#CAA : ವಿಪಕ್ಷಗಳ ವಿರೋಧದ ನಡುವೆಯೇ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯಿಟ್ಟು ಯೋಗಿ ಆದಿತ್ಯನಾಥ್ ಸರ್ಕಾರ ಮಾಡಿದ್ದೇನು ಗೊತ್ತಾ?

#CAA : ವಿಪಕ್ಷಗಳ ವಿರೋಧದ ನಡುವೆಯೇ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯಿಟ್ಟು ಯೋಗಿ ಆದಿತ್ಯನಾಥ್ ಸರ್ಕಾರ ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಯೋಗಿ ಆದಿತ್ಯನಾಥ ರವರ ಕಾರ್ಯ ವೈಖರಿಯ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ದೇಶದಲ್ಲಿಯೇ ಉತ್ತಮ ಗುಣಮಟ್ಟದ ಆಡಳಿತವನ್ನು ಸುಧಾರಣೆ ಮಾಡುವಲ್ಲಿ ನಂಬರ್ ವನ್ ಮುಖ್ಯಮಂತ್ರಿ ಎಂದು ಹೆಸರು ಪಡೆದು ಕೊಂಡಿರುವ ಯೋಗಿ ಆದಿತ್ಯನಾಥ್ ಅವರು ಇದೀಗ ಮತ್ತೊಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಕೆಲವೇ ದಿನಗಳಲ್ಲಿ ಅನುಷ್ಠಾನ ಗೊಳಿಸಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಪೌರತ್ವ ತಿದ್ದುಪಡಿ ಮಸೂದೆ ಕುರಿತು ನರೇಂದ್ರ ಮೋದಿರವರ ಸರ್ಕಾರದ ವಿರುದ್ಧ ವಿಪಕ್ಷಗಳ ನಾಯಕರು ಕಿಡಿಕಾರಿದ್ದಾರೆ. ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾಗಬಾರದು ಎಂದು ವಿರೋಧ ವ್ಯಕ್ತಪಡಿಸಿದರೂ ಕೂಡ ಈಗಾಗಲೇ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಭಾರತದ ಸಂವಿಧಾನದ ಕಾನೂನಾಗಿ ಬದಲಾಯಿಸಿದೆ. ಹೀಗಿರುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರವರ ಸೂಚನೆಯ ಮೇರೆಗೆ ಉತ್ತರ ಪ್ರದೇಶದ ಸರ್ಕಾರದ ಅಧಿಕಾರಿಗಳು ದಶಕಗಳ ಹಿಂದೆ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದಿಂದ ವಲಸೆ ಬಂದು ಉತ್ತರ ಪ್ರದೇಶ ರಾಜ್ಯದಲ್ಲಿ ನೆಲೆಸಿರುವ ಬರೋಬ್ಬರಿ ಐವತ್ತು ಸಾವಿರ ನಿರಾಶ್ರಿತರನ್ನು ಗುರುತಿಸಿ ಅಧಿಕೃತ ಪಟ್ಟಿಯನ್ನು ಸಿದ್ಧಪಡಿಸಿದೆ.

ಇದೇ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಮೊದಲ ಹಂತದ ಪೌರತ್ವ ತಿದ್ದುಪಡಿ ಮಸೂದೆಯ ಪಟ್ಟಿಯಾಗಿ ಕಳುಹಿಸಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಉತ್ತರ ಪ್ರದೇಶದ ಒಟ್ಟು 19 ಜಿಲ್ಲೆಗಳಲ್ಲಿ ಈ ನಿರಾಶ್ರಿತರು ನೆಲೆಸಿರುವುದಾಗಿ ತಿಳಿದು ಬಂದಿದೆ. ಈ ಎಲ್ಲಾ ನಿರಾಶ್ರಿತರು ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳಲ್ಲಿ ಪ್ರತಿಕೂಲ ಆಡಳಿತದ ದೌರ್ಜನ್ಯದಿಂದ ಬೇಸತ್ತು ಭಾರತ ದೇಶಕ್ಕೆ ಆಶ್ರಯ ಹರಸಿಕೊಂಡು ವಲಸೆ ಬಂದಿದ್ದಾರೆ ಎಂದು ಅಧಿಕೃತ ವರದಿಯಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು, 50 ಸಾವಿರ ಜನರಿಗೆ ಪೌರತ್ವ ನೀಡಬೇಕು ಎಂದು ಮೋದಿ ಸರಕಾರವನ್ನು ಕೇಳಿಕೊಂಡಿದೆ. ಈ ಮೂಲಕ ಪೌರತ್ವ ತಿದ್ದುಪಡಿ ಮಸೂದೆ ಯಿಂದ ಯಾರೂ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಬದಲಾಗಿ ಪೌರತ್ವವನ್ನು ಪಡೆದು ಕೊಳ್ಳಲಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಪರೋಕ್ಷವಾಗಿ ಸಾರಿದೆ.