ಭಾರತದ ಒಳಗೆ ಅಕ್ರಮ ನುಸುಳುವಿಕೆ ತಡೆಯಲು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಮೋದಿ ಸರ್ಕಾರ ! ಕೇಂದ್ರ ಸಚಿವಾಲಯ ಹೊರಡಿಸಿದ ಆದೇಶ ಏನು ಗೊತ್ತಾ?

ಭಾರತದ ಒಳಗೆ ಅಕ್ರಮ ನುಸುಳುವಿಕೆ ತಡೆಯಲು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಮೋದಿ ಸರ್ಕಾರ ! ಕೇಂದ್ರ ಸಚಿವಾಲಯ ಹೊರಡಿಸಿದ ಆದೇಶ ಏನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಇತ್ತೀಚೆಗೆ ಬಾಂಗ್ಲಾ ದೇಶದ ಗಡಿಯಿಂದ ಅಕ್ರಮವಾಗಿ ಹಲವಾರು ಜನ ನುಸುಳಲು ಪ್ರಯತ್ನ ಪಡುತ್ತಿದ್ದಾರೆ. ಅಕ್ರಮ ವಲಸಿಗರ ಈ ನಡೆ ಭಾರತೀಯ ಸೇನೆಗೆ ಬಹು ದೊಡ್ಡ ಸವಾಲನ್ನು ತಂದಿಟ್ಟಿದೆ. ಗಡಿಯುದ್ದಕ್ಕೂ ತಂತಿ ಬೇಲಿಗಳು ಇದ್ದರೂ ಕೂಡ ವಲಸಿಗರು ತಂತಿ ಬೇಲಿಗಳನ್ನು ಕಟ್ ಮಾಡಿ, ಅಥವಾ ಬೇಲಿಗಳನ್ನು ಇತರರ ಸಹಾಯ ಪಡೆದು ಹಾರಿಕೊಂಡು ಭಾರತದ ಒಳಗೆ ಕಾಲಿಡುತ್ತಿದ್ದಾರೆ.

ಇದನ್ನು ಗಮನಿಸಿದ ಕೇಂದ್ರ ರಕ್ಷಣಾ ಸಚಿವಾಲಯವು ಭಾರತ ಹಾಗೂ ಬಾಂಗ್ಲಾ ದೇಶಗಳ ನಡುವೆ ಗಡಿಯಲ್ಲಿ ಹಲವಾರು ವರ್ಷಗಳ ಹಿಂದೆ ನಿರ್ಮಾಣ ವಾಗಿರುವ ಮುಳ್ಳಿನ ತಂತಿ ಹಾಗೂ ಬೇಲಿಗಳನ್ನು ಬದಲಾಯಿಸಿ, ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿರುವಂತಹ ಕತ್ತರಿಸಲಾಗದಂತಹ ಬೇಲಿಯನ್ನು ನಿರ್ಮಾಣ ಮಾಡಲು ಮುಂದಾಗಿದೆ. ಸದ್ಯಕ್ಕೆ ಈಗಿರುವ ಬೇಲಿಗಳ ಜಾಗದಲ್ಲಿಯೇ ಕಿತ್ತು ಅತ್ಯಾಧುನಿಕ ಬೇಲಿಗಳನ್ನು ಹಾಕಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಕುರಿತು ಕೇಂದ್ರ ರಕ್ಷಣಾ ಸಚಿವಾಲಯವು ಆದೇಶ ಹೊರಡಿಸಿದ್ದು ಮುಂದಿನ ದಿನಗಳಲ್ಲಿ ಭಾರತ ಹಾಗೂ ಬಾಂಗ್ಲಾ ದೇಶದ ಸಂಪೂರ್ಣ ಗಡಿಗೆ ವಿಸ್ತರಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.

ಇದೀಗ ಒಟ್ಟು 7 ಕಿಲೋ ಮೀಟರ್ ನಷ್ಟು ಗಡಿಯಲ್ಲಿ ಬರೋಬ್ಬರಿ 14 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಟೆಕ್ನಾಲಜಿ ಹೊಂದಿರುವಂತಹ ಬೇಲಿಯನ್ನು ನಿರ್ಮಾಣ ಮಾಡಲು ಮುಂದಾಗಿದ್ದು ಯಾವುದೇ ಅಸ್ತ್ರಗಳನ್ನು ಬಳಸಿಕೊಂಡರು ಕೂಡ ಬೇಲಿಗಳನ್ನು ಮುರಿಯುವುದು ಅಥವಾ ಇತರ ಅಸ್ತ್ರಗಳನ್ನು ಬಳಸಿಕೊಂಡು ಇದರ ಮೇಲೇರುವುದು ಅಸಾಧ್ಯದ ಮಾತು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಯೋಜನೆ ಸಂಪೂರ್ಣವಾಗಿ ಯಶಸ್ವಿ ಕಂಡು ಬಾಂಗ್ಲಾ ದೇಶಿಯರನ್ನು ತಡೆಯಲು ಯಶಸ್ವಿಯಾದಲ್ಲಿ ಇದೇ ಯೋಜನೆಯನ್ನು ಭಾರತ ಹಾಗೂ ಪಾಕಿಸ್ತಾನದ ನಡುವಿನ ಗಡಿಯಲ್ಲಿ ಜಾರಿಗೊಳಿಸಲು ಕೇಂದ್ರ ರಕ್ಷಣಾ ಇಲಾಖೆಯು ಉತ್ಸುಕವಾಗಿದೆ ಎಂಬುದನ್ನು ತಿಳಿಸಲಾಗಿದೆ.