ಸಂಸದ, ಪ್ರಭಾವಿ ನಾಯಕರಿಗೆ ಸ್ಕೆಚ್ ವಿಚಾರದಲ್ಲಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ, ಯುಟಿ ಖಾದರ್ ಹೇಳಿಕೆಗೆ ಚಪ್ಪಾಳೆ ಹೊಡೆದ ಬಿಜೆಪಿ ಕಾರ್ಯಕರ್ತರು !ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ರವರು ಇತ್ತೀಚೆಗೆ ಹಲವಾರು ವಿವಾದ ಗಳನ್ನು ಮೈಮೇಲೆ ಎಳೆದು ಕೊಂಡಿರುವುದು ಸುಳ್ಳಲ್ಲ. ತಾವು ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು, ಅದರಲ್ಲಿಯೂ ಪುಲ್ವಾಮಾ ಪ್ರತೀಕಾರಕ್ಕೆ ಸಂಭ್ರಮ ಪಡಬೇಡಿ ಇದರಿಂದ ಒಂದು ಕೋಮಿನ ಜನರಿಗೆ ನೋವಾಗುತ್ತದೆ ಎಂದು ದೇಶದ ವಿಚಾರದಲ್ಲಿ ಧರ್ಮವನ್ನು ಎಳೆದು ತಂದಿದ್ದರು.

ಇಲ್ಲಿರುವವರೆಲ್ಲರೂ ಭಾರತೀಯರು, ಶತ್ರು ರಾಷ್ಟ್ರದಲ್ಲಿ ನುಗ್ಗಿ ಭಾರತೀಯ ಸೇನೆ ಪರಾಕ್ರಮ ತೋರಿದರೇ ಇಲ್ಲಿನ ಜನರಿಗೆ ಯಾವ ಕಾರಣಕ್ಕೆ ನೋವಾಗುತ್ತದೆ ಎಂಬುದನ್ನು ಮಾತ್ರ ತಿಳಿಸಿ ಕೊಡಲಿಲ್ಲ. ಇಷ್ಟು ಸಾಲದು ಎಂಬಂತೆ ಸೈನಿಕರು ಎರಡು ಹೊತ್ತಿನ ಊಟಕ್ಕಾಗಿ ಸೇನೆ ಸೇರುತ್ತಾರೆ ಎಂದು ಮತ್ತೊಂದು ವಿವಾದ ಮೈಮೇಲೆ ಎಳೆದು ಕೊಂಡಿದ್ದರು, ಹೀಗೆ ಹಲವಾರು ವಿವಾದಗಳ ಬಳಿಕ ಈಗ ಅಧಿಕಾರ ಕಳೆದುಕೊಂಡ ಮೇಲು ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳುತ್ತಿದ್ದಾರೆ.

ಒಂದು ಕಡೆ ಯುಟಿ ಖಾದರ್ ಅವರು ನ್ಯಾಯದ ಪರ ಮಾತನಾಡಿ, ತಪ್ಪು ಯಾರೇ ಮಾಡಿದ್ದರೂ ತಪ್ಪು, ಸಂಘಟನೆ ಹಾಗೂ ಧರ್ಮದ ವಿಚಾರ ಇಲ್ಲಿ ಬರುವುದಿಲ್ಲ, ಕಾನೂನು ಎಲ್ಲರಿಗೂ ಒಂದೆ. ಪ್ರತಿಯೊಬ್ಬರ ಜೀವ ಮೌಲ್ಯಯುತ ಎಂದು ಪೊಲೀಸರ ನಿಲುವಿಗೆ ಬೆಂಬಲ ನೀಡಿ, ಇನ್ನು ಸರ್ಕಾರ ಯಾವ ಸಂಘಟನೆಗಳನ್ನು ನಿಷೇಧ ಮಾಡಬೇಕೋ ಬೇಡವೋ ಎಂಬ ನಿರ್ಧಾರ ತೆಗೆದುಕೊಳ್ಳಲಿದೆ ಅದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದಿದ್ದಾರೆ.ಮತ್ತೊಂದೆಡೆ ಕುಮಾರಸ್ವಾಮಿ ರವರು ಮಾತ್ರ ಮತ್ತೊಮ್ಮೆ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆ ವಿಚಾರದಲ್ಲಿ ಧರ್ಮವನ್ನು ಎಳೆದು ತಂದಿದ್ದಾರೆ.

