಾರು 60 ಕ್ಕೂ ಹೆಚ್ಚು ವರ್ಷಗಳಷ್ಟು ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷವು ದೇಶದ ಸಂಬಂಧಿತ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದು ಕೊಂಡಿಲ್ಲ ಎಂದು ಆರೋಪ ಮಾಡುತ್ತಿದ್ದ ಬಿಜೆಪಿ ಪಕ್ಷಕ್ಕೆ ಇದೀಗ ಮತ್ತೊಂದು ಅಸ್ತ್ರ ಸಿಕ್ಕಂತಾಗಿದ್ದು, ಕಳೆದ 72 ವರ್ಷಗಳ ಹಿಂದೆ ನಡೆಯಬೇಕಿದ್ದ ಮಹತ್ವದ ನಿರ್ಧಾರವನ್ನು ಇದೀಗ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ.

ಅಧಿಕಾರಕ್ಕೆ ಏರಿ ಕೆಲವೇ ಕೆಲವು ತಿಂಗಳುಗಳಲ್ಲಿ ಈಗಾಗಲೇ ಕಠಿಣ ಕಾನೂನು ಹಾಗೂ ಮಸೂದೆಗಳನ್ನು ಮಂಡಿಸುತ್ತಿರುವ ಅಮಿತ್ ಶಾ ರವರು ಇದೀಗ ಮತ್ತೊಂದು ಖಡಕ್ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ. ಹೌದು ಇದೀಗ ಇಡೀ ದೇಶದಲ್ಲಿ ಶತ್ರು ಆಸ್ತಿ ಕಾಯಿದೆ ಜಪ್ತಿ ಎಂಬ ಕಾಯ್ದೆಯ ಅಡಿಯಲ್ಲಿ ದೇಶದಲ್ಲಿ ಸುಮಾರು ಒಂದು ಲಕ್ಷ ಕೋಟಿಗೂ ಹೆಚ್ಚು ಬೆಲೆ ಬಾಳುವ ಆಸ್ತಿಯನ್ನು ವಶಕ್ಕೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಬರೋಬ್ಬರಿ 9400 ಶತ್ರುಗಳ ಆಸ್ತಿ ಭಾರತದಲ್ಲಿ ಅಡಗಿದ್ದು, ಇದರ ಮೌಲ್ಯ 1 ಲಕ್ಷ ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಇದೀಗ ಗೃಹ ಸಚಿವ ಅಮಿತ್ ಶಾ ರವರು ಸಮಿತಿ ರಚನೆ ಮಾಡಿದ್ದು ಅಮಿತ್ ಶಾ ರವರೇ ಈ ಸಮಿತಿಯ ಮುಂದಾಳತ್ವ ವಹಿಸಿಕೊಂಡು ಮುನ್ನಡೆಸಲಿದ್ದಾರೆ. ಅಷ್ಟಕ್ಕೂ ಶತ್ರು ಆಸ್ತಿ ಎಂದರೆ ಏನು??

ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ಪಾಕಿಸ್ತಾನ ದೇಶಗಳು ವಿಭಜನೆಯಾದಾಗ ಭಾರತದಲ್ಲಿ ಪ್ರದೇಶದಲ್ಲಿ ನೆಲೆಸಿದ ಹಲವಾರು ಜನರು ನಾವು ಪಾಕಿಸ್ತಾನಕ್ಕೆ ತೆರಳುತ್ತೇವೆ ಎಂದು ಅಧಿಕೃತವಾಗಿ ಘೋಷಣೆ ಮಾಡಿ ತೆರಳಿದ್ದರು. ಅದರಂತೆ ಪಾಕಿಸ್ತಾನದ ಹಲವಾರು ಜನರು ಕೂಡ ಭಾರತದ ಭಾಗವಾಗಲು ಇಷ್ಟಪಟ್ಟು ಬಂದು ಭಾರತ ಸೇರಿದರು. ಹೀಗೆ ವಿಭಜನೆಯಾದಾಗ ಪಾಕಿಸ್ತಾನ ದೇಶಕ್ಕೆ ತೆರಳಿರುವವರ ಆಸ್ತಿ ಭಾರತದಲ್ಲಿಯೇ ಉಳಿದು ಹೋಗಿದೆ, ಇದೀಗ ಆಸ್ತಿಯನ್ನು ಸಂಬಂಧಿಕರು ಅಥವಾ ಅವರ ಪರವಾಗಿ ಇನ್ನಾದರೂ ನೋಡಿ ಕೊಳ್ಳುತ್ತಿದ್ದಾರೆ. ಆದರೆ ಭಾರತ ಸಂವಿಧಾನದ ಶತ್ರು ಕಾಯ್ದೆಯ ಪ್ರಕಾರ ಯಾವುದೇ ಶತ್ರುಗಳ ಸಂಬಂಧಿಕರು ಅಥವಾ ಅವರ ಪರವಾಗಿ ಆಸ್ತಿ ನೋಡಿಕೊಳ್ಳುವವರಿಗೆ ಈ ಆಸ್ತಿಯ ಮೇಲೆ ಕಿಂಚಿತ್ತೂ ಹಕ್ಕು ಇರುವುದಿಲ್ಲ, ಹಾಗಾಗಿ ಕೇಂದ್ರ ಸರ್ಕಾರ ಹಲವಾರು ವರ್ಷಗಳ ಹಿಂದೆಯೇ ಈ ಆಸ್ತಿಯನ್ನು ವಶಪಡಿಸಿಕೊಳ್ಳ ಬೇಕಿತ್ತು. ಆದರೆ ಅದು ಇಲ್ಲಿಯವರೆಗೂ ಮಾಡಲಾಗಿರಲಿಲ್ಲ, ಇದೀಗ ಕೇಂದ್ರ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದ್ದು ಎಲ್ಲಾ ಶತ್ರು ಆಸ್ತಿಗಳನ್ನು ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳಲಿದೆ.