ದಿಗ್ವಿಜಯ್ ಸಿಂಗ್ ಗೆ ಹಾಗೂ ಕಾಂಗ್ರೆಸ್ ಗೆ ಭಾರೀ ಮುಜುಗರ ! ಮೋದಿ ಪರ ನಿಂತು ಕಾಂಗ್ರೆಸ್ ಹಾಗೂ ಮುಸ್ಲಿಮರಲ್ಲಿ ದಿಗ್ವಿಜಯ್ ಸಹೋದರ ಮನವಿ ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಕೆಲವು ಕಡೆ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಈಗಾಗಲೇ ಪೌರತ್ವ ತಿದ್ದುಪಡಿ ಮಸೂದೆ ದೇಶದ ಅಧಿಕೃತ ಕಾನೂನಾಗಿ ಮಾರ್ಪಟ್ಟಿದೆ. ಇದರ ನಡುವೆಯೇ ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲಗಳು ಹೆಚ್ಚಾಗುತ್ತಿವೆ.

ಮೊದಲಿನಿಂದಲೂ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ತಿಳಿದುಕೊಳ್ಳದೆ ಪ್ರತಿಭಟನೆಗಳು ನಡೆಯುತ್ತಿವೆ ಎಂದು ವಾದ ಮಂಡಿಸುತ್ತಿದ್ದ ಬಿಜೆಪಿ ಪಕ್ಷಕ್ಕೆ ದಿನೇ ದಿನೇ ಬೆಂಬಲಗಳು ಹೆಚ್ಚಾಗುತ್ತಿದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿರುವ ಕಾಂಗ್ರೆಸ್ ಪಕ್ಷದಲ್ಲಿಯೂ ಪೌರತ್ವ ತಿದ್ದುಪಡಿ ಮಸೂದೆಯನ್ನು ಹಲವಾರು ಶಾಸಕರು ಬೆಂಬಲಿಸಿದ್ದಾರೆ. ಗೋವಾ ರಾಜ್ಯದ ಕಾಂಗ್ರೆಸ್ ನಾಯಕರು ಪೌರತ್ವ ತಿದ್ದುಪಡಿ ಅಭಿಯಾನಕ್ಕೆ ಬೆಂಬಲ ಸೂಚಿಸಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ, ಮತ್ತೊಂದೆಡೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಕೂಡ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಧ್ವನಿಯೆತ್ತಿದ್ದರು. ಹೀಗಿರುವಾಗ ಮಾಜಿ ಮುಖ್ಯಮಂತ್ರಿ ಹಾಗೂ ಇಂದಿನ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ರವರ ಸಹೋದರ ಲಕ್ಷ್ಮಣ್ ಸಿಂಗ್ ರವರು ಇದೀಗ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಧ್ವನಿಯೆತ್ತಿದ್ದಾರೆ.

ದಯವಿಟ್ಟು ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಯಾರು ರಾಜಕೀಯವನ್ನು ಎಳೆದು ತರಬೇಡಿ, ಇದು ಒಂದು ಉತ್ತಮ ನಡೆ. ಈ ಕೂಡಲೇ ಮುಸ್ಲಿಮರು ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುವುದನ್ನು ನಿಲ್ಲಿಸಬೇಕು. ಹಲವಾರು ಮುಸ್ಲಿಮರು ಈಗಾಗಲೇ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ರಾಜಕೀಯವನ್ನು ಎಳೆದು ತರಬೇಡಿ ಎಂದು ಒತ್ತಾಯ ಮಾಡುತ್ತಿದ್ದಾರೆ, ನೀವು ಹಗ್ಗವನ್ನು ಹೇಳಿದಷ್ಟು ಮತ್ತಷ್ಟು ಬೆಳೆಯುತ್ತದೆ ಹಾಗೂ ಕೊನೆಯಲ್ಲಿ ತುಂಡಾಗುತ್ತದೆ ಎಂದು ಲಕ್ಷ್ಮಣ್ ಸಿಂಗ್ ರವರು ನೀಡಿದ್ದಾರೆ. ಇವರ ಬೆಂಬಲಕ್ಕೆ ಬಂದಿರುವ ಮತ್ತೊಬ್ಬ ಕಾಂಗ್ರೆಸ್ ಶಾಸಕ ಹರ್ದಿಪ್ ಸಿಂಗ್ ರವರು ಪಾಕಿಸ್ತಾನ ದೇಶದ ದುಖಿತ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಮೋದಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.

Post Author: Ravi Yadav