ಯು-ಟರ್ನ್ ಹೊಡೆದ ಕಪಿಲ್ ಸಿಬಲ್ ! CAA ವಿಚಾರದಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಟಿಸಿ ವಿರೋಧಿಸುತ್ತಿರುವ ರಾಜ್ಯಗಳಿಗೆ ನೀಡಿದ ಹೊಸ ಸಲಹೆಯೇನು ಗೊತ್ತಾ??

ಯು-ಟರ್ನ್ ಹೊಡೆದ ಕಪಿಲ್ ಸಿಬಲ್ ! CAA ವಿಚಾರದಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಟಿಸಿ ವಿರೋಧಿಸುತ್ತಿರುವ ರಾಜ್ಯಗಳಿಗೆ ನೀಡಿದ ಹೊಸ ಸಲಹೆಯೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಒಬ್ಬ ಸಾಮಾನ್ಯ ನಾಗರಿಕನಾಗಿ ಯೋಚನೆ ಮಾಡುವುದಾದರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೇವಲ ಪೌರತ್ವ ತಿದ್ದುಪಡಿ ಮಸೂದೆ ಮಾತ್ರವಲ್ಲ ಬದಲಾಗಿ ಯಾವುದೇ ಕಾನೂನು ಗಳಾಗಲಿ ಭಾರತೀಯ ಸಂವಿಧಾನದಲ್ಲಿ ನಮೂದೆಯಾಗಿದೆ ಎಂದರೇ ದೇಶದ ಪ್ರತಿಯೊಂದು ರಾಜ್ಯಗಳು ಆ ಕಾನೂನನ್ನು ಅನುಸರಿಸಲೇಬೇಕು.

ಇಡೀ ಭಾರತ ದೇಶವು ಭಾರತ ಸಂವಿಧಾನದ ಪ್ರಕಾರ ನಡೆದು ಕೊಳ್ಳಬೇಕು.ಕೇವಲ ರಾಜ್ಯ ಸರ್ಕಾರಗಳು ಅಲ್ಲ, ಕೇಂದ್ರ ಸರ್ಕಾರವು ಕೂಡ ಭಾರತ ಸಂವಿಧಾನದ ಗೆರೆಯನ್ನು ದಾಟುವಂತಿಲ್ಲ. ಒಂದು ವೇಳೆ ರಾಜ್ಯ ಸರ್ಕಾರಗಳು ಗೆರೆ ದಾಟಿದರೇ ಕೇಂದ್ರ ಸರ್ಕಾರ ಅಧಿಕಾರ ಚಲಾಯಿಸಬಹುದು, ಅದೇ ಕೇಂದ್ರ ಸರ್ಕಾರವೇ ಸಂವಿಧಾನದ ಗೆರೆ ದಾಟಿದರೇ ಸೇನೆಯು ಅಖಾಡಕ್ಕಿಳಿದು ಕೇಂದ್ರ ಸರ್ಕಾರವನ್ನು ವಜಾ ಮಾಡಬಹುದು. ಹೀಗಿರುವಾಗ ಪೌರತ್ವ ತಿದ್ದುಪಡಿ ಮಸೂದೆ ಭಾರತ ಸಂವಿಧಾನದ ಅಧಿಕೃತ ಕಾನೂನಾಗಿ ಈಗಾಗಲೇ ಮಾರ್ಪಟ್ಟಿದೆ. ಇದೇ ಕಾರಣಕ್ಕಾಗಿ ಎರಡು ದಿನಗಳ ಹಿಂದೆ ಕಪಿಲ್ ಸಿಬಲ್ ಅವರು, ದೇಶದ ಎಲ್ಲಾ ರಾಜ್ಯಗಳು ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳನ್ನು ಜಾರಿಗೊಳಿಸಲೇ ಬೇಕು, ಇಲ್ಲವಾದಲ್ಲಿ ಅದು ಭಾರತ ಸಂವಿಧಾನದ ಉಲ್ಲಂಘನೆ ಆಗುತ್ತದೆ ಎಂದಿದ್ದರು.ಆದರೆ ಇದೀಗ ಈ ಹೇಳಿಕೆಯಿಂದ ಯುಟರ್ನ್ ಹೊಡೆದಿರುವ ಕಪಿಲ್ ಸಿಬಲ್ ಅವರು,

ಪೌರತ್ವ ತಿದ್ದುಪಡಿ ಮಸೂದೆ ಯೊಂದು ಅಸಾಂವಿಧಾನಿಕ ನಡೆ ಎಂದು ನಾನು ನಂಬುತ್ತೇನೆ. ಪ್ರತಿಯೊಂದು ರಾಜ್ಯಗಳು ತನ್ನ ವಿಧಾನಸಭಾ ಕಲಾಪದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಒಂದು ಬಿಲ್ಲನ್ನು ಪಾಸ್ ಮಾಡಿ ಅಂಗೀಕಾರ ಪಡೆದು ಕೊಳ್ಳಬಹುದು. ಒಂದು ವೇಳೆ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿರುವ ಕೇಸಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಯು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯು ಭಾರತೀಯ ಸಂವಿಧಾನಿಕ ಎಂದು ತೀರ್ಪು ನೀಡಿದರೇ ಆಗ ಮಾತ್ರ ಯಾವುದೇ ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದರೇ ತೊಂದರೆಯಾಗುತ್ತದೆ. ಆದರೆ ಅಲ್ಲಿಯವರೆಗೂ ಹೋರಾಟ ಮುಂದುವರಿಸಬೇಕು ಎಂದು ರಾಜ್ಯಗಳಿಗೆ ಸಲಹೆ ನೀಡಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟ್ ತೀರ್ಪು ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಬಂದಲ್ಲಿ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ವಾಸ್ತವ ಅಂಶಗಳನ್ನು ಗಮನಿಸಿದರೇ ಸುಪ್ರೀಂಕೋರ್ಟ್ ಲೋಕಸಭಾ ಹಾಗೂ ರಾಜ್ಯಸಭಾ ಸಂಸದರ ನಿರ್ಧಾರವನ್ನು ಎತ್ತಿ ಹಿಡಿಯುತ್ತದೆ ಎಂಬುದು ಎಲ್ಲರ ಲೆಕ್ಕಾಚಾರ.