ಕೇಜ್ರಿವಾಲ್ ರವರಿಗೆ ಶುರುವಾಗಿದೆ ಹೊಸ ತಲೆನೋವು ! ದಿನೇ ದಿನೇ ಹೆಚ್ಚುತ್ತಿದೆ ಗಂಭೀರ್ ಹವಾ ! ಸರ್ಕಾರಿ ಸೌಲಭ್ಯಗಳನ್ನು ಹಿಂತಿರುಗಿಸಿ ಎಂದ ಆಪ್ ಪಕ್ಷಕ್ಕೆ ಗೌತಮ್ ಗಂಭೀರ್ ತಿರುಗೇಟು ನೀಡಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ರಾಜಕೀಯಕ್ಕೆ ಬರುವ ಮುನ್ನ ಕ್ರಿಕೆಟ್ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದು ಕೊಂಡು ತದನಂತರ ರಾಜಕೀಯಕ್ಕೆ ಬಂದು ಯಶಸ್ವಿಯಾಗಿ ಮೊದಲ ಚುನಾವಣೆಯಲ್ಲಿ ಗೆದ್ದು ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವ ಗೌತಮ್ ಗಂಭೀರ್ ಅವರು ಇದೀಗ ದೆಹಲಿಯಲ್ಲಿ ಕೇಜ್ರಿವಾಲ್ ಹಾಗೂ ಆಪ್ ಪಕ್ಷಕ್ಕೆ ಹೊಸ ತಲೆ ನೋವಾಗಿ ಪರಿಣಮಿಸಿದ್ದಾರೆ.

ಮೊದಲಿನಿಂದಲೂ ಸಮಾಜಸೇವೆಯಲ್ಲಿ ಹೆಸರು ಮಾಡಿರುವ ಗೌತಮ್ ಗಂಭೀರ್ ಅವರು ಇತ್ತೀಚೆಗೆ ದೆಹಲಿಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಗಾಳಿ ಸುದ್ದಿಕರಣ ಘಟಕ ಸೇರಿದಂತೆ ಹಲವಾರು ಅಭಿವೃದ್ಧಿಯ ಕಾರ್ಯಗಳನ್ನು ನಡೆಸಿದ್ದಾರೆ. ಇದೇ ಗೌತಮ್ ಗಂಭೀರ್ ಅವರು ಇತ್ತೀಚೆಗೆ ದೇಶದಲ್ಲಿ ಬಡವರಿಗೆ ಮಾತ್ರ ಸರ್ಕಾರಿ ಯೋಚನೆಗಳು ಉಚಿತವಾಗಿ ದೊರಕಲಿ, ಉಳಿದ ಜನರು ಸರ್ಕಾರಿ ಯೋಜನೆಗಳನ್ನು ಬಳಸಿಕೊಂಡರೂ ಪರವಾಗಿಲ್ಲ, ಆದರೆ ಸಾಮರ್ಥ್ಯವುಳ್ಳ ಜನರು ಅಲ್ಪ ಮೊತ್ತವನ್ನು ಸರ್ಕಾರಕ್ಕೆ ಮರು ಪಾವತಿ ಮಾಡಿದರೇ ಇದರಿಂದ ಮತ್ತಷ್ಟು ಬಡವರಿಗೆ ಸಹಾಯ ಮಾಡಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆಮ್ ಆದ್ಮಿ ಪಕ್ಷ ಗೌತಮ್ ಗಂಭೀರ್ ಅವರು ಬಡವರಿಗೆ ಯಾವುದೇ ಉಚಿತ ಯೋಜನೆ ನೀಡಬಾರದು ಎಂದು ಆಗ್ರಹ ಮಾಡುತ್ತಿದ್ದಾರೆ, ಇದು ಬಡವರಿಗೆ ವಿರುದ್ಧವಾಗಿದೆ.

ಒಂದು ವೇಳೆ ಅದೇ ನಿಜವಾಗಿದ್ದಲ್ಲಿ ಸಂಸದರಾಗಿರುವ ಗೌತಮ್ ಗಂಭೀರ್ ಅವರು 50,000 ವಿದ್ಯುತ್ ಯೂನಿಟ್ ಗಳು ಸೇರಿದಂತೆ ಇನ್ನುಳಿದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ವಾಪಸ್ಸು ನೀಡಲಿ ಎಂದು ಸವಾಲು ಎಸೆದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್ ಅವರು ನಾನು ಬಡವರು ಉಚಿತ ಸೌಲಭ್ಯ ನೀಡಬೇಡಿ ಎಂದು ಹೇಳಿಲ್ಲ, ಬದಲಾಗಿ ಕೆಲವೊಂದು ಸೌಲಭ್ಯಗಳನ್ನು ಅಲ್ಪ ಮೊತ್ತವನ್ನು ನೀಡಿ ಪಡೆಯುವಂತಹ ಸಾಮರ್ಥ್ಯ ಹೊಂದಿರುವಂತಹ ಸಾರ್ವಜನಿಕರಿಗೆ ಸರ್ಕಾರ ಅಲ್ಪ ಮೊತ್ತವನ್ನು ವಿಧಿಸಿದರೆ ಸೂಕ್ತ ಎಂದಿದ್ದೆ. ಅಷ್ಟೇ ಅಲ್ಲದೆ ನಾನು ಸಂಸದ ನಾಗಿರುವ ಕಳೆದ ಎಂಟು ತಿಂಗಳಿಂದ ಯಾವುದೇ ಸರ್ಕಾರಿ ಸೌಲಭ್ಯವನ್ನು ಪಡೆದುಕೊಂಡಿಲ್ಲ,ಅಷ್ಟೇ ಅಲ್ಲದೇ ನಾನು ನಿಮ್ಮ ಮುಖ್ಯಮಂತ್ರಿಯ ರೀತಿ ತೆರಿಗೆ ಹಣವನ್ನು ನನ್ನ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ರವರಿಗೆ ನೇರ ತಿರುಗೇಟು ನೀಡಿದ್ದಾರೆ. (ಸರ್ಕಾರಿ ಹಣವನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡ ಆರೋಪವನ್ನು ಕೇಜ್ರಿವಾಲ್ ಹೊತ್ತಿಕೊಂಡಿದ್ದಾರೆ).

Post Author: Ravi Yadav