ಶಿವು ಉಪ್ಪಾರ್ ನೆನೆದು ಜಮೀರ್ ಅಹಮದ್ ರವರಿಗೆ ಬಹಿರಂಗ ಎಚ್ಚರಿಕೆ ರವಾನೆ ಮಾಡಿದ ರೇಣುಕಾಚಾರ್ಯ ಅವರು ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ರವರ ಸ್ಕೆಚ್ ಪ್ರಕರಣದಲ್ಲಿ ಎಸ್ಡಿಪಿಐ ಸಂಘಟನೆ ಭಾಗಿಯಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ರವರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈ ರೀತಿ ಕಾರ್ಯಗಳನ್ನು ಮಾಡುವ ಸಂಘಟನೆಗಳನ್ನು ಕೂಡಲೇ ಬ್ಯಾನ್ ಮಾಡಬೇಕು ಎಂದು ಬಿಜೆಪಿ ಪಕ್ಷದ ಬೆಂಬಲಿಗರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಶಾಸಕ ಜಮೀರ್ ಅಹಮದ್ ರವರು ಕೇವಲ ಎಸ್ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡಿದರೇ ಸಾಲದು, ಆರೆಸ್ಸೆಸ್ ಸಂಘ ಸಂಸ್ಥೆಯನ್ನು ಮೊದಲು ಬ್ಯಾನ್ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಇದೇ ವಿಚಾರವಾಗಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ರವರು ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಎಂದಿನಂತೆ ತಮ್ಮ ಶೈಲಿಯಲ್ಲಿಯೇ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ ರವರು, ಪೌರತ್ವ ತಿದ್ದುಪಡಿ ಮಸೂದೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ. ನಾನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರಿಗೆ ಬಹಿರಂಗ ಸವಾಲು ಎಸೆಯುತ್ತಿದ್ದೇನೆ, ಹಲವಾರು ಮಸೀದಿಗಳಲ್ಲಿ ಫತ್ವಾ ಹೊರಡಿಸಿ ಕಾಯ್ದೆಯ ವಿರುದ್ಧ ಹೋರಾಟ ಮಾಡಿ ಎಂದು ತಿಳಿಸಲಾಗಿದೆ. ಈ ಕಾಯ್ದೆಯಿಂದ ನಮ್ಮ ದೇಶದ ಯಾವುದೇ ಮುಸ್ಲಿಮರು ಹೊರಕ್ಕೆ ಹೋಗುವುದಿಲ್ಲ, ಆ ರೀತಿಯ ಅಂಶವಿದ್ದರೇ ತೋರಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಇನ್ನು ಮಾತನ್ನು ಮುಂದುವರಿಸಿರುವ ರೇಣುಕಾಚಾರ್ಯ ರವರು, ಕೇವಲ ಮತಕ್ಕಾಗಿ ಕಾಯಿದೆ ವಿರೋಧ ಮಾಡಬೇಡಿ. ಕಾರಣವಿಲ್ಲದೇ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಜಮೀರ್ ಅಹ್ಮದ್ ಹಾಗೂ ಯುಟಿ ಖಾದರ್ ಅವರು ಇಬ್ಬರು ದೇಶದ್ರೋಹಿಗಳು, ಇವರು ಆರೆಸ್ಸೆಸ್ ಸಂಘ ಸಂಸ್ಥೆಯನ್ನು ಬ್ಯಾನ್ ಮಾಡಬೇಕು ಎನ್ನುತ್ತಿದ್ದಾರೆ. ಆದರೆ ಸಂಘ ಪರಿವಾರ ದೇಶದ ರಕ್ಷಣೆಗೆ ನಿಂತಿದೆ, ಯಾವುದೇ ಪ್ರವಾಹ ವಾಗಲಿ ಅಥವಾ ನೈಸರ್ಗಿಕ ವಿಪತ್ತುಗಳೇ ಆಗಲಿ ಬಂದೆರಗಿದ ಸಂತ್ರಸ್ತರ ಪರ ನಿಂತು ತಮ್ಮ ಜೀವವನ್ನು ಲೆಕ್ಕಕ್ಕೆ ತೆಗೆದು ಕೊಳ್ಳದೇ ಆರೆಸ್ಸೆಸ್ ಸಂಘದ ಸ್ವಯಂ ಸೇವಕರು ಕೆಲಸ ಮಾಡುತ್ತಾರೆ.

ಇಷ್ಟೆಲ್ಲಾ ಮಾಡುವ ಸ್ವಯಂ ಸೇವಕರ ವಿರುದ್ಧ ಹಾಗೂ ಆರೆಸ್ಸೆಸ್ ಸಂಘ ಸಂಸ್ಥೆಯ ವಿರುದ್ಧ ಆರೋಪ ಮಾಡಿದರೇ ಸರಿ ಇರುವುದಿಲ್ಲ, ಜಮೀರ್ ಅಹ್ಮದ್ ರವರಿಗೆ ಬಹಿರಂಗವಾಗಿ ಎಚ್ಚರಿಕೆ ಕೊಡುತ್ತಿದ್ದೇನೆ. ರುದ್ರೇಶ್, ಶಿವು ಉಪ್ಪಾರ್ ನಮ್ಮನ್ನು ಬಿಟ್ಟು ಹೊರಟಾಗ ಎಲ್ಲಿ ಹೋಗಿತ್ತು ನಿಮ್ಮ ಮಾನವೀಯತೆ?? ನಾನು ಕೆಲವು ಮುಸ್ಲಿಂ ಮುಖಂಡರನ್ನು ಕೇಳುತ್ತೇನೆ ನೀವು ನಿಜವಾಗಲೂ ಭಾರತದಲ್ಲಿ ಹುಟ್ಟಿದ್ದೀರಾ? ಇಂತಹ ಕಾಯ್ದೆಯನ್ನು ವಿರೋಧ ಮಾಡಲು ಹೇಗೆ ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

ಒಟ್ಟಿನಲ್ಲಿ ಇದೀಗ ರಾಜ್ಯ ರಾಜಕಾರಣದಲ್ಲಿ ಸಂಘಟನೆ ಗಳನ್ನು ಬ್ಯಾನ್ ಮಾಡುವ ಮಹತ್ವದ ವಿದ್ಯಮಾನಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರವು ಎಸ್ಡಿಪಿಐ ಸಂಘಟನೆ ಯನ್ನು ಬ್ಯಾನ್ ಮಾಡುತ್ತದೆ ಎಂಬ ಸುದ್ದಿಗಳು ಬಲವಾಗಿ ಕೇಳಿ ಬಂದಿವೆ. ಇದಕ್ಕೆ ಪೂರಕ ಎಂಬಂತೆ ಗೃಹ ಸಚಿವ ರಾಗಿರುವ ಬೊಮ್ಮಾಯಿ ರವರು ಕೂಡ ಈ ರೀತಿಯ ಪ್ರಚೋದನಾಕಾರಿ ಕಾರ್ಯಗಳನ್ನು ಮಾಡುವ ಯಾವುದೇ ಸಂಘಟನೆಗಳನ್ನು ಉಳಿಸುವುದಿಲ್ಲ ಎಲ್ಲಾ ಸಂಘಟನೆ ಗಳನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ತಲ್ಲಣ ಸೃಷ್ಟಿಸಿದ್ದಾರೆ.

Post Author: Ravi Yadav