ಒಂದು ಕಡೆ ಈ ಪ್ರಕರಣದಲ್ಲಿ ಎಲ್ಲರೂ ೨ ಸಂಘಟನೆಯ ಹೆಸರು ಹೇಳುತ್ತಿದ್ದರೆ, ಕುಮಾರಸ್ವಾಮಿ ರವರಿಗೆ ಮಾತ್ರ ಧರ್ಮದ ಹೆಸರು ಕೇಳಿಸಿದೆ, ಇದರ ಕುರಿತು ಮಾತನಾಡಿರುವ ಕುಮಾರಸ್ವಾಮಿ ರವರು ಕಿಡಿಗೇಡಿಗಳ ಕೃತ್ಯಕ್ಕೆ ಧರ್ಮದ ಹೆಸರು ಬಳಿಯಬಾರದು, ಯಾರೋ ಮಾಡಿದ ಕೃತ್ಯವನ್ನು ಒಂದು ಸಮುದಾಯದ ಮೇಲೆ ಹೇರಲಾಗುತ್ತಿದೆ, ಸತ್ಯಾಸತ್ಯತೆ ಅರಿತುಕೊಂಡು ಸರ್ಕಾರ ಕ್ರಮವನ್ನು ಕೈಗೊಳ್ಳಬೇಕು. ಇನ್ನು ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆಯವರು ಮಹಾನ್ ದೇಶಭಕ್ತ ರೇನು ಅಲ್ಲ, ಯುಗಪುರುಷರು ಅಲ್ಲ.

ಇವರಿಬ್ಬರು ಹುತಾತ್ಮ ರಾಗಲು ಹೋಗಿಲ್ಲ, ಇನ್ನು ಸಂಸದ ತೇಜಸ್ವಿ ಸೂರ್ಯ ರವರು ಬೆಂಗಳೂರಿಗೆ ನೀಡಿರುವ ಕೊಡುಗೆ ಏನು? ಇವರೇನು ಸಾಧನೆ ಮಾಡಿದ್ದಾರೆ ಎಂದು ಈ ಸ್ಕೆಚ್ ರೂಪಿಸಲಾಗಿದೆ, ಯಾರೋ ಕೆಲವರು ತಪ್ಪು ಮಾಡಿದ್ದಾರೆ ಎಂಬ ಕಾರಣಕ್ಕೆ ಸಮುದಾಯದ ಮೇಲೆ ತಪ್ಪು ಹೊರಿಸಬಾರದು ಎಂದಿದ್ದಾರೆ. ಆದರೆ ಇಲ್ಲಿ ಯಾರೊಬ್ಬರೂ ಯಾವುದೇ ಧರ್ಮವನ್ನು ಟೀಕೆ ಮಾಡುತ್ತಿಲ್ಲ, ಬದಲಾಗಿ ಪ್ರಕರಣದ ಕುರಿತು SDPI ಸಂಘಟನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಸಾಮಾನ್ಯ ಜ್ಞಾನ ಕೂಡ ಕುಮಾರಸ್ವಾಮಿ ರವರಿಗೆ ಇಲ್ಲ ಎಂದು ಬಿಜೆಪಿ ಕಾರ್ಯಕರ್ತರು ಟೀಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಓಲೈಕೆ ‌ ರಾಜಕಾರಣ ಮಾಡುವ ಅಗತ್ಯವೇನಿದೆ, ನೀವು ಇಲ್ಲಿ ಯಾವ ಸಮುದಾಯದ ಬಗ್ಗೆ ಮಾತನಾಡುತ್ತಿದ್ದೀರಿ ನೋಡಿ ಅದೇ ಸಮುದಾಯದ ನಾಯಕರು (ಯುಟಿ ಖಾದರ್) ಕೂಡ ತಪ್ಪು ಯಾರು ಮಾಡಿದರೂ ತಪ್ಪು ಎಂದಿದ್ದಾರೆ ಎಂದು ಕುಮಾರಸ್ವಾಮಿ ರವರಿಗೆ ತಿರುಗೇಟು ನೀಡಿದ್ದಾರೆ.

Post Author: Ravi Yadav