ಮೋದಿ ಹಾಗೂ ಅಮಿತ್ ಶಾ ಕುರಿತು ತಲ್ಲಣ ಸೃಷ್ಟಿಸುವಂತಹ ಹೇಳಿಕೆ ನೀಡಿದ ರತನ್ ಟಾಟಾ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರ ಜೋಡಿ ಇದೀಗ ದೇಶದಲ್ಲಿ ಹಲವಾರು ಕಠಿಣ ಕಾನೂನುಗಳನ್ನು ಜಾರಿ ಮಾಡುತ್ತಿದೆ. ಒಂದೆಡೇ ಇವರು ಸ್ಪಷ್ಟವಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ ಕಾನೂನುಗಳನ್ನು ಜಾರಿ ಮಾಡುತ್ತಿರುವ ಕಾರಣ ಹಲವಾರು ಜನ ಬೆಂಬಲ ಸೂಚಿಸಿದರೇ ಇನ್ನುಳಿದವರು ಮೋದಿ ಹಾಗೂ ಅಮಿತ್ ಷಾ ರವರ ನಿರ್ಧಾರಗಳಿಗೆ ವಿರುದ್ಧವಾಗಿದ್ದಾರೆ.

ಅದರಲ್ಲಿಯೂ ಇತ್ತೀಚೆಗೆ ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆ ಭಾರಿ ಸದ್ದು ಮಾಡುತ್ತಿದೆ. ಕೆಲವು ರಾಜಕೀಯ ಪಕ್ಷಗಳು ಇನ್ನುಳಿದ ರಾಜ್ಯಗಳ ಮುಖ್ಯ ಮಂತ್ರಿಗಳನ್ನು ಸೇರಿಸಿಕೊಂಡು ಈಗಾಗಲೇ ಭಾರತ ಸಂವಿಧಾನದ ಅಧಿಕೃತ ಕಾನೂನಾಗಿ ಮಾರ್ಪಟ್ಟಿರುವ ಪೌರತ್ವ ತಿದ್ದುಪಡಿ ಮಸೂದೆ ಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದು ಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ, ಇನ್ನೊಂದೆಡೆ ಯಾವುದೇ ಕಾರಣಕ್ಕೂ ಯಾವುದೇ ಮಸೂದೆಗಳನ್ನು ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಖಡಕ್ ತಿರುಗೇಟು ನೀಡಿದೆ. ಹೀಗಿರುವಾಗ ದೇಶದ ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರತನ್ ಟಾಟಾ ರವರು ರಾಜಕೀಯವಾಗಿ ಇದೀಗ ಮೋದಿ ಹಾಗೂ ಅಮಿತ್ ಶಾ ರವರ ಜೋಡಿಯ ಕುರಿತು ಮಾತನಾಡಿದ್ದಾರೆ.

ಹೌದು, ರತನ್ ಟಾಟಾ ರವರು ನಮ್ಮ ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿಗಳು ಸೇರಿದಂತೆ ಇನ್ನುಳಿದ ಹಲವಾರು ಸರ್ಕಾರದ ಇತರ ಸದಸ್ಯರು ಭಾರತಕ್ಕೆ ಬೇಕಾದ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದಾರೆ. ಇದು ನಮ್ಮ ಬಳಿ ಮಾತ್ರ ಇದೆ ಇದಕ್ಕೆ ನಾವು ಹೆಮ್ಮೆಪಡಬೇಕು, ಹಾಗೂ ಸ್ಪಷ್ಟವಾದ ದೃಷ್ಟಿಕೋನ ವಿರುವ ಸರ್ಕಾರವನ್ನು ಎಲ್ಲರೂ ಬೆಂಬಲಿಸ ಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಮತ್ತೊಮ್ಮೆ ರತನ್ ಟಾಟಾ ರವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣವನ್ನು ಸೃಷ್ಟಿಸಿದ್ದು ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯ ಗಳನ್ನು ಹೊರ ಹಾಕುತ್ತಿದ್ದಾರೆ. ನೋಡಿದಿರಲ್ಲ ರತನ್ ಟಾಟಾರವರ ಹೇಳಿಕೆ, ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav