ಕಾಂಗ್ರೆಸ್ ಗೆ ಸೆಡ್ಡು ಹೊಡೆದ ಸಂಜಯ್! ಮತ್ತಷ್ಟು ಬಿಗಡಾಯಿಸಿದ ಮೈತ್ರಿ ! ಕಾಂಗ್ರೆಸ್ ಸಚಿವನಿಂದ ಬಂತು ಖಡಕ್ ಎಚ್ಚರಿಕೆ ! ಇಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವಂತೆ ಶಿವಸೇನಾ ಹಾಗೂ ಕಾಂಗ್ರೆಸ್ ಪಕ್ಷಗಳ ಸಿದ್ಧಾಂತವು ವಿರುದ್ಧವಾಗಿರುವ ಕಾರಣ ಮೈತ್ರಿ ಮಾಡಿಕೊಳ್ಳುವ ಮುನ್ನ ಕಾಂಗ್ರೆಸ್ ಪಕ್ಷ ಶಿವಸೇನಾ ಪಕ್ಷಕ್ಕೆ ಹಲವಾರು ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿಯೂ ಪ್ರಮುಖವಾಗಿ ಹಿಂದುತ್ವ ಹಾಗೂ ವೀರ ಸಾರ್ವರ್ಕರ್ ರವರ ಬಗ್ಗೆ ತಮ್ಮ ನಿಲುವುಗಳನ್ನು ಬಹಿರಂಗವಾಗಿ ಘೋಷಣೆ ಮಾಡಿದಂತೆ ಶಿವಸೇನಾ ಮೇಲೆ ಒತ್ತಡ ಹೇರಿತ್ತು.

ಇದಾದ ಬಳಿಕ ಸುಮ್ಮನಾಗಿದ್ದ ಶಿವಸೇನಾ ಪಕ್ಷವು ಕೆಲವು ದಿನಗಳ ಹಿಂದೆ ವೀರ ಸಾವರ್ಕರ್ ಅವರ ಕುರಿತು ಕಾಂಗ್ರೆಸ್ ಪಕ್ಷ ಧ್ವನಿಯೆತ್ತಿದ ಕಾರಣ ನಾವು ನಿಮ್ಮೆಲ್ಲರ ನಾಯಕರನ್ನು ಗೌರವಿಸುತ್ತೇವೆ. ಮಹಾತ್ಮ ಗಾಂಧಿ, ನೆಹರು ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರನ್ನು ಇನ್ನು ಮುಂದೆ ಗೌರವಯುತವಾಗಿ ನೋಡುತ್ತೇವೆ. ಆದರೆ ದಯವಿಟ್ಟು ಯಾರೂ ವೀರ್ ಸಾವರ್ಕರ್ ರವರ ವಿಷಯಕ್ಕೆ ಬರಬೇಡಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿತ್ತು. ಇದಾದ ಬಳಿಕ ಇತ್ತೀಚೆಗೆ ಶಿವಸೇನಾ ಪಕ್ಷದ ಮೇಲೆ ಸಹೋದರನಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಅಸಮಾಧಾನ ಗೊಂಡಿರುವ ಸಂಜಯ್ ರಾವತ್ ರವರು ಭಾರತ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತು ಕಾಂಗ್ರೆಸ್ ಪಕ್ಷವನ್ನು ಕೆರಳಿಸುವಂತಹ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದ್ದು, ವೀರ ಸಾರ್ವರ್ಕರ್ ರವರ ಕುರಿತು ಬಹಿರಂಗವಾಗಿ ಹೇಳಿಕೆ ನೀಡಲು ಆರಂಭಿಸಿದ್ದಾರೆ.

ಇದರಿಂದ ವಿವಾದ ಮತ್ತಷ್ಟು ಭುಗಿಲೆದ್ದಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್ ರವರು ವೀರ್ ಸಾವರ್ಕರ್ ಅವರನ್ನು ವಿರೋಧಿಸುವವರು ತಾಕತ್ತಿದ್ದರೇ ಎರಡು ದಿನಗಳ ಕಾಲ ಕೇವಲ ಎರಡು ದಿನಗಳ ಕಾಲ ಅಂಡಮಾನ್ ಜೈಲಿಗೆ ಹೋಗಿ ಬನ್ನಿ, ಆಗ ಅವರಿಗೆ ಅರ್ಥವಾಗುತ್ತದೆ ವೀರ ಸಾವರ್ಕರ್ ಅವರು ಯಾರು ಎಂದು ಎಂದು ಮತ್ತೊಮ್ಮೆ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಇವರ ಈ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಅಸಮಾಧಾನ ಗೊಂಡಿದ್ದು, ಕಾಂಗ್ರೆಸ್ ಪಕ್ಷದ ಶಾಸಕ ಹಾಗೂ ಸಚಿವ ನಿತಿನ್ ರೌತ್ ರವರು, ಶಿವಸೇನಾ ಪಕ್ಷವು ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾಗ ಬಿಜೆಪಿ ಪಕ್ಷದ ವಿರುದ್ಧ ಮಾತನಾಡಿದರೇ ಬಿಜೆಪಿ ಪಕ್ಷ ಸುಮ್ಮನೆ ಕೂರುತ್ತಿತ್ತು. ಆದರೆ ನಾವು ಸುಮ್ಮನೆ ಕೊರುತ್ತೇವೆ ಎಂದು ಅಂದು ಕೊಂಡರೇ ಅದು ಸಾಧ್ಯವಿಲ್ಲ, ತಕ್ಕ ಉತ್ತರ ನೀಡುತ್ತೇವೆ, ಇಂದಿರಾಗಾಂಧಿ ನಮ್ಮ ನಾಯಕಿ ಹಾಗೂ ಆದರ್ಶ. ಇಂದಿರಾಗಾಂಧಿ ಸೇರಿದಂತೆ ಯಾವುದೇ ರೀತಿಯ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ಹೇಳಿಕೆ ನೀಡಿದರೇ ಸುಮ್ಮನೆ ಕೂರಲು ಸಾಧ್ಯವೇ ಇಲ್ಲ ಎಂದು ಕಠಿಣ ಮಾತುಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.

Post Author: Ravi Yadav