ಮಮತಾ ಹಾಗೂ ರಾಹುಲ್ಗೆ ಬಹಿರಂಗ ಸವಾಲು ಎಸೆದ ಅಮಿತ್ ಶಾ ! ಮತ್ತೊಮ್ಮೆ ಸಿಡಿದಿದ್ದು ಹೇಳಿದ್ದೇನು ಗೊತ್ತಾ??

ಮಮತಾ ಹಾಗೂ ರಾಹುಲ್ಗೆ ಬಹಿರಂಗ ಸವಾಲು ಎಸೆದ ಅಮಿತ್ ಶಾ ! ಮತ್ತೊಮ್ಮೆ ಸಿಡಿದಿದ್ದು ಹೇಳಿದ್ದೇನು ಗೊತ್ತಾ??

ಕಳೆದ ಕೆಲವು ದಿನಗಳ ಹಿಂದೆ ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಕಾರಣ ವಿರೋಧ ಪಕ್ಷಗಳು ಎಷ್ಟೇ ಪ್ರತಿಭಟನೆ ಮಾಡಿದರೂ ಇದೀಗ ಪೌರತ್ವ ತಿದ್ದುಪಡಿ ಮಸೂದೆ ದೇಶದ ಕಾನೂನಾಗಿ ಮಾರ್ಪಟ್ಟಿದೆ. ಆದ ಕಾರಣದಿಂದ ಒಂದಿಂಚು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದರು.

ಅದರಲ್ಲಿಯೂ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾದ ಮಮತಾ ಬ್ಯಾನರ್ಜಿ ರವರು ಹಾಗೂ ಪೌರತ್ವ ತಿದ್ದುಪಡಿ ಮಸೂದೆ ಯನ್ನು ಕುರಿತು ದೇಶದ ಹಲವಾರು ಕಡೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಅಮಿತ್ ಶಾ ರವರು ಮಧ್ಯ ಪ್ರದೇಶದ ಗ್ಯಾರಿಸನ್ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಜಾಗೃತಿ ಸಮಾವೇಶ ದಲ್ಲಿ ಮಾತನಾಡಿ ಎರಡು ಪಕ್ಷಗಳಿಗೆ ಬಹಿರಂಗ ಸವಾಲು ಎಸೆದಿದ್ದಾರೆ. ಮತ್ತೊಮ್ಮೆ ತಮ್ಮ ಮಾತನ್ನು ಪುನರುಚ್ಚರಿಸಿರುವ ಅಮಿತ್ ಶಾ ರವರು ಯಾವುದೇ ಕಾರಣಕ್ಕೂ ಯಾರೇ ವಿರೋಧ ಮಾಡಿದರೂ ಪೌರತ್ವ ತಿದ್ದುಪಡಿ ಮಸೂದೆಯನ್ನು ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಮಾತನ್ನು ಮುಂದುವರಿಸಿರುವ ಅಮಿತ್ ಶಾ ರವರು ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಯವರು ಪೌರತ್ವ ತಿದ್ದುಪಡಿ ಮಸೂದೆ ಯಿಂದ ಭಾರತೀಯ ಮುಸ್ಲಿಮರು ಪೌರತ್ವ ಕಳೆದು ಕೊಳ್ಳುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ, ಇದರಿಂದ ಭಾರತೀಯ ಅಲ್ಪಸಂಖ್ಯಾತರಿಗೆ ತೊಂದರೆ ಯುಂಟಾಗುತ್ತದೆ ಎಂದು ಜನರಲ್ಲಿ ಭೀತಿಯನ್ನು ಉಂಟು ಮಾಡುತ್ತಿದ್ದಾರೆ. ಈ ಎರಡು ನಾಯಕರು ಅಥವಾ ಯಾರೇ ಆಗಲಿ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಭಾರತ ದೇಶದ ಪ್ರಜೆಗಳ ಪೌರತ್ವವನ್ನು ಕಳೆದು ಕೊಳ್ಳಲಿರುವ ಕೇವಲ ಒಂದು ಅಂಶವನ್ನು ತೋರಿಸಿದರೆ ನಾವು ಪೌರತ್ವ ತಿದ್ದುಪಡಿ ಮಸೂದೆಯನ್ನು ವಾಪಸ್ಸು ತೆಗೆದುಕೊಳ್ಳಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ.