ಕಾಂಗ್ರೆಸ್ ಮುಂದೆ ಬಹಿರಂಗವಾಗಿ ಮಂಡಿಯೂರಿದ ಶಿವಸೇನಾ ನಾಯಕ ಸಂಜಯ್ ರಾವತ್ ! ಶಿವಸೇನ ಪಕ್ಷದ ನಿಲುವಿನ ಬಗ್ಗೆ ಸಂಜಯ್ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನಾ ಪಕ್ಷವು ನಿಮಗೆಲ್ಲರಿಗೂ ತಿಳಿದಿರುವಂತೆ ಬಿಜೆಪಿ ಪಕ್ಷದ ಜೊತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮೈತ್ರಿಯನ್ನು ತೊರೆದುಕೊಂಡು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಿದೆ. ಕೇವಲ ರಾಜ್ಯದಲ್ಲಷ್ಟೇ ಅಲ್ಲದೇ ರಾಷ್ಟ್ರಮಟ್ಟದಲ್ಲಿ ಎನ್ಡಿಎ ಮೈತ್ರಿ ಕೂಟದಿಂದ ಶಿವಸೇನ ಪಕ್ಷ ಹೊರ ಬಂದಿತ್ತು.

ಅಲ್ಲಿ ರಾಜೀನಾಮೆಯ ಅವಶ್ಯಕತೆ ಇಲ್ಲದೇ ಇದ್ದರೂ ತನ್ನ ಸಹೋದರನಿಗೆ ಸಚಿವ ಸ್ಥಾನ ನೀಡಿ ರಾಜಕೀಯದಲ್ಲಿ ಭದ್ರಪಡಿಸಲು ತಮ್ಮ ಸಂಸದ ಸ್ಥಾನಕ್ಕೆ ಅನವಶ್ಯಕವಾಗಿ ಸಂಜಯ್ ರಾವತ್ ರಾಜೀನಾಮೆ ನೀಡಿ, ಶಿವಸೇನಾ ಪಕ್ಷವನ್ನು ಬಿಜೆಪಿ ಪಕ್ಷದ ಜೊತೆ ಮೈತ್ರಿ ತೊರೆಯಲು ಪ್ರಮುಖ ಕಾರಣವೆನಿಸಿ ಕಾಂಗ್ರೆಸ್ ಹಾಗೂ ಎಂಸಿಪಿ ಪಕ್ಷಗಳ ನಡುವೆ ಮೈತ್ರಿ ಮಾಡಿಕೊಳ್ಳಲು ಪ್ರಸ್ತಾಪವಿಟ್ಟು ಯಶಸ್ವಿಯಾಗಿದ್ದರು, ಆದರೆ ಸಹೋದರನಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅದರ ಬಗ್ಗೆ ಈಗ ಮಾತು ಬೇಡ. ಇದಾದ ನಂತರ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡರೂ ಕೂಡ ರಾಷ್ಟ್ರ ಮಟ್ಟದಲ್ಲಿ ಯುಪಿಎ ಮೈತ್ರಿಕೂಟಕ್ಕೆ ಶಿವಸೇನಾ ಪಕ್ಷ ಇಲ್ಲಿಯವರೆಗೂ ಸೇರಿಕೊಂಡಿಲ್ಲ. ಇದರ ಬಗ್ಗೆ ಸಂಜಯ್ ರಾವತ್ ಅವರನ್ನು ಪ್ರಶ್ನೆ ಮಾಡಿದಾಗ ಸಂಜಯ್ ರಾವತ್ ರವರು ಒಂದು ಕ್ಷಣ ಎಲ್ಲರೂ ದಂಗಾಗುವಂತಹ ಉತ್ತರ ನೀಡಿದರು. ಇವರ ಈ ಮಾತುಗಳು ಇದೀಗ ಟ್ರೆಂಡಿಂಗ್ ಆಗಿದ್ದು, ಎಲ್ಲರೂ ಟೀಕೆಗಳ ಬಾಣಗಳನ್ನು ಸುರಿಸಿದ್ದಾರೆ.

ಹೌದು ಇದೀಗ ಮಾತನಾಡಿರುವ ಸಂಜಯ್ ರವರು, ಯುಪಿಎ ಮೈತ್ರಿಕೂಟಕ್ಕೆ ನಮಗೆ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ. ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ ಕಡೆಯಿಂದ ನಮ್ಮ ಜೊತೆ ರಾಷ್ಟ್ರಮಟ್ಟದಲ್ಲಿ ಕೈಜೋಡಿಸಿ ಎಂಬ ಪ್ರಸ್ತಾವನೆ ಕೇಳಿಬಂದಿಲ್ಲ, ಆದರೂ ಕೂಡ ಇನ್ನೂ ಮುಂದೆ ದೇಶದ ಒಳಿತಿಗಾಗಿ ಕಾಂಗ್ರೆಸ್ ಪಕ್ಷ ರಾಷ್ಟ್ರೀಯವಾಗಿ ಯಾವುದೇ ನಿರ್ಧಾರ ಕೈಗೊಂಡರೂ ಶಿವಸೇನ ಪಕ್ಷವು ಕಾಂಗ್ರೆಸ್ ಪಕ್ಷದ ಪರವಾಗಿ ನಿಂತು ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆಯಲಿದೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ವಿಷಯಗಳ ಆಧಾರಿತದ ಮೇಲೆ ಬೆಂಬಲ ನೀಡುವುದನ್ನು ನೋಡಿದ್ದೇವೆ ಆದರೆ ವಿಷಯದ ಬಗ್ಗೆ ಅರಿವೇ ಇಲ್ಲದೆ ಯಾವುದೇ ವಿಷಯವಾದರೂ ಬೆಂಬಲ ನೀಡುತ್ತೇವೆ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.